ಕೆಜಿಎಫ್ ಅಡ್ಡಕ್ಕೆ ಬಾಹುಬಾಲಿ ರಾಣಿ ಶಿವಗಾಮಿ ಎಂಟ್ರಿ…
ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಚಿತ್ರ ಕೆಜಿಎಫ್. 50 ದಿನಗಳು ಪೂರೈಸಿ ಯಶಸ್ವಿಯಾಗಿ ಮುನ್ನುಗುತ್ತಿರುವ ಕೆಜಿಎಫ್ ಚಿತ್ರದ ಮುಂದುವರೆದ ಭಾಗದ ಚಿತ್ರೀಕರಣ ಬರುವ ಏಪ್ರಿಲ್ ತಿಂಗಳಿನಿಂದ ಶುರುವಾಗುತ್ತಿದೆ.
ಇನ್ನೂ ಬಾಲಿವುಡ್ ನಟ ಸಂಜಯ್ ದತ್ ಕೆಜಿಎಫ್ ಚಿತ್ರದಲ್ಲಿ ನಟಿಸಲಿದ್ದಾರೆ. ಇನ್ನು ದಕ್ಷಿಣ ಭಾರತದ ಖ್ಯಾತ ನಟಿ ರಮ್ಯಾ ಕೃಷ್ಣ ಕೂಡ ನಟಿಸಲಿದ್ದಾರಂತೆ. ಹೌದು, ನಟಿ ರಮ್ಯಕೃಷ್ಣ ಈ ಚಿತ್ರದಲ್ಲಿ ರಾಷ್ಟ್ರಪತಿ ಪಾತ್ರವನ್ನು ನಿಭಾಯಿಸಲಿದ್ದಾರೆ ಎನ್ನಲಾಗಿದೆ. ಸಂಜಯ್ ದತ್ ಹಾಗೂ ರಮ್ಯಾ ಕೃಷ್ಣ ಸೇರಿದಂತೆ ಹಲವು ಘಟಾನುಘಟಿಗಳು ಚಿತ್ರದಲ್ಲಿ ಕೆಲಸ ಮಾಡುತ್ತಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನೂ ಇನ್ನೂ ಹೆಚ್ಚು ಮಾಡಿದೆ.
ಎಲ್ಲವೂ ಅಂದುಕೊಂಡಂತೆ ಆದರೆ ಅಕ್ಟೋಬರ್ಗೆ ಕೆ.ಜಿ.ಎಫ್ 2 ಚಿತ್ರೀಕರಣ ಮುಗಿಯಲಿದೆ. 2020 ರ ಏಪ್ರಿಲ್ ನ ಹೊತ್ತಿಗೆ ಕೆ.ಜಿ.ಎಫ್ ಸೀಕ್ವಲ್ ರಿಲೀಸ್ ಗೆ ಐಡಿಯಾ ಮಾಡಿದ್ದಾರೆ. ಒಟ್ಟಾರೆ ಕೆಜಿಎಫ್ ನೋಡೋಕೆ ಇನ್ನೂ ಒಂದೂವರೆ ವರ್ಷ ಕಾಯಲೇಬೇಕು.