2019 ಐಪಿಎಲ್ ಟೂರ್ನಿಯಲ್ಲಿ ಆರ್ ಸಿಬಿ ಪ್ರದರ್ಶನದ ಬಗ್ಗೆ ಅಭಿಮಾನಿಗಳು ಈಗಾಗಲೇ ಸಾಕಷ್ಟು ಬೇಸರಗೊಂಡಿದ್ದಾರೆ, ಇದುವರೆಗೂ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ತಂಡ ಒಂದು ಗೆಲುವುವನ್ನ ಪಡೆದಿಲ್ಲ ಇದರಿಂದ ಕೆಲವರು ತಂಡದ ವಿರುದ್ಧ ಅಸಮಾಧಾನ ಹೊರಹಾಕಿ ನಾಯಕತ್ವದ ಬದಲಾವಣೆ ಮಾತನಾಡಿದ್ದಾರೆ.
ಆದರೆ ಇದೇ ವೇಳೆ ಇಲ್ಲೊಬ್ಬ ಅಭಿಮಾನಿ ಮಾತ್ರ ತಂಡದ ಬಗ್ಗೆ ಕಮೆಂಟ್ ಮಾಡಿದ್ದ ನ್ಯೂಜಿಲೆಂಡಿನ ವೀಕ್ಷಕ ವಿವರಣೆಗಾರ ಸೈಮನ್ ಡೌಲ್ ಗೆ ಅಭಿಮಾನಿಯೊಬ್ಬರು ಕೊಲೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಅಭಿಮಾನಿಯ ಈ ಹೇಳಿಕೆಗೆ ನ್ಯೂಜಿಲೆಂಡಿನ ವೀಕ್ಷಕ ವಿವರಣೆಗಾರ ಸೈಮನ್ ಡೌಲ್ ಪ್ರತಿಕ್ರಿಯೆ ನೀಡಿದ್ದು ಆ ಸಂದೇಶದ ಸ್ಕ್ರೀನ್ ಶಾಟ್ ತೆಗೆದು ಟ್ವಿಟ್ಟರಿನಲ್ಲಿ ಟ್ವೀಟ್ ಮಾಡಿದ್ದಾರೆ, ಕೊಲೆ ಬೆದರಿಕೆ ಬರುವಂತೆ ಏನು ಹೇಳಿದ್ದೇನೆ ಎಂಬುವುದು ನನಗೆ ಗೊತ್ತಿಲ್ಲ ಆದರೆ ಇದು ಕೇವಲ ಕ್ರೀಡೆಯಷ್ಟೇ ಎಂದು ತಿಳಿಸಿ ಸಮಾಧಾನಗೊಳ್ಳುವಂತೆ ಬರೆದುಕೊಂಡಿದ್ದಾರೆ.
ಆದರೆ ಈ ಟ್ವೀಟ್ ವೈರಲ್ ಆಗುತ್ತಿದಂತೆ ಡಿಲೀಟ್ ಮಾಡಿದ್ದಾರೆ.