ಸ್ಯಾಂಡಲ್ ವುಡ್ ನಲ್ಲೀಗ ಮದುವೆ ಸಂಭ್ರಮ. ಮೊನ್ನೆ ಮೊನ್ನೆ ಚಿರಂಜೀವಿ ಸರ್ಜಾ ಮತ್ತು ಮೇಘನರಾಜ್ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಈಗ ಕಿರಿಕ್ ಪಾರ್ಟಿ ಜೋಡಿ ರಕ್ಷಿತ್ ಮತ್ತು ರಶ್ಮಿಕಾ ಮದುವೆಯಾಗಲಿದ್ದಾರೆ…!
ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ 2-3 ವರ್ಷ ಮದುವೆ ಆಗಲ್ಲ ಎಂದು ಹೇಳಿತ್ತು. ಆದರೆ , ಇದೀಗ ದಿಢೀರ್ ಮದುವೆಗೆ ಮುಂದಾಗಿದ್ದಾರೆ…!

ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ನಡೆಸಿಕೊಡುವ ಯಾರಿ ನಂ1 ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ ಭಾಗವಹಿಸಿದ್ದರು. ಸತ್ಯ ಅಥವಾ ಧೈರ್ಯ ಸುತ್ತಿನಲ್ಲಿ ರಕ್ಷಿತ್ ಸತ್ಯ ಆಯ್ಕೆ ಮಾಡಿಕೊಂಡರು. ಆಗ ಇನ್ನೊಂದು ವಾರದಲ್ಲಿ ಮದುವೆ ಆಗೋದರ ಬಗ್ಗೆ ರಶ್ಮಿಕಾ ಏನ್ ಹೇಳ್ತಾರೆ ಕೇಳಿ ಎಂದು ಶಿವಣ್ಣ ರಕ್ಷಿತ್‍ಗೆ ಹೇಳಿದ್ದರು.

ಆಗ ರಕ್ಷಿತ್ ಕಾರ್ಯಕ್ರಮದಲ್ಲೇ ರಶ್ಮಿಕಾಗೆ ಕರೆ ಮಾಡಿ ಮುಂದಿನ ವಾರ ದಿನಾಂಕ ಚೆನ್ನಾಗಿದೆ. ಅಲ್ಲದೇ ಮನೆಯಲ್ಲಿ ಮುಂದಿನ ವಾರನೇ ಮದುವೆ ಆಗುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದಾಗ, ರಶ್ಮಿಕಾ ಹಿಂದೆ ಮುಂದೆ ಯೋಚಿಸದೇ ಮದುವೆ ಆಗೋಣ ಎಂದು ರಕ್ಷಿತ್ ಶೆಟ್ಟಿಗೆ ತಿಳಿಸಿದ್ದಾರೆ.

ಶಿವಣ್ಣ ಕೊಟ್ಟಿರೋ ಡೇರ್ ಆಟಕ್ಕೆ ರಕ್ಷಿತ್, ರಶ್ಮಿಕಾ ಜೊತೆ ಫೋನಿನಲ್ಲಿ ಮಾತನಾಡಿದ್ದರಷ್ಟೇ…ಸದ್ಯಕ್ಕಂತೂ ಇವರ ಮದ್ವೆ ಇಲ್ಲ. ಇಬ್ಬರು ಸಿನಿಮಾದಲ್ಲಿ ಬ್ಯುಸಿ ಇದ್ದಾರೆ.






