ರಾಜ್ಯ ರಾಜಧಾನಿ, ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ವರುಣನ ದರ್ಬಾರ್ ಮತ್ತೆ ಶುರುವಾಗಿದೆ.
ಕಳೆದ ಎರಡು ದಿನಗಳಿಂದ ಮಧ್ಯಾಹ್ನ, ಸಂಜೆ ನಗರದ ಬೇರೆ ಬೇರೆ ಕಡೆಗಳಲ್ಲಿ ಮಳೆ ಆಗುತ್ತಿದೆ.
ನಿನ್ನೆ ಸಂಜೆ, ರಾತ್ರಿ ಹಲವಾರು ಕಡೆಗಳಲ್ಲಿ ಮಳೆಯಾಗಿದೆ. ಎಚ್ ಎಸ್ ಆರ್ ಲೇಔಟ್ ನ ಎಂಪೈರ್ ಮುಂಭಾಗ ನೀರು ನಿಂತ ಪರಿಣಾಮ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.
ಜೆಸಿಬಿ ಮೂಲಕ ರಸ್ತೆಯಲ್ಲಿ ಮುಚ್ಚಲಾಗಿದ್ದ ಕಲ್ಲುತೆಗೆದು ಕಾಲುವೆಗೆ ನೀರು ಹೋಗುವಂತೆ ಮಾಡಲಾಯಿತು.
ಹೀಗೆ ನಗರದ ನಾನಾ ಕಡೆಗಳಲ್ಲಿ ಅವಾಂತರ ಆಗಿದೆ.