ಕೈಯಲ್ಲೇ “ರಿಲಯಾನ್ಸ್ ಜಿಯೋ” ಮೊಬೈಲ್ ಸ್ಪೋಟ..!

Date:

ಭಾರತ ಮಾರುಕಟ್ಟೆಯಲ್ಲಿ ಬಹು ಬೇಡಿಕೆಯಲ್ಲಿರುವ ಹಾಗೂ ಅತೀ ಅಗ್ಗದ ಬೆಲೆಯ ಮೂಲಕ ಜನರ ಮನ ಗೆದ್ದ ರಿಲಾಯನ್ಸ್ ಜಿಯೋ ಮೊಬೈಲ್‍ಗಾಗಿ ಜನರು ಮುಗಿ ಬಿದ್ದು ಕೊಂಡುಕೊಳ್ಳುತ್ತಿದ್ರೆ. ಇನ್ನೊಂದೆಡೆ ಗ್ರಾಹಕರಿಗೆ ಅಚ್ಚರಿ ಮೂಡಿಸೋ ಘಟನೆಯೊಂದು ಫೇಸ್‍ಬುಕ್‍ನಲ್ಲಿ ವೈರಲ್ ಆಗಿ ಹರಿದಾಡ್ತಾ ಇದೆ. ರಿಲಯಾನ್ಸ್ ಜಿಯೋ ವಾಟರ್ 1 ಸ್ಮಾರ್ಟ್ ಫೋನ್ ಸ್ಪೋಟಗೊಂಡ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ರಿಲಾಯನ್ಸ್ ಜಿಯೋ ವಾಟರ್ 1 ಸ್ಮಾರ್ಟ್ ಫೋನ್ ಕೈನಲ್ಲಿದ್ದಾಗಲೇ ಸ್ಪೀಟಗೊಂಡಿದೆ ಎಂದು ‘ಗೆಡಿ ರೂಟ್ ಜಮ್ಮು’ ಎಂಬ ಫೇಸ್‍ಬುಕ್ ಖಾತೆದಾರನೊಬ್ಬ ಆರೋಪಿಸಿದ್ದು, ಇದರಿಂದ ತನ್ನ ಕೈ ಕೂಡ ಗಾಯಗೊಂಡಿರುವುದಾಗಿ ಹೇಳಿಕೊಂಡಿದ್ದಾನೆ. ಅಷ್ಟೇ ಅಲ್ಲ ಸ್ಪೋಟಗೊಂಡ ಮೊಬೈಲ್ ಹಾಗೂ ಅದರಿಂದ ಗಾಯಗೊಂಡಿರುವ ಕೈನ ಫೋಟೋವನ್ನು ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾನೆ. ಫೇಸ್ ಬುಕ್ ಖಾತೆದಾರ ಹೇಳಿದ ಪ್ರಕಾರ ಈ ಘಟನೆ ನಡೆದದ್ದು ಜಮ್ಮು-ಕಾಶ್ಮೀರದ ಕುಥುವಾದಲ್ಲಿ ಎನ್ನಲಾಗಿದೆ. ರಿಲಾಯನ್ಸ್ ಜಿಯೋ ವಾಟರ್ 1 ಸ್ಮಾರ್ಟ್‍ಫೋನ್‍ನಿಂದ ಬ್ರೌಸ್ ಮಾಡುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎಂದು ತನ್ನ ಖಾತೆಯಲ್ಲಿ ಬರೆದುಕೊಂಡಿದ್ದಾನೆ. ಅಲ್ಲದೇ ಕೆಲವೊಂದು ಫೋಟೋವನ್ನೂ ಸಹ ಅಪ್‍ಲೋಡ್ ಮಾಡಿದ್ದಾನೆ. ಇತ್ತೀಚೆಗಷ್ಟೇ ಖ್ಯಾತ ಮೊಬೈಲ್ ತಯಾರಿಕಾ ಕಂಪನಿಯಾದ ಸ್ಯಾಮ್ಸಂಗ್ ತನ್ನ ನೋಟ್7 ಮೊಬೈಲ್‍ನಲ್ಲಿನ ಬ್ಯಾಟರಿಯಲ್ಲಿ ತಾಂತ್ರಿಕ ದೋಷವಿದ್ದ ಕಾರಣ ಅದನ್ನು ಮಾರುಕಟ್ಟೆಯಿಂದ ಹಿಂಪಡೆಯಲು ನಿರ್ಧರಿಸಿತ್ತು. ಇದಾದ ಬೆನ್ನಲ್ಲೇ ರಿಲಾಯನ್ಸ್ ಜಿಯೋ ಮೊಬೈಲ್ ಕೂಡ ಸ್ಪೋಟಗೊಂಡಿರುವ ಸುದ್ದಿ ಎಲ್ಲೆಡೆ ಹರಿದಾಡಿದೆ.

POPULAR  STORIES :

ಗಣಪತಿ ವಿಸರ್ಜನಾ ಸಮಯದ ದುರಂತದಲ್ಲಿ 12 ಮಂದಿ ಕಣ್ಣೆದುರೇ ಮುಳುಗಿದ ಹೃದಯವಿದ್ರಾವಕ ವಿಡಿಯೋ…

ರಕ್ತದಲ್ಲಿ ಕಾವೇರಿ ಎಂದು ಬರೆದುಕೊಂಡ ಕರವೇ ಕಾರ್ಯಕರ್ತ..!

ಕಾವೇರಿ ಎಫೆಕ್ಟ್: ರಸ್ತೆಯಲ್ಲಿ ಅಡುಗೆ ಮಾಡಿಕೊಂಡ ಪ್ರತಿಭಟನಾಕಾರರು..!

ಶುಕ್ರವಾರ ತಮಿಳು ಚಾನೆಲ್ಸ್ ಬಂದ್…!

ಇನ್ಮುಂದೆ ಡ್ರೈವ್ ಮಾಡಲು ಡಿಎಲ್,ಆರ್‍ಸಿ, ಡಿಜಿಲಾಕರ್‍ನಲ್ಲಿದ್ದರೆ ಸಾಕು..!

ಸೆಪ್ಟೆಂಬರ್ 9ಕ್ಕೆ ಕರ್ನಾಟಕ ಬಂದ್‍ಗೆ ಕರೆ

ಮುಸ್ಲೀಂ ಮಕ್ಕಳಿಗೆ ಕುರಾನ್ ಹೇಳಿ ಕೊಡ್ತಾಳೆ ಈ ಹಿಂದು ಯುವತಿ..!

Share post:

Subscribe

spot_imgspot_img

Popular

More like this
Related

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...