ನಾವು ದೋಣಿ, ಈಜುಗಾರರು ಹಾಗೂ ಸ್ಟಂಟ್ ಮಾಸ್ಟರ್‍ಗಳಂತಹ ಸುರಕ್ಷತಾ ಕ್ರಮಗಳನ್ನು ಅನುಸರಿಸಿದ್ದರೂ ಅವರನ್ನು ರಕ್ಷಿಸಲು ಸಾಧ್ಯವಾಗ್ಲೇ ಇಲ್ಲ.. ಆ ಇಬ್ಬರು ಕಲಾವಿದರು ತನ್ನ ನೆಚ್ಚಿನ ಗುರುಗಳಿಗಾಗಿ ಈ ಸ್ಟಂಟ್ ಮಾಡಲು ಒಪ್ಪಿಕೊಂಡಿದ್ರು.. ಹೀಗೆ ಹೇಳಿದ್ದು ಬೇರ್ಯಾರೂ ಅಲ್ಲ ಮಾಸ್ತಿಗುಡಿ ಚಿತ್ರದ ಸ್ಟಂಟ್ ಮಾಸ್ಟರ್ ರವಿವರ್ಮಾ..! ಹೌದು ನಿನ್ನೆ ನಡೆದ ದುರಂತದ ಕುರಿತು ಮಾತನಾಡಿದ ಅವರು ಮೃತ ಉದಯ್ ಹಾಗೂ ಅನಿಲ್ ತಮ್ಮ ನೆಚ್ಚಿನ ಗುರು ದುನಿಯಾ ವಿಜಯ್‍ಗಾಗಿ ಸ್ಟಂಟ್ ಮಾಡಲು ಒಪ್ಪಿಕೊಂಡಿದ್ರು ಎಂದು ಹೇಳಿದ್ದಾರೆ. ನಾವು ಈ ಸ್ಟಂಟ್ ಕುರಿತು ಅವರಿಗೆ ಈ ಮೊದಲೇ ಹೇಳಿದ್ದೆವು.. ಅವರು ಒಪ್ಪಿಕೊಂಡ ನಂತರವಷ್ಟೇ ಶೂಟಿಂಗ್ ಮಾಡಲು ಮುಂದಾಗಿದ್ದು. ಅವರು ಈಜು ಕಲಿತಿದ್ರೂ ಕೂಡ ಈ ದುರಂತ ನಡೆದು ಹೋಯಿತು ಎಂದು ಮರುಗಿದ್ದಾರೆ. ಈ ದೃಶ್ಯ ದುನಿಯಾ ವಿಜಯ್‍ಗಾಗಿ ಮಾಡಲು ಒಪ್ಪಿಕೊಂಡಿದ್ರು.. ದುರಾದೃಷ್ಟವಶಾತ್ ಎಲ್ಲವೂ ಕೈಕೊಟ್ಟಿತು.. ಅವರೆಲ್ಲರೂ ನೀರಿಗೆ ಬಿದ್ದ ಮೇಲೆ ಉಸಿರು ಹಿಡಿದಿಟ್ಟುಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಅವರಿದ್ದ ಸ್ಥಳಕ್ಕೆ ದೋಣಿ ತಲುಪುವ ವೇಳೆಗೆ ಅವರು ನೀರಿನಲ್ಲಿ ಮುಳುಗಿ ಹೋಗಿದ್ರು. ಉದಯ್ ತನ್ನ ಕೈಯನ್ನು ಎತ್ತಿದ್ದು ನಾನು ನೋಡಿದೆ ಎಂದು ತಿಳಿಸಿದ್ದಾರೆ. ಈ ಚಿತ್ರಕ್ಕಾಗಿ ಅನಿಲ್ ಮತ್ತು ಉದಯ್ ಸಖತ್ ಡಯಟ್, ಸಿಕ್ಸ್ ಪ್ಯಾಕ್‍ಗಳ ಮೂಲಕ ಬಾಡಿ ಫಿಟ್ನೆಸ್ ತಂದುಕೊಂಡಿದ್ದರು. ಅದೂ ಕೂಡ ಅವರು ನೀರಿನಲ್ಲಿ ಮುಳುಗೋಕೆ ಪ್ರಮುಖ ಕಾರಣ ಆಗಿರ್ಬೋದು ಎಂದು ಹೇಳಿದ್ದಾರೆ. ಎಲ್ಲವೂ ನಮ್ಮ ಕಣ್ಣ ಮುಂದೆಯೇ ನಡೆದು ಹೋದ್ವು… ಅಲ್ಲಿ ಏನು ನಡೆದಿದೆ ಎಂದು ಎಲ್ಲಾ ಮಾಧ್ಯಮಗಳು ಸೆರೆ ಹಿಡಿದಿದೆ ಎಂದು ಹೇಳಿದ್ದಾರೆ.
Like us on Facebook The New India Times
POPULAR STORIES :
ಮಾಸ್ತಿಗುಡಿ ದುರಂತ: ಐವರ ವಿರುದ್ದ ಜಾಮೀನು ರಹಿತ ವಾರೆಂಟ್ ಜಾರಿ..!
12 ವರ್ಷದ ಅಪ್ರಾಪ್ತ ಬಾಲಕನಿಂದ 18 ವರ್ಷದ ಯುವತಿ ತಾಯಿಯಾದ್ಲು..!
ವಿಲನ್ ಸಿನಿಮಾದ ಮತ್ತೊಂದು ಸ್ಪೆಷಾಲಿಟಿ ಏನ್ ಗೊತ್ತಾ..?