ಸ್ಯಾಂಡಲ್ ವುಡ್ ನ ಕ್ಯೂಟಿ ಜೋಡಿ ಅಂತ ಕರೆಸಿಕೊಂಡಿದ್ದ ರಕ್ಷಿತ್ ಶೆಟ್ಟಿ- ರಶ್ಮಿಕಾ ಮಂದಣ್ಣ ಈಗ ದೂರಾಗಿರೋದು ಹಳೆ ಸುದ್ದಿಯಾಗಿದೆ. ಹೊಸದೇನಪ್ಪ ಅಂದ್ರೆ ಲವ್-ಗಿವ್ , ಮದ್ವೆ ಅಂತ ವೈಯಕ್ತಿಕ ಜೀವನದಲ್ಲಿ ಮಾತ್ರವಲ್ಲ , ವೃತ್ತಿ ಬದುಕಲ್ಲೂ ರಶ್ಮಿಕಾ ರಕ್ಷಿತ್ ಶೆಟ್ಟಿ ಅವರಿಂದ ಡಿಸ್ಟೈನ್ಸ್ ಮೆಂಟೈನ್ ಮಾಡಲು ಮುಂದಾಗಿದ್ದಾರೆ!
ಹೌದು, ‘ವೃತ್ರ’ ಎಂಬ ಸಿನಿಮಾದಲ್ಲಿ ರಶ್ಮಿಕಾ ನಟಿಸಬೇಕಿತ್ತು. ನಿರ್ದೇಶಕ ಗೌತಮ್ ಅಯ್ಯರ್ ರಶ್ಮಿಕಾ ಗೆ ವಿಭಿನ್ನ ಪಾತ್ರ ನೀಡಿದ್ದರು. ಈ ಸಿನಿಮಾದಲ್ಲಿ ಕಿರಿಕ್ ಬೆಡಗಿ ತನಿಖಾಧಿಕಾರಿ ಪಾತ್ರದಲ್ಲಿ ಮಿಂಚಲಿದ್ದರು. ಗನ್ ಹಿಡಿದು ಹೊಸ ಅವತಾರದಲ್ಲಿ ಬರಬೇಕಿತ್ತು. ಆದರೆ, ಅವರೀಗ ಈ ಸಿನಿಮಾ ಮಾಡ್ತಿಲ್ಲ. ತೆಲುಗು ಸಿನಿಮಾಗಳಲ್ಲಿ ಬ್ಯುಸಿ ಅಂತ ಹೇಳಿ, ಇದರಿಂದ ಹೊರಬಂದಿದ್ದಾರೆ. ಆದರೆ, ಕಾರಣ ಸಿನಿಮಾದ ಬ್ಯುಸಿ ಶೆಡ್ಯೂಲ್ ಅಲ್ಲ. ರಕ್ಷಿತ್ ಶೆಟ್ಟಿ!
ವೃತ್ರ ದ ಡೈರೆಕ್ಟರ್ ಗೌತಮ್ ಅಯ್ಯರ್ ರಕ್ಷಿತ್ ಶೆಟ್ಟಿ ಕ್ಯಾಂಪಿನಿಂದ ಬಂದವರು. ಇವತ್ತಿಗೂ ಅವರು ರಕ್ಷಿತ್ ಜೊತೆ ಚೆನ್ನಾಗಿದ್ದಾರೆ ಇದೇ ಕಾರಣಕ್ಕೆ ರಶ್ಮಿಕಾ ವೃತ್ರಕ್ಕೆ ಕೈ ಮುಗಿದಿದ್ದಾರೆ ಎನ್ನಲಾಗುತ್ತಿದೆ.
ಇಬ್ಬರ ನಡುವಿನ ಬ್ರೇಕ್ ಅಪ್ ಗೆ ಕಾರಣ ಏನು ಅಂತ ಸರಿಯಾಗಿ ಯಾರ್ಗೂ ಗೊತ್ತಿಲ್ಲ. ಅವರಂತೂ ಹೇಳಲ್ಲ. ಆದರೆ, ಮತ್ತೆ ಒಂದಾಗಲಿ ಅನ್ನೋದು ಅಭಿಮಾನಿಗಳ ಆಶಯ.