ಕನ್ನಡ ಸಿನಿಮಾ ರಂಗದ ಮುಂದಿನ ‘ಲೀಡರ್’ ಯಾರಾಗಬಹುದು..?
ಡಾ.ರಾಜ್ ಕುಮಾರ್ ಅವರ ನಂತರ ಇಡೀ ಇಂಡಸ್ಟ್ರಿಯನ್ನ ಜೊತೆಗೆ ನಡೆಸಿಕೊಂಡು ಹೋಗಿದ್ದು ರೆಬಲ್ ಸ್ಟಾರ್ ಅಂಬರೀಶ್.. ಕಲಾವಿದರ ಸಂಘದ ಅಧ್ಯಕ್ಷರಾಗಿ, ಕನ್ನಡ ಚಿತ್ರರಂಗದ ಹಿರಿಯರಾಗಿ, ತಪ್ಪುಗಳನ್ನ ತಿದ್ದುತ್ತ ಎಲ್ಲರೊಂದಿಗೆ ಉತ್ತಮ ಬಾಂಧವ್ಯವನ್ನ ಇಟ್ಟುಕೊಂಡು, ಕನ್ನಡ ಚಿತ್ರರಂಗವನ್ನ ಉಳಿಸಿ ಬೆಳೆಸಿದವರು ಅಂಬರೀಶ್..
ಇಂದು ಅಂಬಿ ಅವರಿಲ್ಲದೆ ಚಿತ್ರರಂಗದ ಸಾರಥಿಯೇ ಇಲ್ಲದಂತಾಗಿದೆ.. ಹೀಗಾಗೆ ಈ ಸ್ಥಾನವನ್ನ ತುಂಬಲ್ಲವರು ಯಾರು ಎಂಬ ಚರ್ಚೆಗೆ ಇದು ಎಡೆಮಾಡಿ ಕೊಟ್ಟಿದೆ.. ಹೀಗಾಗೆ ಎಲ್ಲರ ಕಣ್ಣು ದೊಡ್ಡಮನೆಯ ರಾಜರ ಹಿರಿಮಗ ಶಿವರಾಜ್ ಕುಮಾರ್ ಅವರ ಮೇಲಿದೆ.. ಹಲವು ದಶಕಗಳಿಂದ ಇಂಡಸ್ಟ್ರಿಯಲ್ಲಿ ಸಕ್ರೀಯರಾಗಿರುವ ಈ ಹ್ಯಾಟ್ರಿಕ್ ಹೀರೊ, ಕಲಾವಿದರ ಸಂಘದ ಉಪಾಧ್ಯಕ್ಷರು ಸಹ ಆಗಿದ್ದಾರೆ.. ಹೀಗಾಗೆ ಅಂಬಿ ನಂತರದ ಸ್ಥಾನಕ್ಕೆ ಶಿವಣ್ಣ ಸೂಟ್ ಆಗ್ತಾರೆ ಅನ್ನೋ ಮಾತಿದೆ.. ಬಟ್ ಇದಕ್ಕೆ ಶಿವಣ್ಣ ಒಪ್ಪುತ್ತಾರಾ ಅನ್ನೋದನ್ನ ಕಾದು ನೋಡ್ಬೇಕು…
ಈ ನಡುವೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಸಹ ಈ ಸ್ಥಾನಕ್ಕೆ ಪ್ರಬಲ ವ್ಯಕ್ತಿಯಾಗಿದ್ದಾರೆ.. ಸೋಲು-ಗೆಲುವಿನ ನಡುವೆ ಇಂಡಸ್ಟ್ರಿಯ ಏಳುಬೀಳಿನ ಬಗ್ಗೆ ತಿಳಿದಿದ್ದಾರೆ.. ಆದರೆ ಸದಾ ಸಿನಿಮಾದ ಬಗ್ಗೆ ಒಲವಿಟ್ಟುಕೊಂಡು ಅದರಲ್ಲಿ ಮುಳುಗುವ ರವಿಚಂದ್ರನ್ ಅವರು ಸ್ಥಾನವನ್ನ ಒಪ್ಪಿಕೊಳ್ತಾರ ಕಾದು ನೋಡ್ಬೇಕು… ಈ ನಡುವೆ ಜಗ್ಗೇಶ್ ಅವರನ್ನ ಈ ಸಾಲಿನಲ್ಲಿ ಬಿಡುವ ಹಾಗಿಲ್ಲ.. ಎಲ್ಲರೊಂದಿಗು ಉತ್ತಮ ಬಾಂಧವ್ಯ ಹೊಂದಿರುವ ಜಗ್ಗೇಶ್ ರಾಜಕೀಯದ ನಡುವೆ ಇದನ್ನ ನಿಭಾಯಿಸುತ್ತಾರ ಗೊತ್ತಿಲ್ಲ.. ರಾಕ್ ಲೈನ್ ವೆಂಕಟೇಶ್, ದೊಡ್ಡಣ ಸೇರಿದಂತೆ ಹಲವರಿದ್ದಾರೆ.. ಈ ಎಲ್ಲರ ಸಮ್ಮುಖದಲ್ಲಿ ಮುಂದೆ ಸಾರಥಿ ಯಾರಾಗಲ್ಲಿದ್ದಾರೆ ಕಾದು ನೋಡ್ಬೇಕು…