ಕೇಳ್ರಪ್ಪೋ ಕೇಳಿ…ರಾಜ್ಯದ ಮುಂದಿನ ಮುಖ್ಯಮಂತ್ರಿ ರಮ್ಯಾ…!

Date:

ನಮ್ಮ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಬರ್ತಿದೆ. ಬಿಜೆಪಿಯವರು ಮುಂದಿನ ಮುಖ್ಯಮಂತ್ರಿ ತಮ್ಮ ನಾಯಕ ಬಿ.ಎಸ್ ಯಡಿಯೂರಪ್ಪ ಎಂದು ಹೇಳ್ತಿದ್ದಾರೆ. ಜೆಡಿಎಸ್‍ನವ್ರು ಮುಂದಿನ ಸಿಎಂ ಎಚ್.ಡಿ ಕುಮಾರಸ್ವಾಮಿ ಅವ್ರಂತ ಹೇಳ್ಕೊತ್ತಿದ್ದಾರೆ.
ಇನ್ನು ಕಾಂಗ್ರೆಸ್ ಕೂಡ ತಮ್ಮ ಪಕ್ಷ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಅವ್ರು ಮುಖ್ಯಮಂತ್ರಿ ಆಗ್ತಾರೆ ಇವ್ರು ಮುಖ್ಯಮಂತ್ರಿ ಆಗ್ತಾರೆ ಎಂಬ ಸುದ್ದಿ ಅಲ್ಲಲ್ಲಿ ಕೇಳಿಬರ್ತಿದೆ, ಚರ್ಚೆ ಆಗ್ತಿದೆ. ಒಂದುವೇಳೆ ಕಾಂಗ್ರೆಸ್ ಪುನಃ ಅಧಿಕಾರಕ್ಕೆ ಬಂದ್ರ ಸಿಎಂ ಸಿದ್ದರಾಮಯ್ಯ ಅವರೇ ಮುಂದೆಯೂ ಮುಖ್ಯಮಂತ್ರಿಗಳಾಗಿರ್ತಾರೆ ಎಂದು ಸಹ ಹೇಳಲಾಗ್ತಿದೆ. ಒಟ್ನಲ್ಲಿ ಮೂರು ಪಕ್ಷಗಳ ಪ್ರಮುಖರು ಮುಖ್ಯಮಂತ್ರಿ ಯಾಗಲು ಮುಂಚೂಣಿಯಲ್ಲಿದ್ದಾರೆ. ಆದರೆ, ಇದೀಗ ಮಾಜಿ ಸಂಸದೆ, ನಟಿ ರಮ್ಯಾ ಮುಂದಿನ ಮುಖ್ಯಮಂತ್ರಿ ಆಗ್ತಾರೆ ಎಂಬ ಹೊಸ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ..!


ಮೋಹಕ ತಾರೆ ರಮ್ಯಾ ಸಿಎಂ ಆಗ್ತಾರ..? ಯಾರ್ ಗುರೂ ಹೇಳಿದ್ದು..? ಸಾಧ್ಯನೇ ಇಲ್ಲ. ನೀನ್ ಸುಮ್ನೆ ಬೊಗಳೆ ಬಿಡಬೇಡ ಅಂತ ನೀವ್‍ಗಳು ಹೇಳ್ತಿರ್ಬಹುದು. ಆದ್ರೆ ಹೀಗಂತ ಹೇಳ್ತಿರೋದ್ ನಾನಲ್ಲ ಸ್ವಾಮಿ.. ಒಂದ್ ಕಾಲದಲ್ಲಿ ರಮ್ಯಾ ಅವರ ಪಕ್ಷದಲ್ಲಿದ್ದ ಹಿರಿಯ ನಾಯಕರೊಬ್ಬರು ನುಡಿದಿರೋ ಭವಿಷ್ಯ..!


ಮಾಜಿ ಸಂಸದ, ಒಂದಾನೊಂದು ಕಾಲದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾಗಿದ್ದ, ಕಾಂಗ್ರೆಸ್‍ನ ಮಾಜಿ ನಾಯಕ, ಈಗ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಎಚ್. ವಿಶ್ವನಾಥ್ ಹೇಳಿದ್ದು, ಮೋಹಕ ತಾರೆ ರಮ್ಯಾ ಮುಂದಿನ ಮುಖ್ಯಮಂತ್ರಿ ಅಂತ..!
ಪಕ್ಷ ತೊರೆದ ಮೇಲೂ ಕಾಂಗ್ರೆಸ್‍ನವರು ಅದರಲ್ಲೂ ಮಾಜಿ ಸಂಸದೆ ರಮ್ಯಾ ಮೇಡಂ ಅವ್ರು ಸಿಎಂ ಆಗ್ತಾರೆ ಅಂತ ವಿಶ್ವನಾಥ್ ಅವ್ರು ಹೇಳಿದ್ದಾರಲ್ಲ ಅಂತ ಆಶ್ಚರ್ಯ ಪಡಬೇಡಿ.. ಅವ್ರು ರಮ್ಯಾ ಸಿಎಂ ಆಗ್ತಾರೆ ಅಂತ ವ್ಯಂಗವಾಡಿದ್ದಾರೆ.
ಕಾಂಗ್ರೆಸ್‍ಗೆ ಖಂಡಿತಾ ಸ್ಪಷ್ಟ ಬಹುಮತ ಬರಲ್ಲ. ಅಕಸ್ಮಾತ್ ಬಂದ್ರೆ ರಮ್ಯಾ ಮುಖ್ಯಮಂತ್ರಿ ಆಗ್ತಾರೆಯೇ ವಿನಃ ಸಿದ್ದರಾಮಯ್ಯ ಅವ್ರು ಸಿಎಂ ಆಗಲ್ಲ. ರಮ್ಯಾ ಮಹಾ ಬುದ್ಧಿವಂತೆ, ಅವ್ರೇ ಸಿಎಂ ಆಗ್ತಾರೆ ಎಂದು ವಿಶ್ವನಾಥ್ ಹೇಳಿದ್ದಾರೆ..!
ವಿಜಯ ಕರ್ನಾಟಕ ದಿನಪತ್ರಿಕೆ ಹಮ್ಮಿಕೊಂಡಿದ್ದ ಸಂವಾದದಲ್ಲಿ ವಿಶ್ವನಾಥ್ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ರಮ್ಯಾ ಸಿಎಂ ಆಗ್ತಾರೆ ಎಂದು ಶಕುನ ನುಡಿದ್ದು, ವರದಿ ಆಗಿದೆ.

Share post:

Subscribe

spot_imgspot_img

Popular

More like this
Related

ತುಳಸಿ ಟೀ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು

ತುಳಸಿ ಟೀ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು ಭಾರತದಲ್ಲಿ ಪವಿತ್ರವೆಂದು ಪರಿಗಣಿಸಲ್ಪಡುವ ತುಳಸಿ...

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್!

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್! ಬೆಂಗಳೂರು:- ಆಟೋಗೆ ಕಸ...

ಅಪಾರ್ಟ್ಮೆಂಟ್‌ ಮಹಡಿಯಿಂದ ಬಿದ್ದು ವ್ಯಕ್ತಿ ಸೂಸೈಡ್!

ಅಪಾರ್ಟ್ಮೆಂಟ್‌ ಮಹಡಿಯಿಂದ ಬಿದ್ದು ವ್ಯಕ್ತಿ ಸೂಸೈಡ್! ನೆಲಮಂಗಲ: ನೆಲಮಂಗಲದ ಅಪಾರ್ಟ್ಮೆಂಟ್‌ವೊಂದರಲ್ಲಿ 24ನೇ ಮಹಡಿಯಿಂದ...

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...