ಮಳೆ ಇಷ್ಟಕ್ಕೆ ನಿಲ್ಲಲ್ಲ…!

0
48

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಅಕ್ಟೋಬರ್ 15 ರವರೆಗೂ ಮಳೆ ಮುಂದುವರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆ ಅಕಾಲಿಕ ಮಳೆ ಆಗುತ್ತಿದ್ದು, ಅದರಂತೆ ದಿನಾಂಕ 15 ನೇ ತಾರೀಖಿನ ತನಕ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ರಾಮನಗರ, ತುಮಕೂರಿನಲ್ಲಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಇನ್ನೂ ರಾಜ್ಯಾದ್ಯಂತ ಮಳೆಯ ಆರ್ಭಟ ಮತ್ತೆ ಶುರುವಾಗಿದ್ದು, ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯಿಂದಾಗಿ ಹಲವಡೆ ಸೇತುವೆಗಳು ಮುಳುಗಡೆಯಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ರಾಯಚೂರಿನಲ್ಲಿ ಮಳೆಗೆ ಹತ್ತಿ, ತೊಗರಿ ಸೇರಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿವೆ. ಇನ್ನೊಂದೆಡೆ ಮಳೆಯಿಂದ ತತ್ತರಿಸಿರುವ ಚಿತ್ರದುರ್ಗದ ಹೆಬ್ಬಾಳ್ ಗ್ರಾಮದ ಹೆಬ್ಬಾಳ್ ಕೆರೆ ಕೋಡಿಯೊಡೆದು ನೀರೆಲ್ಲಾ ಜಮೀನುಗಳಿಗೆ ನುಗ್ಗಿದೆ. ಇದೇ ಸಮಯದಲ್ಲಿ ಮನೆ ಮೇಲ್ಚಾವಣಿ ಕುಸಿಯುವುದನ್ನು ನೋಡಿದ ವೃದ್ಧೆಯೊಬ್ಬರು ಮೊಮ್ಮಕ್ಕಳನ್ನು ಬಚಾವ್ ಮಾಡಿದ ಘಟನೆಯೂ ನಡೆದಿದೆ. ಮಾತ್ರವಲ್ಲದೆ ನೀರಿನಲ್ಲಿ ನಾಲ್ವರು ಕೊಚ್ಚಿಹೋದ ಪ್ರಕರಣ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ ಸಚಿವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here