‘ಯಜಮಾನ‘ ಜೊತೆಗೆ ಯಜಮಾನ್ತಿಯ ರೊಮ್ಯಾನ್ಸ್..!! ಹೇಗಿದೆ ಸ್ವೀಡನ್ ಶೂಟಿಂಗ್!!
ಚಾಲೆಂಜಿಗ್ ಸ್ಟಾರ್ ದರ್ಶನ್ ಹಾಗೆ ರಶ್ಮಿಕಾ ಮಂದಣ್ಣ ಜೊತೆಯಾಗಿರುವ ಯಜಮಾನ ಸಿನಿಮಾದ ಕೊನೆ ಹಂತದ ಚಿತ್ರೀಕರಣ ಭರದಿಂದ ಸಾಗಿದೆ.. ದೂರದ ಸ್ವೀಡನ್ ನಲ್ಲಿ ಐರಾವತನ ಜೊತೆಗೆ ಚೆಂದುಳ್ಳಿ ಚೆಲುವೆ ರಶ್ಮಿಕಾ ಮಂದಣ್ಣ ರೊಮ್ಯಾಟಿಕ್ ಹಾಡಿಗೆ ಸ್ಟೆಪ್ ಹಾಕುತ್ತಿದ್ದಾರೆ..
ಸದ್ಯಕ್ಕೆ ಶೂಟಿಂಗ್ ಸಂದರ್ಭದಲ್ಲಿ ತೆಗೆಯಲಾದ ಫೋಟೊ ವೈರಲ್ ಆಗಿದ್ದು, ಇಬ್ಬರ ಜೋಡಿ ಮುದ್ದಾಗಿ ಕಾಣ್ತಿದೆ.. ದರ್ಶನ್ ಸಿನಿಮಾಗೆ ಹೊಸ ನಾಯಕಿಯಾಗಿ ಆಗಮಿಸಿರುವ ರಶ್ಮಿಕಾ, ಅಭಿಮಾನಿಗಳಿಗೆ ಬಿಗ್ ಸ್ಕ್ರೀನ್ ಮೇಲೆ ಫ್ರೆಶ್ ಫಿಲ್ ಕೊಡಲಿರೋದಂತು ಸುಳ್ಳಲ್ಲ..
ಕಾರು ಅಪಘಾತದ ಬಳಿಕ ಚೇತರಿಸಿಕೊಂಡಿರುವ ದರ್ಶನ್ ಅವರು ಮತ್ತೆ ಕ್ಯಾಮರ ಮುಂದೆ ಬಂದಿದ್ದಾರೆ.. ಇದು ದಚ್ಚು ಅಭಿಮಾನಿಗಳ ವಲಯದಲ್ಲಿ ಸಂತಸವನ್ನ ಉಂಟು ಮಾಡಿದೆ.. ಚಿತ್ರವನ್ನು ಶೈಲಜಾ ನಾಗ್ ಮತ್ತು ಬಿ ಸುರೇಶ್ ನಿರ್ಮಾಣ ಮಾಡುತ್ತಿದ್ದು, ವಿ ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರವನ್ನು ಪಿ ಕುಮಾರ್ ನಿರ್ದೇಶಿಸುತ್ತಿದ್ದಾರೆ. ಕೊನೆಯ ಹಂತದ ಚಿತ್ರೀಕರಣ ಮುಗಿದ ನಂತರ ಪೋಸ್ಟ್ ಪ್ರೊಡೆಕ್ಷನ್ ಕೆಲಸದಲ್ಲಿ ಚಿತ್ರತಂಡ ನಿರತವಾಗಲಿದೆ.