ವಿದ್ಯಾರ್ಥಿನಿಯೊಬ್ಬಳನ್ನು ಅಪಹರಸಿ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆಗೈದಿರೋ ಘಟನೆ ಉತ್ತರ ಪ್ರದೇಶದ ಬುಲಂದ್‍ಶಹರ್ ನಲ್ಲಿ ನಡೆದಿದೆ.
ದುಷ್ಕರ್ಮಿಗಳಿಗೆ ಬಲಿಯಾದ ವಿದ್ಯಾರ್ಥಿನಿ 12ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು ಎಂದು ಹೇಳಲಾಗಿದ್ದು, ಟ್ಯೂಷನ್ ಮುಗಿಸಿ ಸೈಕಲ್ ನಲ್ಲಿ ಮನೆಗೆ ಬರುತ್ತಿರುವಾಗ ದುಷ್ಕರ್ಮಿಗಳು ಕಾರಿನಲ್ಲಿ ಅಪಹರಿಸಿರೋದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅಪಹರಣಗೊಂಡ ವಿದ್ಯಾರ್ಥಿನಿ ಶವ ಬುಲಂದ್‍ಶಹರ್ ಕೆರೆಯಲ್ಲಿ ಸಿಕ್ಕಿದ್ದು, ಸಾಮೂಹಿಕ ಅತ್ಯಾಚರವೆಸಗಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.