ಪತ್ರಿಕೋದ್ಯಮದ ಭೀಷ್ಮ..! ಬರವಣಿಗೆ ನಿಲ್ಲಿಸುತ್ತಾರಾ ರವಿ ಬೆಳಗೆರೆ..?

Date:

ಕನ್ನಡ ಪತ್ರಿಕೋದ್ಯಮದಲ್ಲಿ ರವಿ ಬೆಳಗೆರೆಯವರದ್ದು ಬಹುದೊಡ್ಡ ಹೆಸರು. ಭ್ರಷ್ಟರಿಂದ ಹಿಡಿದು ಶಿಷ್ಟರವರೆಗೂ ಅವರು ಕಿವಿ ಹಿಂಡಿದ್ದಾರೆ. ಅಂಡರ್ವರ್ಲ್ಡ್ ಬಗ್ಗೆ ಇವರಷ್ಟು ವಿವರವಾಗಿ, ಸೊಗಸಾಗಿ, ಖಡಕ್ಕಾಗಿ ಬರೆದ ಇನ್ನೊಬ್ಬ ಪತ್ರಕರ್ತನಿಲ್ಲ. ರಾಜಕಾರಣದ ವಿಮರ್ಶೆಯಲ್ಲೂ  ಎತ್ತಿದ ಕೈ. ಅವರು ಕೊಡುವ ಹೆಡ್ಡಿಂಗನ್ನು ದೊಡ್ಡ ದೊಡ್ಡ ಪತ್ರಕರ್ತರೆನಿಸಿಕೊಂಡವರು ಕಲ್ಪನೆ ಕೂಡ ಮಾಡಲು ಸಾಧ್ಯವಿಲ್ಲ. ಅವರ ಬಾಟಂ ಐಟಂ, ಖಾಸ್ ಬಾತ್, ಕೇಳಿಗರನ್ನು ಇಷ್ಟಪಡದ ಓದುಗರಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿ ಶ್ರದ್ಧೆ, ಛಲವನ್ನು ಬದುಕಿನಲ್ಲಿ ಅಳವಡಿಸಿಕೊಂಡರೇ ಬಹುದೊಡ್ಡ ಯಶಸ್ಸನ್ನು ಪಡೆಯುತ್ತಾರೆ ಎಂಬುದಕ್ಕೆ ತಾಜಾ ನಿದರ್ಶನ ಈ ಬಾಸ್. ರವಿ ಬೆಳಗೆರೆಯವರನ್ನು ತೀರಾ ಹತ್ತಿರದಿಂದ ಬಲ್ಲವನು ನಾನು. ಅವರ ಜೊತೆ ಕೆಲಸ ಮಾಡಿದ್ದೇನೆ. ಮಗು ಎಂದು ಕರೆಸಿಕೊಳ್ಳುವಷ್ಟು ಸಲಿಗೆ ಬೆಳೆಸಿಕೊಂಡಿದ್ದೇನೆ. `ಎಲ್ಲಿದಿಯೋ.. ಯಾಕೋ ಮನಸ್ಸಿಗೆ ಬೇಸರ, ಬಾ ಮಾತಾಡೋಣ’ ಎಂದು ಅವರೊಮ್ಮೆ ಮೆಸೇಜ್ ಮಾಡಿದಾಗ ತಾಳಲಾರದಷ್ಟು ಸಂಕಷ್ಟ ಅನುಭವಿಸಿದ್ದೇನೆ. ನೊಂದ ಮನಸ್ಸುಗಳಿಗೆ ಅಮೃತ ಕೊಟ್ಟ ದೊಡ್ಡ ವ್ಯಕ್ತಿಗೆ ಬೇಸರವೆಂದರೇ ನನ್ನಂಥವರಿಗೆ ಪಥ್ಯವಾಗೋದು ಕಷ್ಟ. ನೇರವಾಗಿ ಹೇಳಬೇಕೆಂದರೇ ನನಗೆ ಪತ್ರಿಕೋದ್ಯಮದ ಪಾಠ ಹೇಳಿಕೊಟ್ಟ ಮೊದಲ ಗುರು ಇವರು. ಕ್ರೈಂ ವರದಿಗಾರನಾಗಬೇಕೆಂದಾಗ, ಬಸ್ ಸ್ಟ್ಯಾಂಡ್ ನಲ್ಲಿ ಮಲಗುವ ಅಭ್ಯಾಸವಿದೆಯಾ ಎಂದು ಕೇಳಿದ್ದರು. ಆಗ ಬಸ್ ಸ್ಟ್ಯಾಂಡ್ ನಲ್ಲಿ ಏಕೆ ಮಲಗಬೇಕು ಎಂಬ ಪ್ರಶ್ನೆ ಹುಟ್ಟಿಕೊಂಡಿತ್ತು. ಆದರೆ ಕ್ರೈಂ ವರದಿಗಾರನಾಗುವವನಿಗೆ ಎದುರಾಗುವ ಸಂಕಷ್ಟಗಳನ್ನು ಅವರು ಹೀಗೇ ಉದಾಹರಿಸಿದ್ದರು. ನಾನು ಹಾಯ್ ಬೆಂಗಳೂರು ಸೇರಿಕೊಂಡಾಗ ಬರೆದ ಮೊದಲ ತೊದಲು ಬರಹಗಳನ್ನು ನಿಷ್ಕಾರುಣ್ಯದಿಂದ ಹರಿದುಹಾಕಿ ಅಯೋಗ್ಯ ಅನಿಸಿಕೊಳ್ತೀಯಾ..? ಯೋಗ್ಯನಾಗ್ತೀಯಾ..? ಎಂದು ಕೇಳಿದ್ದರು. ಅದೊಮ್ಮೆ ಛಲಕ್ಕೆ ಬಿದ್ದು ಬರೆದ ವರದಿಯನ್ನು ನೋಡಿ, `ಇನ್ನು ಎಲ್ಲಿಯಾದರೂ ಹೋಗು ಬದುಕುತ್ತೀಯಾ’ ಎಂದು ಆಶೀರ್ವಾದ ಮಾಡಿದವರು. ಇವತ್ತು ಸೊಗಸಾಗಿ ಬದುಕುತ್ತಿದ್ದೇನೆ. ದೈರ್ಯ, ಶೌರ್ಯ, ಜಾತ್ಯಾತೀತ ಮನೋಭಾವ, ಒಳ್ಳೇತನ ಎಲ್ಲವನ್ನೂ ರೂಢಿಸಿಕೊಂಡಿದ್ದೇನೆ. ಅದು ಅವರಿಂದ ನನಗೆ ಬಳುವಳಿಯಾಗಿ ಬಂದಿದೆ ಎನ್ನುವುದಕ್ಕೆ ಯಾವುದೇ ಮುಜುಗರವಿಲ್ಲ.

ravi-belagere-photo2

ಆದರೆ ಇದೀಗ ನನ್ನಂಥವರ ನೆಚ್ಚಿನ ಗುರುಗಳು ಬರವಣಿಗೆಯನ್ನು ನಿಲ್ಲಿಸುವ ಮಾತನಾಡಿದ್ದಾರೆ. ಯಾವುದೇ ಕಾರಣಕ್ಕೂ ಅವರು ಬರವಣಿಗೆ ನಿಲ್ಲಿಸಬಾರದು ಎಂದು ಆರ್ಡರ್ ಮಾಡುವಷ್ಟು ಸ್ವತಂತ್ರ ಮತ್ತು ಹಕ್ಕನ್ನು ಅವರು ನಮಗೆ ಕೊಟ್ಟಿದ್ದಾರೆ. ಆದರೆ ಅವರನ್ನು ತೀರಾ ಹತ್ತಿರದಿಂದ ನಾನು ನೋಡಿರುವುದರಿಂದ ಅವರು ಬರವಣಿಗೆಯನ್ನು ನಿಲ್ಲಿಸಿ ವಿಶ್ರಾಂತಿ ತೆಗೆದುಕೊಳ್ಳುವುದು ಸೂಕ್ತ. ಅವರ ಆರೋಗ್ಯ ಈಗ್ಗೆ ಒಂದು ವರ್ಷದ ಹಿಂದಿದ್ದಷ್ಟು ಹದಗೆಟ್ಟಿಲ್ಲ. ಈಗವರು ಸುಧಾರಿಸಿಕೊಂಡಿದ್ದಾರೆ. ಬದುಕಿನ ಉದ್ದಕ್ಕೂ ಹಗಲು ರಾತ್ರಿಯೆನ್ನದೇ ದುಡಿದ ಅವರಿಗೂ ವಿಶ್ರಾಂತಿ ಬೇಕಲ್ವೇ..? ಮುಂದಿನ ದಿನಗಳಲ್ಲಿ ಅವರು ದೇಶ, ವಿದೇಶ ಸುತ್ತಿಕೊಂಡು, ನಮ್ಮಂಥ ಯುವಕರಿಗೆ ತಿದ್ದಿ ಬುದ್ಧಿಹೇಳಿಕೊಂಡು ಕಾಲ ಕಳೆಯಲಿ. ಪ್ರೀತಿಯ ಮೇಷ್ಟ್ರು ನಿರಂತರವಾಗಿರಲಿ..!

  •  ರಾ ಚಿಂತನ್.

POPULAR  STORIES :

ಶಿವಣ್ಣನ ಜೊತೆಗೆ ಬಿಬಿಸಿ ರೇಡಿಯೋ ನಡೆಸಿದ ಸಂದರ್ಶನ ಇಲ್ಲಿದೆ.. ಕೇಳಿ..!

ಇಲ್ಲಿ ಮುಚ್ಚಿಕೊಂಡರು.. ಅಲ್ಲಿ ಬಿಚ್ಚಿಕೊಂಡರು..!! ಏನಿದೆಲ್ಲಾ ದೀಪಿಕಾ..?

ಭಾರತದಲ್ಲಿದ್ದಾರೆ ಮೂವತ್ತು ಲಕ್ಷಕ್ಕಿಂತ ಹೆಚ್ಚು ವೇಶ್ಯೆಯರು..!? ಮೈ ಮಾರಾಟ ದಂಧೆ ಲೀಗಲೈಜ್ ಆಗುತ್ತಾ..?

ಹೆಂಗಿದ್ದ ಹೆಂಗಾದ ಗೊತ್ತಾ ಅಂಬಾನಿ ಪುತ್ರ..! ಐಪಿಎಲ್ ವೇಳೆ ಅಚ್ಚರಿಗೊಳ್ಳಲು ಸಿದ್ಧರಾಗಿ..!

ದ್ವಾರಕೆಯ ದೋಸೆ ಮತ್ತವಳ ನೆನಪು..!

ಪಾಕಿಸ್ತಾನಕ್ಕಾಗಿ ಖಂಡೀಲ್ ಬಲೋಚ್ ಬೆತ್ತಳಾಗುತ್ತಾಳಂತೆ..!? #Video

`ಆ್ಯಮ್ ಸಾರೀ ಗೇಲ್’ ಅಂದ ಬಿಗ್ಬಿ ಅಮಿತಾಬ್..!? ಅಮಿತಾಬ್ ಮಾಡಿದ ತಪ್ಪೇನು..?

ಇಸ್ಲಾಂ ಮಹಾನ್ ಧರ್ಮ ಎಂದ ನಮೋ..!? ಪಾಕಿಸ್ತಾನ ಮನಃಸ್ಥಿತಿ, ಭಾರತ ಯಥಾಸ್ಥಿತಿ..!?

ಪ್ರೀತಿಗೆ ಬೆಂಕಿಯಿಟ್ಟ ಪಾಗಲ್ ಪ್ರೇಮಿ..! ಪ್ರೀತಿ `ಬೆಂಕಿ’ ಹುಷಾರು..!?

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...