ಮೀಸಲಾತಿಗೆ ಆಗ್ರಹಿಸಿ ಒಕ್ಕಲಿಗ ಸಮುದಾಯ ಡೆಡ್ಲೈನ್

0
116

ಮೀಸಲಾತಿಗೆ ಆಗ್ರಹಿಸಿ ಒಕ್ಕಲಿಗ ಸಮುದಾಯ ಡೆಡ್ಲೈನ್ ನೀಡಿದ ವಿಚಾರ, ಬೇಡಿಕೆ ಪತ್ರ ನನ್ನ ಬಳಿಗೆ ಬಂದ ಮೇಲೆ ಪರಿಶೀಲನೆ ಮಾಡುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಈ ಬಗ್ಗೆ ಮೈಸೂರಿನ ಏರ್ಪೋರ್ಟ್ನಲ್ಲಿ ಮಾತ್ನಾಡಿದ ಅವರು, ಹಲವು ಸಮುದಾಯ ಮೀಸಲಾತಿಗೆ ಬೇಡಿಕೆ ಇಟ್ಟಿವೆ. ಈ ಬಗ್ಗೆ ಸಂವಿಧಾನದ ಚೌಕಟ್ಟಿನಲ್ಲಿ ಪರಿಶೀಲನೆ ಮಾಡಲಾಗುವುದು. ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಇದ್ದು, ಅಲ್ಲೂ ಈ ಬಗ್ಗೆ ಚರ್ಚೆ ಆಗಲಿದೆ. ಒಕ್ಕಲಿಗ ಸಮುದಾಯದ ಮೀಸಲಾತಿ ಬೇಡಿಕೆ ಪತ್ರ ಇನ್ನೂ ನನ್ನ ಕೈ ಸೇರಿಲ್ಲ. ಅದು ನನ್ನ ಬಳಿಗೆ ಬಂದ ಮೇಲೆ ಪರಿಶೀಲನೆ ಮಾಡುತ್ತೇನೆ. ಇನ್ನ ಮತದಾರರ ನಕಲಿ ಗುರುತಿನ ಚೀಟಿ, ವೆಬ್ಸೈಟ್ಗಳಿಂದ ID ಕಾರ್ಡ್ಗಳನ್ನು ಪಡೆಯುತ್ತಿರುವ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ. ಮೈಸೂರು, ಮಂಡ್ಯ ಸೇರಿ ಎಲ್ಲೆಡೆ ಭತ್ತ ಖರೀದಿ ಕೇಂದ್ರ ತೆರೆಯುತ್ತೇವೆ. ಇನ್ನ ಏಕರೂಪ ನಾಗರಿಕ ಸಂಹಿತೆ ಜಾರಿ ಬಗ್ಗೆ ಅಮಿತ್ ಶಾ ಜೊತೆ ಚರ್ಚೆ ನಡೆಸಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.

LEAVE A REPLY

Please enter your comment!
Please enter your name here