ದ್ರಾವಿಡ್ ನಿವೃತ್ತಿ ಸುದ್ದಿ ಬ್ರೇಕ್ ಮಾಡಿದ್ದ ಕನ್ನಡತಿ…..!

1
347

ವಿಶ್ವಕಂಡ ಶ್ರೇಷ್ಠ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರು ತಮ್ಮ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳುತ್ತಿದ್ದಾರೆ ಎಂಬ ಸುದ್ದಿಯನ್ನು ಬ್ರೇಕ್ ಮಾಡಿದ್ದು ಯಾರು ಗೊತ್ತಾ…?


ಈ ಸುದ್ದಿಯನ್ನು ಬ್ರೇಕ್ ಮಾಡಿದ್ದು ಅಂದಿನ ಕಸ್ತೂರಿ ಸುದ್ದಿವಾಹಿನಿಯ ವರದಿಗಾರ್ತಿ ‘ಈ ದಿನದ ನಿರೂಪಕಿ’ ರಕ್ಷಾ ವಿ.

ರಕ್ಷಾ ಅವರು ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಲ್ಲಿ. ತಂದೆ ವಿಜಯ ಕುಮಾರ್, ತಾಯಿ ಸುಜಾತ. ಪತಿ ಸತ್ಯಗೌಡ.


ಬಿಎಸ್‍ಎಪಿ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು, ಬಿಎಂಎಸ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ (ಮನಃಶಾಸ್ತ್ರ ವಿಷಯ) ಪಡೆದ್ರು. ಚಿಕ್ಕಂದಿನಿಂದಲೂ ಇವರಿಗೆ ಗಗನಸಖಿ ಆಗೋ ಆಸೆ ಇತ್ತು. ಪಿಯುಸಿ ಬಳಿಕ ಇಂಟರ್ ವ್ಯೂ ಅಟೆಂಡ್ ಮಾಡಿದ್ರು, ಎಲ್ಲಾ ಓಕೆ ಆಯ್ತು… ಬಟ್ ಹೈಟ್ ಕಡಿಮೆ ಅಂತ ಗಗನಸಖಿ ಆಗೋ ಅವಕಾಶ ತಪ್ಪಿತು. ಆದ್ರೆ, ಏರ್‍ಪೋರ್ಟ್‍ನಲ್ಲೇ ಬೇರೆ ಉದ್ಯೋಗ ಮಾಡಲು ಆಫರ್ ಇತ್ತು. ಇಷ್ಟದ ಗಗನಸಖಿ ಆಗುವ ಅವಕಾಶವೇ ಇಲ್ಲ ಎಂದಮೇಲೆ ಏರ್‍ಪೋರ್ಟ್‍ನಲ್ಲಿ ಸಿಕ್ಕ ಕೆಲಸ ಮಾಡಿ ಸಾಧಿಸುವುದಾದರೂ ಏನಿದೆ ಅಂತ ಅದಕ್ಕೆ ಗುಡ್ ಬೈ ಹೇಳಿದ್ರು.


ಮುಂದೆ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಜರ್ನಲಿಸಂ, ಪ್ರವಾಸೋದ್ಯಮ ವಿಷಯದಲ್ಲಿ ಪದವಿ ಮಾಡಿದ್ರು.


ಶಾಲಾ-ಕಾಲೇಜು ದಿನಗಳಲ್ಲಿ ಚರ್ಚಾ ಸ್ಪರ್ಧೆ, ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ರಕ್ಷಾ ಅವರಿಗೆ ಶಿಕ್ಷಕರು, ಉಪನ್ಯಾಸಕರು ನೀನು ಪತ್ರಕರ್ತೆಯಾಗು ಅಥವಾ ವಕೀಲೆಯಾಗು ಎಂದು ಸಲಹೆ ನೀಡಿದ್ದರು. ಬರವಣಿಗೆ ಹಾಗೂ ನಿರೂಪಣೆಯಲ್ಲಿ ಆಸಕ್ತಿಯಿದ್ದ ರಕ್ಷಾ ಆಯ್ಕೆ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಂಡ್ರು.


ಡಿಗ್ರಿ ಮುಗಿಯುತ್ತಿದ್ದಂತೆ 2011-12ರಲ್ಲಿ ಕಸ್ತೂರಿ ಚಾನಲ್ ನಲ್ಲಿ ಕೆಲಸ ಸಿಕ್ತು.ಸ್ಪೋರ್ಟ್ಸ್ ರಿಪೋರ್ಟರ್ ಆಗಿ ಮಾಧ್ಯಮ ಪಯಣ ಶುರುವಾಯ್ತು.


ರಾಹುಲ್ ದ್ರಾವಿಡ್ ಅಂದ್ರೆ ಮೊದಲಿಂದಲೂ ರಕ್ಷಾ ಅವರಿಗೆ ತುಂಬಾ ಇಷ್ಟ. ರಕ್ಷಾ ಅವರ ಆರಾಧ್ಯ ದೈವ ದ್ರಾವಿಡ್. 2011ರಲ್ಲಿ ಭಾರತ ತಂಡ ಇಂಗ್ಲೆಂಡ್ ಪ್ರವಾಸಲ್ಲಿ 4-0 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಸೋತಿತ್ತು. ಆದರೆ, ದ್ರಾವಿಡ್ ಸತತ 3 ದಾಖಲೆಯ ಶತಕ ಬಾರಿಸಿದ್ದರು. ದುರಾದೃಷ್ಟವಶಾತ್ ತಂಡವನ್ನು ಗೆಲ್ಲಿಸಲು ಸಾಧ್ಯವಾಗಿರಲಿಲ್ಲ.


ಪ್ರವಾಸ ಮುಗಿದ ಬಳಿಕ ದ್ರಾವಿಡ್ ಬೆಂಗಳೂರಿಗೆ ಯಾವತ್ತು, ಎಷ್ಟೊತ್ತಿಗೆ ಬರ್ತಾರೆ ಎಂಬ ಮಾಹಿತಿಯನ್ನು ಕಲೆಹಾಕಿ, ಬೆಳ್ಳಂಬೆಳಗ್ಗೆ ಏರ್‍ಪೋರ್ಟ್‍ಗೆ ಹೋಗಿ ದ್ರಾವಿಡ್ ಅವರ ಎಕ್ಸ್ ಕ್ಲ್ಯೂಸಿವ್ ಇಂಟರ್ ವ್ಯೂ ಮಾಡಿದ್ದರು ರಕ್ಷಾ…! ಅಂದು ದ್ರಾವಿಡ್ ಅವರನ್ನು ನೇರವಾಗಿ ನೋಡಿದ್ದು, ಪರಿಚಯಿಸಿಕೊಂಡು ಮಾತಾಡಿದ್ದು, ಜೊತೆಗೆ ಸಂದರ್ಶನವನ್ನೂ ಮಾಡಿದ್ದು ರಕ್ಷಾ ಅವರಿಗೆಂದೂ ಮರೆಯಲಾಗದ ಅಪೂರ್ವ ಕ್ಷಣ.


2012 ಮಾರ್ಚ್ 9ರಂದು ರಾಹುಲ್ ದ್ರಾವಿಡ್ ತಮ್ಮ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದರು. ದ್ರಾವಿಡ್ ದಿಢೀರನೆ ಈ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಯಾರು, ಯಾರೆಂದರೆ ಯಾರೂ ಊಹಿಸಿರಲಿಲ್ಲ.


ದ್ರಾವಿಡ್ ನಿವೃತ್ತಿ ಘೋಷಿಸುವ ಸುದ್ದಿಯನ್ನು ರಾಷ್ಟ್ರೀಯ ಮಾಧ್ಯಮಗಳಿಗಿಂತ ಮೊದಲು ಬಿತ್ತರಿಸಿದ್ದೇ ಕಸ್ತೂರಿ ನ್ಯೂಸ್. ಮೂರು ದಿನಗಳ ಹಿಂದೆಯೇ ದ್ರಾವಿಡ್ ಯಾವತ್ತು. ಎಲ್ಲಿ, ಎಷ್ಟೊತ್ತಿಗೆ ದ್ರಾವಿಡ್ ವೃತ್ತಿ ಬದುಕಿಗೆ ಗುಡ್ ಬೈ ಹೇಳುತ್ತಾರೆ ಎಂಬ ಬ್ರೇಕಿಂಗ್ ನ್ಯೂಸ್ ನೀಡಿದ್ದರು ರಕ್ಷಾ…!


ಹೀಗೆ ಸುಮಾರು ಒಂದುವರೆ ವರ್ಷಗಳ ಕಾಲ ಕ್ರೀಡಾ ವರದಿಗಾರ್ತಿಯಾಗಿ, ನಿರೂಪಕಿಯಾಗಿ, ಸಿನಿಮಾ ಆ್ಯಂಕರ್ ಆಗಿ ಕಸ್ತೂರಿಯಲ್ಲಿ ಕೆಲಸ ಮಾಡಿದ ರಕ್ಷಾ ಅವರಿಗೆ ಮಾಸ್ಟರ್ ಡಿಗ್ರಿ ಮಾಡೋ ಮನಸ್ಸಾಗುತ್ತೆ.
ಪತ್ರಿಕೋದ್ಯಮ ಹೇಗಿದ್ರು ಓದಿದ್ದೀನಿ. ಸಮಾಜ ಕಾರ್ಯದ ಬಗ್ಗೆ ಸ್ಟಡಿ ಮಾಡೋಣ. ಸಮಾಜ ಕಾರ್ಯ + ಪತ್ರಿಕೋದ್ಯಮದಿಂದ ಸಮಾಜಕ್ಕೆ ಏನಾದರು ಒಳಿತು ಮಾಡಬೇಕೆಂದು ಉಜಿರೆಯ ಎಸ್‍ಡಿಎಂ ಕಾಲೇಜಿನಲ್ಲಿ ಎಂಎಸ್‍ಡಬ್ಲ್ಯು ಮಾಡಿದ್ರು.


ಪಿಜಿ ಮುಗಿದ ಬಳಿಕ 2014ರಲ್ಲಿ ಪುನಃ ಸೆಳೆದಿದ್ದು ದೃಶ್ಯ ಮಾಧ್ಯಮ ಜಗತ್ತೇ. ಬಿಟಿವಿ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ರು. ಅದೂ ಸ್ಪೋರ್ಟ್ಸ್ ರಿಪೋರ್ಟರ್ ಆಗಿಯೇ.


ಕೆಲವು ಸಮಯ ಕ್ರೀಡಾ ವರದಿಗಾರರಾಗಿ ಕೆಲಸ ಮಾಡಿದ ಬಳಿಕ ಮೆಟ್ರೂ ರಿಪೋರ್ಟರ್ ಆಗೋ ಅವಕಾಶ ಸಿಕ್ತು. ಕ್ರೀಡಾ ವರದಿಗಾರ್ತಿ ಆಗಿದ್ದಲ್ಲಿ ಪಂದ್ಯಗಳು ಇರುವಾಗ ಸೀಮಿತ ಪ್ರದೇಶಗಳಲ್ಲಿ ಸೀಮಿತ ಜನರಿಗೆ ಮಾತ್ರ ಪರಿಚಯವಾಗಲು ಸಾಧ್ಯ. ಮೆಟ್ರೋದಲ್ಲಿ ತುಂಬಾ ಸಾಧ್ಯತೆಗಳಿರುತ್ತವೆ ಎಂದು ರಕ್ಷಾ ಮೆಟ್ರೋ ವರದಿಗಾರಿಕೆ ಮಾಡಲು ಹಿರಿಯ ಸಹದ್ಯೋಗಿಗಳು, ಮುಖ್ಯಸ್ಥರು ಹೇಳಿದ್ರು. ಅದನ್ನು ಒಪ್ಪಿಕೊಂಡು ನಿಭಾಯಿಸಿದ್ರು.


2015ರಲ್ಲಿ ‘ಸರಳ ಜೀವನ’ ವಾಹಿನಿಗೆ ವರದಿಗಾರ್ತಿ ಮತ್ತು ನಿರೂಪಕಿಯಾಗಿ ಸೇರಿದ್ರು. ಕೆಲವು ತಿಂಗಳ ಬಳಿಕ ಪೂರ್ಣಪ್ರಮಾಣದ ನಿರೂಪಕಿಯಾಗಿಯೇ ಮುಂದುವರೆದಿದ್ದಾರೆ. ಇವರಿಗೆ ಬೆಸ್ಟ್ ಆ್ಯಂಕರ್ ಅವಾರ್ಡ್ ಕೂಡ ಬಂದಿದೆ.

ಸರಳ ಜೀವನದಲ್ಲಿ ಜೀವನ ಸಂಗಾತಿ ಕೂಡ ಸಿಕ್ಕಿದ್ದಾರೆ…! ರಕ್ಷಾ ಅವರ ಪತಿ ಸತ್ಯ ಅವರು ಸರಳ ಜೀವನದ ಉದ್ಯೋಗಿ. ಇಬ್ಬರ ನಡುವಿನ ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ 7 ತಿಂಗಳ ಹಿಂದಷ್ಟೇ ಪತಿ-ಸತಿಯಾಗಿ ಹೊಸಬಾಳಿಗೆ ಕಾಲಿಟ್ಟಿದ್ದಾರೆ.


ಹಾಡು, ನೃತ್ಯದಲ್ಲಿ ಆಸಕ್ತಿ. ಕಾದಂಬರಿ ಓದುವುದು, ಕವನ ಬರೆಯುವುದು ಇವರ ಹವ್ಯಾಸ. ಯೋಗಪಟವೂ ಹೌದು. ಟೀಚಿಂಗ್ ಅಂದ್ರೆ ಇಷ್ಟ. ಕಾಲೇಜು ದಿನಗಳಲ್ಲಿ ಜೂನಿಯರ್ಸ್ ಗೆ ಪಾಠ ಮಾಡ್ತಿದ್ದರು…!


ಯಶಸ್ವಿ ಮಹಿಳಾ ಉದ್ಯಮಿಯಾಗಿ ಒಂದಿಷ್ಟು ಮಂದಿಗೆ ಕೆಲಸ ಕೊಡಬೇಕು ಎಂಬುದು ಇವರ ಕನಸು,ಗುರಿ, ಹೆಬ್ಬಯಕೆ…! ಆ ದಿನ ಯಾವತ್ತು ಬರುತ್ತೆ ಅಂತ ಕಾಯ್ತಿದ್ದಾರೆ. ಆದಷ್ಟು ಬೇಗನೆ ಆ ಕಾಲ ಕೂಡಿಬರಲಿ ಎಂದು ಹಾರೈಸೋಣ.
ಅಂದಹಾಗೆ ಇಂದು ರಕ್ಷಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನೀವು ಸಹ ಇವರಿಗೆ ಶುಭ ಹಾರೈಸಿ. ನಮ್ಮ ಕಡೆಯಿಂದ ಜನ್ಮದಿನದ ಶುಭಾಶಯಗಳು ಮೇಡಂ… ಸದಾ ಯಶಸ್ಸು ನಿಮ್ಮದಾಗಲಿ.

-ಶಶಿಧರ್ ಎಸ್ ದೋಣಿಹಕ್ಲು

ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.

1) 10 ನವೆಂಬರ್ 2017 : ಈಶ್ವರ್ ದೈತೋಟ

2)11 ನವೆಂಬರ್ 2017 : ಭಾವನ

3)12  ನವೆಂಬರ್ 2017 : ಜಯಶ್ರೀ ಶೇಖರ್

4)13 ನವೆಂಬರ್ 2017 : ಶೇಷಕೃಷ್ಣ

5)14 ನವೆಂಬರ್ 2017 : ಶ್ರೀಧರ್ ಶರ್ಮಾ

6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ

7)16 ನವೆಂಬರ್ 2017 : ಅರವಿಂದ ಸೇತುರಾವ್

8)17 ನವೆಂಬರ್ 2017 : ಲಿಖಿತಶ್ರೀ

9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ

10)19 ನವೆಂಬರ್ 2017 : ಅಪರ್ಣಾ

11)20 ನವೆಂಬರ್ 2017 :  ಅಮರ್ ಪ್ರಸಾದ್

12)21 ನವೆಂಬರ್ 2017 :   ಸೌಮ್ಯ ಮಳಲಿ

13)22 ನವೆಂಬರ್ 2017 :  ಅರುಣ್ ಬಡಿಗೇರ್

14)23ನವೆಂಬರ್ 2017 :  ರಾಘವ ಸೂರ್ಯ

15)24ನವೆಂಬರ್ 2017 :  ಶ್ರೀಲಕ್ಷ್ಮಿ

16)25ನವೆಂಬರ್ 2017 :  ಶಿಲ್ಪ ಕಿರಣ್

17)26ನವೆಂಬರ್ 2017 :  ಸಮೀವುಲ್ಲಾ

18)27ನವೆಂಬರ್ 2017 :  ರಮಾಕಾಂತ್ ಆರ್ಯನ್

19)28ನವೆಂಬರ್ 2017 :  ಮಾಲ್ತೇಶ್

20)29/30ನವೆಂಬರ್ 2017 :  ಶ್ವೇತಾ ಆಚಾರ್ಯ  [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ.  ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]

21)30ನವೆಂಬರ್ 2017 :  ಸುರೇಶ್ ಬಾಬು 

22)01 ಡಿಸೆಂಬರ್ 2017 :  ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)

23)02 ಡಿಸೆಂಬರ್ 2017 : ಶಶಿಧರ್ ಭಟ್

24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್

25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ

26)05 ಡಿಸೆಂಬರ್ 2017 : ಶ್ರುತಿ ಜೈನ್

27)06ಡಿಸೆಂಬರ್ 2017 : ಅವಿನಾಶ್ ಯುವನ್  

28)07ಡಿಸೆಂಬರ್ 2017 : ಶಿಲ್ಪ ಕೆ.ಎನ್

29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ

30)09ಡಿಸೆಂಬರ್ 2017 : ಸಂದೀಪ್ ಕುಮಾರ್

31)10ಡಿಸೆಂಬರ್ 2017 : ಪ್ರತಿಮಾ ಭಟ್

32)11ಡಿಸೆಂಬರ್ 2017 :  ಹರೀಶ್ ಪುತ್ರನ್

33)12ಡಿಸೆಂಬರ್ 2017 : ನಿಶಾ ಶೆಟ್ಟಿ

34)13ಡಿಸೆಂಬರ್ 2017 : ಪೂರ್ಣಿಮ ಎನ್.ಡಿ

35)14ಡಿಸೆಂಬರ್ 2017 :  ಹಬೀಬ್ ದಂಡಿ

36)15ಡಿಸೆಂಬರ್ 2017 : ಪ್ರಕಾಶ್ ಕುಮಾರ್ ಸಿ.ಎನ್

37)16ಡಿಸೆಂಬರ್ 2017 :  ಜ್ಯೋತಿ ಇರ್ವತ್ತೂರು

38)17ಡಿಸೆಂಬರ್ 2017 :  ಶಿಲ್ಪ ಐಯ್ಯರ್ 

39)18ಡಿಸೆಂಬರ್ 2017 :  ನಾಝಿಯಾ ಕೌಸರ್

40) 19ಡಿಸೆಂಬರ್ 2017 :  ಶ್ರುತಿಗೌಡ

41) 20ಡಿಸೆಂಬರ್ 2017 :  ಎಂ.ಆರ್ ಶಿವಪ್ರಸಾದ್

42) 21ಡಿಸೆಂಬರ್ 2017 :  ವೆಂಕಟೇಶ್ ಉಳ್ತೂರು (ವೆಂಕಟೇಶ್ ಅಡಿಗ)

43) 22ಡಿಸೆಂಬರ್ 2017 :  ಶರ್ಮಿತಾ ಶೆಟ್ಟಿ

44) 23ಡಿಸೆಂಬರ್ 2017 :  ಕಾವ್ಯ

45) 24ಡಿಸೆಂಬರ್ 2017 :  ಹರ್ಷವರ್ಧನ್ ಬ್ಯಾಡನೂರು

46) 25ಡಿಸೆಂಬರ್ 2017 : ಸುಧನ್ವ ಖರೆ

47) 26ಡಿಸೆಂಬರ್ 2017 : ಸೌಜನ್ಯ ಕೀರ್ತಿ

48) 27ಡಿಸೆಂಬರ್ 2017 :ವಾಣಿ ಕೌಶಿಕ್

49) 28ಡಿಸೆಂಬರ್ 2017 : ಸುಗುಣ

50) 29ಡಿಸೆಂಬರ್ 2017 : ಜಯಪ್ರಕಾಶ್ ಶೆಟ್ಟಿ

ಡಿಸೆಂಬರ್ ೩೦ ಮತ್ತು ೩೧ ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ.

51) 01ಜನವರಿ 2018 :ಐಶ್ವರ್ಯ ಎ.ಎನ್

52) 02ಜನವರಿ 2018 :ಶ್ರೀಧರ್ ಆರ್

53) 03ಜನವರಿ 2018 : ದಿವ್ಯಶ್ರೀ

54) 04ಜನವರಿ 2018 : ಮಂಜುಳ ಮೂರ್ತಿ

55) 05ಜನವರಿ 2018 : ಅಭಿಷೇಕ್ ರಾಮಪ್ಪ

56) 06ಜನವರಿ 2018 : ರೋಹಿಣಿ ಅಡಿಗ

57) 07ಜನವರಿ 2018 :ಮಾದೇಶ್ ಆನೇಕಲ್

58) 08ಜನವರಿ 2018 :ಶ್ರುತಿ ಕಿತ್ತೂರು

59) 09ಜನವರಿ 2018 : ಕೆ.ಸಿ ಶಿವರಾಂ

ಜನವರಿ 10 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ

60)  11ಜನವರಿ 2018 : ಮಾರುತೇಶ್

61)  12ಜನವರಿ 2018 :ನೀತಿ ಶ್ರೀನಿವಾಸ್

62) 13ಜನವರಿ 2018 :ರಕ್ಷಾ ವಿ

1 COMMENT

LEAVE A REPLY

Please enter your comment!
Please enter your name here