ನೋವಗರಡಿಯ ಶಕ್ತಿ

0
163

ನೋವಗರಡಿಯ ಶಕ್ತಿ

ಸರಸರನೆ ಸರಿದ ಸಮಯದಿ
ಸುರಿದ ಜಡಿಮಳೆಯ ನೆತ್ತಿ ಮೇಲೆ
ಹೊತ್ತು ಸಾಲು ಸಾಲಿನಾ
ನೋವಿನಾ ಬೀಜವ
ಮನದಿ ನೆಟ್ಟು
ಜಗದ ಕಣ್ಣೊಳಗೆ ನಗುವೆಂಬ
ಕಾರ್ಮೋಡವ ಹರಡಿ
ಎದೆಭಾರ ಹಗುರವಾಗುವುದೆಂದು
ಒಂಟಿತನದ ಸೆರಗ ಹಾಸಿದಾಗ
ಅಲ್ಲೊಂದು ಗುಡುಗು-
ಇಲ್ಲೊಂದು ಸಿಡಿಲು
ಮಡಿಲ-ಒಡಲ ಕಣ್ಣೀರ
ಕಡಲ ಕಲಕಿ ಹೊಸಬೆಳಕ
ಅರಸುತಿರುವಾಗ
ಕಾವ್ಯದತ್ತನು ಕನಸ
ಗೋಪುರವ ಕಟ್ಟಿ
ನನಸಿನೂರಿನ ಸಂಗವ ಮಾಡೆಂದು
ಮತ್ತದೇ ಮುಗುಳ್ನಗೆಯ ಬಿತ್ತಿ
ಮರೆಯಾದನು-ಗುರಿಯಗುರುವಾದನು.
✍?ದತ್ತರಾಜ್ ಪಡುಕೋಣೆ✍?

LEAVE A REPLY

Please enter your comment!
Please enter your name here