ನೀರು ಕೇಳುವ ನೆಪದಲ್ಲಿ ಬಂದ ಕಾಮುಕರು ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂಬ ಆರೋಪ ವಿಜಯಪುರದಲ್ಲಿ ಕೇಳಿಬಂದಿದೆ.
ಇಂಡಿ ತಾಲೂಕಿನ ಚಡಚಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
45 ವರ್ಷದ ಕಂಠಪ್ಪ ಕೋಣೆಗೋಳ ಎಂಬಾತ ತನ್ನ ಮೂವರು ಸ್ನೇಹಿತರಿಂದೊಗೆ ತೋಟದ ಮನೆಗೆ ನೀರು ಕೇಳುವ ನೆಪದಲ್ಲಿ ಬಂದು 17 ವರ್ಷದ ಬಾಲಕಿಯ ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ಪ್ರಕರಣ ದಾಖಲಾಗಿದೆ.