ಅಣ್ಣ-ತಂಗಿಯ ಬಂಧ ಬಿಡಿಸಲಾಗದ ಅನುಬಂಧ. ಈ ಪ್ರೀತಿಗೆ ಸರಿಸಾಟಿ ಯಾವುದೂ ಇಲ್ಲ. ಪ್ರೀತಿ, ಜಗಳ, ಒಡೆದಾಟ, ಬಡಿದಾಟ ಎಲ್ಲವೂ ಈ ಮಾಮೂಲಿ. ಈ ಸಂಬಂಧಕ್ಕೆ ಬೆಲೆಕಟ್ಟಲು ಸಾಧ್ಯವೇ ಇಲ್ಲ.
ತಂಗಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುವ ಹೊಣೆ ಅಣ್ಣನದ್ದು. ಇಂಥಾ ಅಣ್ಣನಿಗೆ ತಂಗಿ ರಕ್ಷೆ ಕಟ್ಟುತ್ತಾಳೆ ಇದೇ ರಕ್ಷಾ ಬಂಧನ.
ಶ್ರಾವಣ ಮಾಸದ ಹುಣ್ಣುಮೆಯಂದು ಈ ರಕ್ಷಾ ಬಂಧನ ಆಚರಿಸುತ್ತಾರೆ.
ಸಹೋದರಿ ಸಹೋದರಿನೆ ರಾಖಿ ಎಂಬ ಈ ರಕ್ಷೆಯನ್ನು ಕಟ್ಟಿ ತನ್ನ ಸಹೋದರನಿಗೆ ದೀರ್ಘಾಯುಷ್ಯ ಹಾಗೂ ಆರೋಗ್ಯ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾಳೆ. ಸಹೋದರ ಪ್ರತಿ ಹಂತದಲ್ಲೂ ತನ್ನ ಸಹೋದರಿಯ ರಕ್ಷಣೆ ನನ್ನದು ಎಂದು ಭರವಸೆ ನೀಡುತ್ತಾನೆ.
ರಕ್ಷಾ ಎಂದರೆ ರಕ್ಷಣೆ, ಬಂಧನ ಎಂದರೆ ಬಂಧ. ಎಂದೂ ಕೊನೆಗೊಳ್ಳದ, ಬಿಡಿಸಲಾಗದ ಬಂಧನದ ಸಂಕೇತ ರಕ್ಷಾಬಂಧನ.
ಸಹೋದರಿ ಮಾತ್ರವಲ್ಲದೆ ಇಂದು ಚಿಕ್ಕಮ್ಮ, ಅತ್ತಿಗೆ ಮತ್ತಿತರರು ಸಹ ರಾಖಿ ಕಟ್ಟುತ್ತಾರೆ.
ರಾಕ್ಷಸರ ವಿರುದ್ಧ ಹೋರಾಡುವ ಸಂದರ್ಭದಲ್ಲಿ ಇನ್ನೇನು ಇಂದ್ರ ಸೋಲುವ ಪರಿಸ್ಥಿತಿ ತಲುಪುತ್ತಾನೆ. ಆಗ ಬೃಹಸ್ಪತಿ ಹೇಳಿದಂತೆ ರೇಷ್ಮೆ ದಾರವನ್ನು ಪತ್ನಿ ಶಚಿದೇವಿಯಿಂದ ಕಟ್ಟಿಸಿಕೊಳ್ಳುತ್ತಾನೆ.ರಕ್ಷೆ ಕೈಗೆ ಕಟ್ಟಿದ ನಂತರ ವಿಜಯಲಕ್ಷ್ಮಿ ಇಂದ್ರನಿಗೆ ಒಲಿಯುತ್ತಾಳೆ ಅಸುರರ ಬಲಿಯಾಗುತ್ತೆ ಎಂದು ಪೌರಾಣಿಕ ಕಥೆಯಲ್ಲಿ ಪ್ರಸಂಗವೊಂದು ಹೇಳುತ್ತದೆ.
ಅದೇ ರೀತಿ ಇನ್ನೊಂದು ಕಥೆಯಲ್ಲಿ ದುಷ್ಟ ಶಿಶುಪಾಲನನ್ನು ಸಂಹರಿಸಲು, ತನ್ನ ಸುದರ್ಶನ ಚಕ್ರವನ್ನುಕೃಷ್ಣ ಕಳುಹಿಸಿರುತ್ತಾನೆ. ಅದು ಮರಳುವಾಗ ಕೃಷ್ಣನ ಕೈಗೆ ತಾಗಿ ರಕ್ತ ಸುರಿಯುತ್ತಿರುತ್ತದೆ. ಆಗ ದ್ರೌಪದಿ ತನ್ನ ಸೀರೆ ಅಂಚನ್ನು ಹರಿದು ಕೃಷ್ಣನ ಗಾಯಕ್ಕೆ ಕಟ್ಟುತ್ತಾಳಂತೆ.
ಒಂದರಲ್ಲಿ ಪತ್ನಿಯಿಂದ ಪತಿಗೆ ರಕ್ಷೆಯ ಸಂಕೇತವಾಗಿ ರೇಷ್ಮೆ ದಾರವನ್ನು ಕಟ್ಟಿದರೆ, ಮತ್ತೊಂದರಲ್ಲಿ ತಂಗಿಯಂತಿದ್ದ ಸಖಿ ದ್ರೌಪದಿಯಿಂದ ಕೃಷ್ಣ ಕೈಗೆ ದಾರವನ್ನು ಕಟ್ಟಿಸಿಕೊಳ್ಳುತ್ತಾನೆ. ಆದರೆ, ಎರಡರಲ್ಲಿಯೂ ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುವ ಉದ್ದೇಶವೇ ಇದ್ದು, ರಕ್ಷಣೆಗಾಗಿ ಕಟ್ಟುವ ವಿಶೇಷ ದಾರವೇ ಈ ರಕ್ಷೆ. ಇದನ್ನು ಪ್ರೀತಿಯಿಂದ, ಗೌರವದಿಂದ ತಂಗಿ ಅಣ್ಣನಿಗೆ ಮಾತ್ರವಲ್ಲ, ಪತ್ನಿ ಪತಿಗೂ ಕಟ್ಟಬಹುದು. ಆದರೆ, ಉದ್ದೇಶ ಮಾತ್ರ ದುಷ್ಟರ ಎದುರು ಶಿಷ್ಟರ ರಕ್ಷೆಯೇ ಆಗಿದೆ.
ಅಂದಹಾಗೆ ನಾಳೆ ರಕ್ಷಾಬಂಧನ.
ಎಲ್ಲರಿಗೂ ರಕ್ಷಾಬಂಧನದ ಶುಭಾಶಯಗಳು.