ಕನ್ನಡದಲ್ಲಿ ಮಾತಾಡಪ್ಪ ನೀನಿರೋದು ಕರ್ನಾಟಕದಲ್ಲಿ ಎಂದು ಹೇಳಿದಕ್ಕೆ ವ್ಯಕ್ತಿಯೊಬ್ಬ ಚಾಕುವಿನಿಂದ ಹಿರಿದ ಘಟನೆ ಬೆಂಗಳೂರು ನಗರದ ರಾಜಾಜಿನಗರ ಬಳಿಯ ನವರಂಗ ಬಾರ್ ಬಳಿ ನಡೆದಿದೆ.
ಗಣೆಶೋತ್ಸವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು ಗಾಯಾಳು ದೇವರಾಜ್ ಎಂಬಾತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಧರಣೇಂದ್ರ ಎಂಬಾತ ತನ್ನ ಗೆಳೆಯನ ಜೊತೆಯಲ್ಲಿ ತಮಿಳಿನಲ್ಲಿ ಮಾತಾನಾಡುತ್ತಿದ್ದದ್ದನ್ನು ಕಂಡ ದೇವರಾಜ್ ಆತನ ಬಳಿ ಧಾವಿಸಿ ಕನ್ನಡ ಮತಾಡಪ್ಪ ಕರ್ನಾಟಕದಲ್ಲಿದೀಯ ಕನ್ನಡ ಮಾತಾಡು ಎಂದಿದ್ದಕ್ಕೆ ಸಿಟ್ಟಾದ ಧರಣೀಂದ್ರ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ಸಂಬಂಧ ಆರೋಪಿ ಧರಣಿಂದ್ರನನ್ನು ರಾಜಾಜಿನಗರ ಪೊಲೀಸರು ವಶಪಡಿಸಿಕೊಂಡಿದ್ದು, ಕೊಲೆ ಯತ್ನ ಪ್ರಕರಣ ದಾಖಲು ಮಾಡಲಾಗಿದೆ.
POPULAR STORIES :
ಸರ್ಕಾರ ಬಿದ್ದರೂ 20ರ ನಂತರ ನೀರು ಬಿಡೆನು: ಸಿಎಂ ಸಿದ್ದರಾಮಯ್ಯ ಗುಡುಗು..!
ಚೀನಾ ತನ್ನ ದೇಶದ 6 ವರ್ಷದ ಮಕ್ಕಳನ್ನು ಭವಿಷ್ಯದ ಒಲಿಂಪಿಕ್ ದಿಗ್ಗಜರನ್ನು ಮಾಡಲು ಕೊಡುವ ಕಠಿಣ ತರಬೇತಿ..!
ತಿಂಗಳಲ್ಲಿ ಎರಡನೇ ಬಾರಿ ಪೆಟ್ರೊಲ್ ದರ ಏರಿಕೆ…!
ತಾಮ್ರದ ಪಾತ್ರೆಯಲ್ಲಿ ಕೂಡಿಟ್ಟ ನೀರನ್ನು ಸೇವಿಸುವುದು ಉತ್ತಮ ಯಾಕೆ..?
ಪತಂಜಲಿಯ ಸಿ.ಇ.ಒ ಆಚಾರ್ಯ ಬಾಲಕೃಷ್ಣ , ಈಗ ದೇಶದ ಅತ್ಯಂತ ಶ್ರೀಮಂತರಲ್ಲಿ ಒಬ್ಬರು..!
ಸಿರಿಯಾ ದೇಶದ ಮಹಿಳೆಯರನ್ನು ಲೈಂಗಿಕ ಗುಲಾಮಗಿರಿಯಿಂದ ರಕ್ಷಿಸಲು ಪಣ ತೊಟ್ಟು ನಿಂತ ದಿಟ್ಟ ಮಹಿಳೆ.