ಅಹಂಕರಾರ, ಹಠಮಾರಿತನ ಕೊಂದ ಪ್ರೀತಿ ಇದು..! ಈ ಸ್ಟೋರಿ ಓದಿದ್ರೆ, ಖಂಡಿತಾ ನೀವು ನಿಮ್ಮ ಪ್ರೀತಿಯನ್ನು, ಸ್ನೇಹವನ್ನೂ ಉಳಿಸಿಕೊಳ್ತೀರ..!

0
79

ಅವಳಿಗೆ ಕೋಪ ಜಾಸ್ತಿ..! ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳೋದೆ ಇಲ್ಲ..! ಎಲ್ಲದಕ್ಕೂ ನಂದೇ ಸರಿ, ನಾನೇ ಸರಿ, ನನ್ನ ವಾದವೇ ಮೇಲಾಗಬೇಕೆಂಬ ಹಠಮಾರಿ..! ಇವಳಿಗೆ ಗಂಟುಬಿದ್ದದ್ದ ಇವನೂ ಕೋಪಿಷ್ಟ , ಹಠವಾದಿ..! ದೇವರು ಬೇಕಂತಲೇ ಇವರನ್ನು ಜೋಡಿ ಮಾಡಿಬಿಟ್ಟಿದ್ದನೋ ಏನೋ..?! ಇಬ್ಬರಿಗೂ ಅಹಂ..! ತಮ್ಮದೇ ಮೊಂಡು ಹಠ..! ತಾನು ನೋಡಿದ ಕುದುರೆಗೆ ಮೂರೇ ಕಾಲು ಅನ್ನೋ ಸ್ವಭಾವದವರು..! ನಾನು, ನನ್ನದು, ನಾನು ಹೇಳಿದ್ದೇ ನಡೀಬೇಕು ಅಂತಿದ್ದವರ ಪ್ರೀತಿ ಈಗ ಏನಾಯಿತು ಗೊತ್ತಾ..?! ಈ ಸ್ಟೋರಿ ಓದಿದ್ರೆ ಖಂಡಿತಾ ನೀವು ನಿಮ್ಮ ಪ್ರೀತಿಯನ್ನು, ಸ್ನೇಹವನ್ನೂ ಉಳಿಸಿಕೊಳ್ತೀರ..!
ಅವಳು ಮಾನಸ. ನೋಡೋಕೆ ತುಂಬಾ ಅಂದ್ರೆ ತುಂಬಾನೇ ಚೆನ್ನಾಗಿದ್ಲು..! ಓದುವುದು, ಹೊಸ ಹೊಸ ವಿಚಾರಗಳನ್ನು ತಿಳಿಯುವುದು ಬಿಟ್ಟರೆ ಸುಮ್ಮನೆ ಕಾಲಹರಣ ಮಾಡುವವಳಲ್ಲ..! ಹುಡುಗರಂತೂ ಇವಳ ಹಿಂದೆಯೇ ಸುತ್ತುತ್ತಿದ್ರು,..! ಆದ್ರೆ ಇವಳು ಮಾತ್ರ ಹುಡುಗರ ದ್ವೇಷಿ..! ಪ್ರಪೋಸ್ ಮಾಡಿದ್ದ ಹುಡುಗನೊಬ್ಬನಿಗೆ ಚಪ್ಪಲಿಯಲ್ಲಿ ಹೊಡೆದಿದ್ದೂ ಇದೆ..! ಅದಾದ ಮೇಲೆ ಹುಡುಗರು ಇವಳೆಂದರೆ ದೂರ ಇರ್ತಾ ಇದ್ರು..! ಆದರೆ ಅವಳದ್ದೇ ಕ್ಲಾಸಿನ ಪ್ರಕಾಶ ಅದೇನು ಮೋಡಿ ಮಾಡಿ ಬಿಟ್ಟಿದ್ದನೋ.. ಹುಡುಗರ ಜೊತೆ, ನೆಟ್ಟಗೆ ಮಾತೂ ಆಡದ ಈಕೆ ಇವನೊಡನೆ ತುಂಬಾ ಕ್ಲೋಸ್ ಆದಳು..! ಇವಳ ಪರಿಚಯ, ಸ್ನೇಹ ಕೊನೆಗೂ ಹುಟ್ಟಿದ್ದ ಪ್ರೀತಿಯಿಂದ, ಪ್ರಕಾಶ್ ಕೂಡ ಚೆನ್ನಾಗಿ ಓದೋಕೆ ಶುರುಮಾಡಿದ್ದ..! ಇವಳು ಇವನಿಗೆ ಯಾವಾಗಲೂ ಲೈಫ್ ಬಗ್ಗೆಯೇ ಟೀಚ್ ಮಾಡ್ತಾ ಇದ್ಲು…! ಹೇ, ಪ್ರಕಾಶ್ ಲೈಫು ನೀನು ಅಂದುಕೊಂಡಂತೆ ಇರಲ್ಲ ಕಣೋ..! ಈ ಡಿಗ್ರಿ ಲೈಫ್ ಎಂಜಾಯ್ ಮಾಡು.. ಬೇಡ ಅನ್ನಲ್ಲ..ಬಟ್, ಅಪ್ಪ ಅಮ್ಮನ ಕನಸಿನ ಬಗ್ಗೆಯೂ ಯೋಚನೆ ಮಾಡು..! ಚೆನ್ನಾಗಿ ಓದು, ಕೆಲಸಗಿಟ್ಟಿಸಿಕೋ ಅಂತ ಬುದ್ಧಿ ಹೇಳ್ತಾನೇ ಇರ್ತಾ ಇದ್ಲು..! ಇಬ್ಬರೂ ಒಟ್ಟಾಗಿ ಓದ್ತಾ ಇದ್ರು.. ವಿಷಯಗಳನ್ನು ಚರ್ಚೆ ಮಾಡ್ತಾ ಇದ್ರು..! ನೋಡು ನೋಡುತ್ತಿದ್ದಂತೆ ಡಿಗ್ರಿ ಮುಗಿದೇ ಬಿಟ್ಟಿತು..! ಇಬ್ಬರೂ ಎಂ.ಎ ಮಾಡೋಕೆ ಅಂತ ತೀರ್ಥಹಳ್ಳಿಯಿಂದ ಶಿವಮೊಗ್ಗದ ಕಡೆ ಬಂದ್ರು..!
ಶಿವಮೊಗ್ಗಕ್ಕೆ ಬರುವಷ್ಟರಲ್ಲಿ ಇಬ್ಬರೂ ಚೇಂಜ್ ಆಗಿ ಬಿಟ್ಟಿದ್ರು..! ಎಲ್ಲರೊಡನೆಯೂ ಖುಷಿಖುಷಿಯಿಂದ ಮಾತಾಡ್ತಾ, ಕಾಲಕಳೀತಾ ಇದ್ದ ಪ್ರಕಾಶ್ ಮಾನಸ ಬಿಟ್ಟರೆ ಪ್ರಪಂಚವೇ ಇಲ್ಲವೇನೋ ಅನ್ನುವಷ್ಟರ ಮಟ್ಟಿಗೆ ಅವಳನ್ನು ಹಚ್ಚಿಕೊಂಡು ಬಿಟ್ಟಿದ್ದ..! ಪ್ರಕಾಶನ ಸಹವಾಸದಿಂದ ಎಲ್ಲರ ಜೊತೆ ಬೆರೆಯುವುದನ್ನು, ಸ್ನೇಹ ಬೆಳೆಸುವುದನ್ನು ಮಾನಸ ಕಲಿತಿದ್ದಳು..! ಮುಂಚೆ ಎಲ್ಲರ ಜೊತೆ ಬೆರೆಯುತ್ತಿದ್ದ ಪ್ರಕಾಶ್ ಮಾನಸನ ಜೊತೆ ಬಿಟ್ಟರೆ ಯಾವ ಹುಡುಗರಜೊತೆಯೂ.. ಯಾವ ಹುಡುಗಿಯರ ಜೊತೆಯೂ ನೆಟ್ಟಗೆ ಮಾತಾಡ್ತಾ ಇರ್ಲಿಲ್ಲ..! ಮಾನಸ, ಎಲ್ಲರ ಜೊತೆ ಬೆರೆಯುತ್ತಿದ್ದಳು..! ಇಬ್ಬರಲ್ಲಾದ ಈ ಬದಾಲವಣೆಯೇ ಇವರ ಸಂಬಂಧಕ್ಕೆ ಹುಳಿ ಹಿಂಡ್ತಾ ಬಂತು..!
ಮಾನಸ ಯಾರ ಜೊತೆ ಮಾತನಾಡಿದ್ರೂ.. ಪ್ರಕಾಶ್ ಗೆ ಕೋಪ ಬರ್ತಾ ಇತ್ತು..! ಇವನು ಅಪ್ಪಿತಪ್ಪಿ ಹುಡುಗಿಯರ ಜೊತೆ ನಗುತ್ತಾ ಮಾತನಾಡಿದ್ರೆ ಸಾಕು.. ಇವಳಿಗೆ ಬೇಜಾರ್ ಆಗ್ತಾ ಇತ್ತು..! ಪ್ರಕಾಶ್ ಯಾರಿಗೂ ನೋಟ್ಸ್ ಕೊಡುವಂತಿರಲಿಲ್ಲ..! ನೋಟ್ಸ್ ಕೊಟ್ಟಿದ್ದು ಗೊತ್ತಾದ್ರೆ ಅವತ್ತು ಸಿಕ್ಕಾಪಟ್ಟೆ ಜಗಳ ಮಾಡಿ ಮಾತು ಬಿಟ್ಟು ಬಿಡ್ತಾ ಇದ್ಲು..! ಇವನೇ ಅತ್ತು ಕರೆದು ಮಾತನಾಡಿಸ ಬೇಕಿತ್ತು..! ಪ್ರಕಾಶ್ ಗೆ ಚುಚ್ಚಿ ಚುಚ್ಚಿ ಮಾತನಾಡಿ ಬೇಜಾರು ಮಾಡ್ತಾ ಇದ್ಲು..! ಇಬ್ಬರ ನಡುವೆ ಜಗಳವೂ ಆಗ್ತಾನೇ ಇತ್ತು..! ತಮ್ಮ ತಮ್ಮ ತಪ್ಪಿನ ಅರಿವಾದ ಕೂಡಲೇ, ಸಿಟ್ಟು ಕಡಿಮೆ ಆದೊಡನೇ ಇಬ್ಬರೂ ಒಬ್ಬರನೊಬ್ಬರ ಕ್ಷಮೆ ಕೇಳಿ ಮತ್ತೆ ಒಂದಾಗ್ತಾ ಇದ್ರು..!
ಹೀಗೆ ಇರುವಾಗ, ಒಮ್ಮೆ ಪ್ರಕಾಶನ ಬೆಸ್ಟ್ ಫ್ರೆಂಡ್ ಸುಹಾಸನಿಗೆ ಜಾಂಡೀಸ್ ಬರುತ್ತೆ. ಅದೂ ಪರೀಕ್ಷೆ ಸಮಯ ಬೇರೆ..! ಆಗ ಅವನನ್ನು ಹಾಸ್ಟೆಲ್ ಬಿಡಿಸಿ, ನನ್ನ ರೂಂನಲ್ಲೇ ಊಟ ಮಾಡು, ಖಾರ ಜಾಸ್ತಿ ತಿನ್ನಬಾರ್ದು ಅಂತೆಲ್ಲಾ ಹೇಳಿ, ಸುಹಾಸ್ ಬರಲ್ಲ ಅಂದ್ರೂ ಕೇಳದ ಪ್ರಕಾಶ್ ಅವನನ್ನು ತನ್ನ ರೂಂಗೆ ಕರೆದು ಕೊಂಡು ಬರ್ತಾನೆ..! ಸುಹಾಸ್ ರೂಂನಲ್ಲಿ ಇದ್ದಾನೆಂದು ಪ್ರಕಾಶ್ ಮಾನಸ ಜೊತೆ ಕಾಲಕಳೆಯೋದು ಬಿಟ್ಟು ಸುಹಾಸ್ ಜೊತೆ ರೂಮಲ್ಲೇ ಓದಿಕೊಳ್ತಾನೆ..! ಮಾನಸ ಜೊತೆ ಗಂಟೆಗಟ್ಟಲೆ ಫೋನ್ ಅಲ್ಲಿ ಮಾತಾಡಿದ್ರೂ ಅವಳದ್ದು ಒಂದೇ ಹಠ, ಡಿಪಾರ್ಟ್ ಮೆಂಟ್ ಹತ್ತಿರ ಬಾ.. ಅಲ್ಲಿಗೆ ಬಾ.. ಇಲ್ಲಿಗೆ ಬಾ ಅಂತ..! ಅದಕ್ಕೆ ಸಾರಿ, ಮಾನಸ ಸುಹಾಸ್ ಇದ್ದಾನೆ ಅವನನ್ನು ಬಿಟ್ಟು ಬರೋಕೆ ಆಗಲ್ಲ..! ಅಂತ ನೇರವಾಗಿಯೇ ಹೇಳ್ತಾ ಇದ್ದ. ಇದೇ ಅವಳಿಗೆ ಸಿಟ್ಟು ತರಿಸಿಬಿಟ್ಟಿತ್ತು,..! ನಿನಗೆ ನನಗಿಂತ ಅವನೇ ಹೆಚ್ಚೋ.. ನಿನ್ನ ದೋಸ್ತಿ ಅಲ್ವಾ.?! ಸೇವೆ ಮಾಡು ಮಾಡು..ಅಂತ ಏನೇನೋ ವ್ಯಂಗ್ಯವಾಗಿ ಮಾತಾಡ್ತಾ ಇದ್ಲು..! ಸಹಿಸಿಕೊಂಡು ಸಾಕಾಗಿದ್ದ ಪ್ರಕಾಶ್.. ನೀನು ಸ್ವಾರ್ಥಿ ಕಣೇ.. ಸುಹಾಸ್ ನನಗೆ ಕೇವಲ ಮಾಸ್ಟರ್ ಡಿಗ್ರಿಯಲ್ಲಿ ಫ್ರೆಂಡ್ ಆದವನಲ್ಲ..! ಇಬ್ಬರೂ ಬಾಲ್ಯದಿಂದಲೂ ಒಟ್ಟಿಗೆ ಆಡಿ ಬೆಳೆದವರು..! ಇಲ್ಲಿಯವರೆಗೂ ಒಟ್ಟಿಗೆ ಓದುತ್ತಾ ಬಂದಿದ್ದೇವೆ..! ನಿನ್ನ ಪರಿಚಯ ಯಾಕಾಯ್ತೋ, ಆಗಿನಿಂದ ಇವನಿಂದ ದೂರ ಆಗ್ತಾ ಬಂದಿದ್ದೇನೆ..! ನನ್ನ ಬೇರೆ ಫ್ರೆಂಡ್ಸ್ ಅನ್ನೂ ದೂರ ಮಾಡ್ಕೊಂಡಿದ್ದೇನೆ..! ಹೇಗಿದ್ದೆ ಹೇಗಾದೆ..! ಥೂ.. ನಿನ್ನ ಅಂತ ಬೈತಾನೆ..! ಇಬ್ಬರ ನಡುವೆ ಜಗಳ ಜಾಸ್ತಿ ಆಗುತ್ತೆ..! ಸುಹಾಸನೇ ಇಬ್ಬರನ್ನು ಒಂದು ಮಾಡಿಸ್ತಾನೆ..!
ಈ ಜಗಳವಾದ ಮೇಲೆ ಮಾತಾಡಿದ್ರೂ ಮೊದಲಿನಂತೆ ಇರಲಾಗಿರಲಿಲ್ಲ..! ಇಬ್ಬರಲ್ಲೂ ಕೋಪ ಬೂದಿ ಮುಚ್ಚಿದ ಕೆಂಡದಂತೆ ಇರುವಾಗಲೇ ಮಾನಸ, “ನಿನಗೆ (ಪ್ರಕಾಶ್) ಸೊಕ್ಕು ಜಾಸ್ತಿ ಕಣೋ…! ಎಲ್ಲರಿಗೂ ಸಹಾಯ ಮಾಡೋಕೆ ಹೋಗ್ಬಾರ್ದು ಕಣೋ.. ನಾನು ಇದನ್ನೆಲ್ಲಾ ಹೇಳಿದ್ರೆ ನೀನು ಸಿಟ್ಟು ಮಾಡಿಕೊಳ್ತೀ ಅಂತಾಳೆ..! ಆಗ ಪ್ರಕಾಶ್, ಹೇ.. ನಾವು ಎಲ್ಲರಿಗೂ ಹೆಲ್ಪ್ ಮಾಡ್ಬೇಕು.. ನಿನ್ನಂಗೆ ಸ್ವಾರ್ಥಿ ಆಗ್ಬಾರ್ದು ಅಂತ ತಮಾಷೆ ಮಾಡ್ತಾನೇ ಅವಳು ಹೇಳಿದ ದಾಟಿಯಲ್ಲೇ ಉತ್ತರಿಸಿದ..! ಅವಳಿಗೆ ಸ್ವಾರ್ಥಿ ಎಂದಿದ್ದೇ ಹೆಚ್ಚಾಗಿ ಬಿಡ್ತು..! ಇನ್ಯಾವತ್ತೂ ನಿನ್ನ ಜೊತೆ ಮಾತಾಡಲ್ಲ ಅಂತ ಹೊರಟು ಹೋಗಿ ಬಿಟ್ಲು..! ಹಿಂದೆ ಹಿಂದೆ ಹೋಗಿ ಪ್ರಕಾಶ್ ಮಾತಾಡಿಸಿದ್ರೂ, ಕ್ಷಮೆ ಕೇಳಿದ್ರೂ ಮಾತನಾಡದೆ ದೂರಾಗಿ ಬಿಟ್ಟಳು..! ಇವನಿಗೂ ಸಿಟ್ಟು ಜಾಸ್ತಿ ಆಯ್ತು..! ನಿನ್ನಂಥ ಸ್ವಾರ್ಥಿಗಳು, ದುರಹಂಕಾರಿಗಳು, ಸಂಬಂಧಕ್ಕೆ ಬೆಲೆ ಕೊಡದೇ ಇರೋರು ನನ್ನ ಜೊತೆ ಇರೋದು ಬೇಡ..! ನಿನ್ನ ನಂಬಿ ತಪ್ಪು ಮಾಡಿದೆ..! ಕೆಲಸ ಮಾಡಿಸಿಕೊಂಡು ಟಾಟಾ ಮಾಡೋ ಜಾಯಮಾನ ನಿಂದು ಅಂದು ಬಿಟ್ಟ..! ಅವತ್ತೇ ಕೊನೆ ಇಬ್ಬರೂ ಮಾತಾಡಿಲ್ಲವಂತೆ..! ಮೊನ್ನೆ ಮೊನ್ನೆ ಎಲ್ಲೋ ಸ್ಪರ್ಧಾತ್ಮಕ ಪರೀಕ್ಷೆ ಬರಿಯೋಕೆ ಹೋದಾಗ ಮುಖಾಮುಖಿಯಾಗಿದ್ದರಂತೆ..! ಅವಳು ಇವನ ಮುಖ ನೋಡಿದರೂ ಇವನು ಮುಖ ತಿರುಗಿಸಿಕೊಂಡು ಹೋದನಂತೆ. ಅಷ್ಟೇ ಅಲ್ಲ.. ಅಲ್ಲೇ ಪರಿಚಯವಾದ ಹುಡುಗಿಯರ ಜೊತೆ ಮಾತಾಡ್ತಾ.. ಇವಳ್ಯಾರೋ ಗೊತ್ತೇ ಇಲ್ಲ ಅನ್ನೋರೀತಿ ಇದ್ನಂತೆ..!
ನೋಡಿ, ಸ್ವಾರ್ಥ, ಅಹಂಕಾರ, ನಾನು ಮಾಡೋದೆ ಸರಿ ಅನ್ನೋ ಇಬ್ಬರ ಕೆಟ್ಟಗುಣವೇ ಇಬ್ಬರ ಪ್ರೀತಿಗೂ ಮುಳುವಾಗಿದೆ..! ಪ್ರೀತಿ, ಸ್ನೇಹದ ವಿಚಾರದಲ್ಲಂತೂ ಯಾವತ್ತೂ ಸ್ವಾರ್ಥ, ಅಹಂ, ನಂದೇ ಸರಿ ಅನ್ನೋ ವಾದ ಇರಬಾರದು..! ಇವರ ಸ್ಟೋರಿ ನೋಡಿ ನಿಮಗೇನನಿಸಿತು.. ಅಂತ ಹೇಳ್ತೀರಾ…? ಹೇಳೊ ಮೊದಲು ನಿಮ್ಮಲ್ಲೂ ಯಾರಾದರೂ ಕೋಪ, ಅಹಂನಿಂದಾಗಿ ಸ್ನೇಹಿತರನ್ನು, ಪ್ರೀತಿಪಾತ್ರರನ್ನು ದೂರಮಾಡಿಕೊಂಡಿದ್ದರೆ ದಯವಿಟ್ಟು ಒಂದುಮಾಡಿ.. ಪ್ಲೀಸ್..!

  • ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!

ಲಾಭದಾಯಕ ಕೆಲಸವನ್ನು ಬಿಟ್ಟು ಬಂದವರು..! ಅಷ್ಟಕ್ಕೂ ಇವರೆಲ್ಲಾ ಕೆಲಸ ಬಿಟ್ಟಿದ್ದೇಕೆ ಗೊತ್ತಾ..?!

ಅಲ್ಲಿ ಏನೆಲ್ಲಾ ಬಾಡಿಗೆ ಸಿಗುತ್ತೆ ಗೊತ್ತಾ..? ಜಪಾನಿಗರ ಬಾಡಿಗೆ ಪ್ರೀತಿ..!

ನಮ್ಮ ಶಂಕ್ರಣ್ಣ ಇನ್ನೂ ಇರಬೇಕಾಗಿತ್ತು..! ಹುಟ್ಟು ಹಬ್ಬದ ಶುಭಾಶಯಗಳು ಶಂಕ್ರಣ್ಣ..! ಶಂಕರ್ ನಾಗ್ ಮತ್ತೆ ಹುಟ್ಟಿಬನ್ನಿ…

ಆಕೆಗೂ ತಾನು ಗರ್ಭಿಣಿ ಅಂತ ಗೊತ್ತೇ ಇರ್ಲಿಲ್ಲ..! ಇದ್ದಕ್ಕಿದ್ದಂತೆ ಮಗು ಹುಟ್ಟಿ ಬಿಡುತ್ತೆ..!

ಒಂಬತ್ತು ವರ್ಷದ ಪೋರ ಕಂಪನಿಯೊಂದರ ಸಿಇಒ..! ಈ ಪೋರ ಆ್ಯಪ್ ಡೆವಲಪರ್, ಸೈಬರ್ ಸೆಕ್ಯುರಿಟಿ ಎಕ್ಸ್ ಪರ್ಟ್..!

LEAVE A REPLY

Please enter your comment!
Please enter your name here