No menu items!
3 C
Munich
Friday, May 1, 2026

ರಿಲಾಯಾನ್ಸ್ ಜಿಯೋ- ಏರ್‍ಟೆಲ್ ಮಧ್ಯೆ ಕೋಲ್ಡ್ ವಾರ್…!

Must read

ಉಚಿತ ಡೆಟಾ ಮತ್ತು ಕರೆಗಳ ಮೂಲಕ ಎಲ್ಲರ ಮನೆ ಮಾತಾಗಿರುವ ರಿಲಾಯಾನ್ಸ್ ಜಿಯೋ 4-ಜಿ ಹಾಗೂ ಪ್ರಖ್ಯಾತ ಟೆಲಿಕಾಂ ಸಂಸ್ಥೆಗಳಲ್ಲಿ ಒಂದಾದ ಏರ್‍ಟೆಲ್ ಮಧ್ಯೆ ಇದೀಗ ವಾಕ್ಸಮರಗಳು ಆರಂಭಗೊಂಡಿದೆ. ಉಭಯ ಸಂಸ್ಥೆಗಳ ಮಧ್ಯೆ ಅರೋಪ ಹಾಗೂ ಪ್ರತ್ಯಾರೋಪಗಳ ಶೀತಲ ಸಮರ ಆರಂಭವಾಗಿದೆ..!
ಈ ಎರಡು ಸಂಸ್ಥೆಗಳ ಆರೋಪ ಪ್ರತ್ಯಾರೋಪಗಳು ಈಗ ತಾರಕಕ್ಕೇರಿದ್ದು, ಆರಂಭಗೊಂಡ ಕೆಲವೇ ದಿನಗಳಲ್ಲಿ ಜಿಯೋ ಕರೆಗಳು ವಿಫಲವಾಗುತ್ತಿರೋದು ದುರಾದೃಷ್ಟಕರ ಮತ್ತು ರಿಲಯಾನ್ಸ್ ಸಂಸ್ಥೆ ಗ್ರಾಹಕರ ದಿಕ್ಕು ತಪ್ಪಿಸುತ್ತಿದೆ ಎಂದು ಏರ್ಟೆಲ್ ಆರೋಪಿಸಿತ್ತು. ಅದಕ್ಕೆ ತಿರುಗೇಟು ನೀಡಿರುವ ರಿಲಯಾನ್ಸ್, ಜಿಯೋ ನೆಟ್‍ವರ್ಕ್‍ನಲ್ಲಿ ಯಾವುದೇ ಕರೆಗಳು ವಿಫಲವಾಗಲಿಲ್ಲ. ಜಿಯೋನಿಂದ ಕರೆ ಮಾಡುವ ಸಂದರ್ಭದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಅಡಚಣೆ ಉಂಟಾಗಿರೋದು ನಿಜ ಅಂತ ಹೇಳಿದೆ. ಜಿಯೊ ನಿಂದ ಜಿಯೋಗೆ ಕರೆ ಮಾಡುವ ಗ್ರಾಹಕರಿಗೆ ಹೆಚ್.ಡಿ ಗುಣಮಟ್ಟದಲ್ಲಿ ವಾಯ್ಸ್ ಸೇವೆ ನೀಡಲಾಗ್ತಾ ಇದೆ ಎಂದು ಹೇಳಿದೆ. ಇನ್ನು ಜಿಯೋನಲ್ಲಿ ಯಾವುದೇ ಕರೆಗಳನ್ನು ವಿಫಲವಾಗದಂತೆ ನೋಡಿಕೊಳ್ತಾ ಇದ್ದೆವೆ ಎಂದು ರಿಲಯಾನ್ಸ್ ಭರವಸೆ ನೀಡಿದೆ. ಬೇರೆ ನೆಟ್ವರ್ಕ್‍ಗಳಿಗೆ ಕರೆ ಮಾಡುವ ಸಂದರ್ಭದಲ್ಲಿ ಸಮಸ್ಯೆಯಾಗಿರೋದನ್ನ ನೇರವಾಗಿ ಒಪ್ಪಿಕೊಂಡಿರೋ ಜಿಯೋ ಸಂಸ್ಥೆ, ಪ್ರತಿ ದಿನ 2 ಕೋಟಿ ಗ್ರಾಹಕರ ಕರೆಗಳು ವಿಫಲವಾಗ್ತಾ ಇದೆ ಎಂದು ತಿಳಿಸಿದ್ದಾರೆ. ಈ ಮಧ್ಯೆ ಗ್ರಾಹಕರ ಎಂ.ಎನ್.ಪಿ ರಿಕ್ವೆಸ್ಟ್‍ಗಳನ್ನು ಬ್ಲಾಕ್ ಮಾಡ್ತಾ ಇರೋ ಏರ್‍ಟೆಲ್ ವಿರುದ್ದವೂ ರಿಲಯಾನ್ಸ್ ಜಿಯೋ ಕಿಡಿ ಕಾರಿದೆ.

Like us on Facebook  The New India Times

POPULAR  STORIES :

ಚೀನಾ ತನ್ನ ದೇಶದ 6 ವರ್ಷದ ಮಕ್ಕಳನ್ನು ಭವಿಷ್ಯದ ಒಲಿಂಪಿಕ್ ದಿಗ್ಗಜರನ್ನು ಮಾಡಲು ಕೊಡುವ ಕಠಿಣ ತರಬೇತಿ..!

ತಾಮ್ರದ ಪಾತ್ರೆಯಲ್ಲಿ ಕೂಡಿಟ್ಟ ನೀರನ್ನು ಸೇವಿಸುವುದು ಉತ್ತಮ ಯಾಕೆ..?

ಗ್ರೀನ್ ಟೀ ಹುಚ್ಚು ನಿಮಗೂ ಇದೆಯಾ?

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article