ಈತನೇ ನೋಡಿ ವಿಶ್ವದ ಅತಿ ಶ್ರೀಮಂತ ಕ್ಷೌರಿಕ..! ಈತನ ಬಳಿ ಇವೆ 250ಕ್ಕೂ ಹೆಚ್ಚು ಐಶಾರಾಮಿ ಕಾರುಗಳು..!

Date:

ಆತ ವೃತ್ತಿಯಿಂದ ಕ್ಷೌರಿಕ. ಆದರೆ ಸಾಮಾನ್ಯ ಕ್ಷೌರಿಕನಲ್ಲ. ಸಿಂಗಾಪೂರ್ ಹೇರ್ ಸ್ಟೈಲ್ ನಲ್ಲಿ ಆತ ತಜ್ಞ. ಇವರೇ ಕನ್ನಡದ ಬಹುತೇಕ ಎಲ್ಲಾ ಸ್ಟಾರ್ ಗಳಿಗೆ ಕಟಿಂಗ್ ಮಾಡುತ್ತಾರೆ. ದುಬಾರಿ ಎನಿಸಿದರೂ ವೃತ್ತಿ ಧರ್ಮದಲ್ಲಿ ಇವರನ್ನು ಮೀರಿಸುವವರಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ಸುಮಾರು 200 ಅತ್ಯಂತ ದುಬಾರಿ ಕಾರುಗಳ ಸಂಗ್ರಹವನ್ನು ಹೊಂದಿದ್ದಾರೆ.
ಇಷ್ಟಕ್ಕೂ ಯಾರಪ್ಪ ಇವರು.. ಕ್ಷೌರಿಕನಾದರೂ 250ಕ್ಕಿಂತಲೂ ಹೆಚ್ಚು ದುಬಾರಿ ಕಾರುಗಳನ್ನು ಹೊಂದಿರುವವರು ಅಂತಿರಾ..? ಇವರ ಹೆಸರು ರಮೇಶ್ ಅಂತ. ನಮ್ಮದೇ ಬೆಂಗಳೂರಿನ ಅತ್ಯಂತ ಫೇಮಸ್ ಹೇರ್ ಸ್ಟೈಲರ್. ಟೊಯೋಟಾ, ಮಾರುತಿಯಿಂದ ಹಿಡಿದು ಮರ್ಸಿಡಿಸ್ ಬೆಂಜ್ ರೇಂಜ್ ನವರೆಗೂ ಇವರ ಬಳಿ ಕಾರುಗಳ ಸಂಗ್ರಹವಿದೆ.
ರಮೇಶ್ ಅವರು ಇಷ್ಟೊಂದು ಕಾರುಗಳನ್ನು ಹೊಂದಲು ಹೇಗೆ ಸಾಧ್ಯವಾಯಿತು ಎನ್ನುವುದರ ಹಿಂದೆ ಒಂದು ದೊಡ್ಡ ಕಥೆಯೇ ಇದೆ. ಏಳನೇ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ರಮೇಶ್, ತಾಯಿಯ ಆರೈಕೆಯಲ್ಲೇ ಬೆಳೆದರು. ಮುಂದೆ ಎಲೆಕ್ಟ್ರಾನಿಕ್ಸ್ ನಲ್ಲಿ ಡಿಪ್ಲೋಮಾ ಪದವಿ ಪಡೆದರು. ಆದರೂ ಹೊಟ್ಟೆ ಪಾಡಿಗಾಗಿ ಸಲೂನ್ ಆರಂಭಿಸಿದರು. ಕ್ಷಣ ಕಾಲದಲ್ಲೇ ಉತ್ತಮ ಹೇರ್ ಸ್ಟೈಲರ್ ಎನಿಸಿಕೊಂಡರು. ಆಗಲೇ ಮನದಲ್ಲಿದ್ದ ಕಾರುಗಳ ಮೋಹವನ್ನು ಈಡೇರಿಸಿಕೊಳ್ಳಲು ಒಂದಾದ ನಂತರ ಒಂದು ಕಾರುಗಳನ್ನು ಖರೀದಿಸತೊಡಗಿದರು. 2004ರಲ್ಲಿ ಸ್ನೇಹಿತ ಸಲಹೆಯಂತೆ ಕಾರುಗಳನ್ನು ಬಾಡಿಗೆಗೆ ಬಿಡತೊಡಗಿದರು. ಬರಬರುತ್ತಾ ಅವರ ಕಾರುಗಳ ಸಂಗ್ರಹ ಇನ್ನೂರೈವತ್ತರ ಗಡಿ ದಾಟಿತು..! ಅಷ್ಟೇ ಅಲ್ಲ, ಬಾಲಿವುಡ್ ದಿಗ್ಗಜರಾದ ಅಮಿತಾಬ್ ಬಚ್ಚನ್, ಐಶ್ವರ್ಯಾ ರೈ, ಶಾರುಖ್ ಖಾನ್ ಬೆಂಗಳೂರಿಗೆ ಬಂದಾಗ, ರಮೇಶ್ ರನ್ನು ಸಂಪರ್ಕಿಸಿ ಈ ಐಶಾರಾಮಿ ಕಾರುಗಳನ್ನು ಬಾಡಿಗೆಗೆ ಪಡೆಯುತ್ತಾರೆ..!
ರಮೇಶ್ ರವರು ಎಷ್ಟೇ ಬೆಳೆದರೂ ಕೂಡಾ ತಮ್ಮ ಮೂಲ ವೃತ್ತಿಯನ್ನು ಬಿಟ್ಟಿಲ್ಲ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಇರುವ ತಮ್ಮ ಸಲೂನ್ ಗೆ ಬೆಳಗ್ಗೆ 10.30ಕ್ಕೆ ಹೋಗುತ್ತಾರೆ ಮತ್ತು ಸಂಜೆ 5.30ಕ್ಕೆ ಬರುತ್ತಾರೆ. ವಿಶೇಷವೆಂದರೆ ರಮೇಶ್ ರವರ ಬಳಿಯೇ ಕಟಿಂಗ್ ಮಾಡಿಸಿಕೊಳ್ಳಲು ದಿನಕ್ಕೆ ಹತ್ತಾರು ಜನರು ಬರುತ್ತಾರಂತೆ. ವಿಶೇಷವೆಂದರೆ ಕೊಲ್ಕತ್ತಾ, ಮುಂಬೈಗಳಿಂದಲೂ ಕೆಲವರು ಬರುತ್ತಾರೆ ಎಂದರೆ ರಮೇಶ್ ರ ಖ್ಯಾತಿಯನ್ನು ಅರಿಯಬಹುದು.

  • ರಾಜಶೇಖರ ಜೆ

If you Like this Story , Like us on Facebook  The New India Times

POPULAR  STORIES :

ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!

ಲಾಭದಾಯಕ ಕೆಲಸವನ್ನು ಬಿಟ್ಟು ಬಂದವರು..! ಅಷ್ಟಕ್ಕೂ ಇವರೆಲ್ಲಾ ಕೆಲಸ ಬಿಟ್ಟಿದ್ದೇಕೆ ಗೊತ್ತಾ..?!

ಅಲ್ಲಿ ಏನೆಲ್ಲಾ ಬಾಡಿಗೆ ಸಿಗುತ್ತೆ ಗೊತ್ತಾ..? ಜಪಾನಿಗರ ಬಾಡಿಗೆ ಪ್ರೀತಿ..!

ನಮ್ಮ ಶಂಕ್ರಣ್ಣ ಇನ್ನೂ ಇರಬೇಕಾಗಿತ್ತು..! ಹುಟ್ಟು ಹಬ್ಬದ ಶುಭಾಶಯಗಳು ಶಂಕ್ರಣ್ಣ..! ಶಂಕರ್ ನಾಗ್ ಮತ್ತೆ ಹುಟ್ಟಿಬನ್ನಿ…

ಆಕೆಗೂ ತಾನು ಗರ್ಭಿಣಿ ಅಂತ ಗೊತ್ತೇ ಇರ್ಲಿಲ್ಲ..! ಇದ್ದಕ್ಕಿದ್ದಂತೆ ಮಗು ಹುಟ್ಟಿ ಬಿಡುತ್ತೆ..!

ಒಂಬತ್ತು ವರ್ಷದ ಪೋರ ಕಂಪನಿಯೊಂದರ ಸಿಇಒ..! ಈ ಪೋರ ಆ್ಯಪ್ ಡೆವಲಪರ್, ಸೈಬರ್ ಸೆಕ್ಯುರಿಟಿ ಎಕ್ಸ್ ಪರ್ಟ್..!

 

Share post:

Subscribe

spot_imgspot_img

Popular

More like this
Related

ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಬೆಂಗಳೂರು: ನಿಷ್ಠಾವಂತ ರಾಜಕಾರಣಿಯಾಗಿದ್ದ...

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌ ಬೆಂಗಳೂರು:...

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್...

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ ವಿಜಯಪುರ: ವಿಜಯಪುರ ನಗರದಲ್ಲಿ ಮತ್ತೊಮ್ಮೆ ಭೂಕಂಪನದ...