ನಮ್ಮ ಶಂಕ್ರಣ್ಣ ಇನ್ನೂ ಇರಬೇಕಾಗಿತ್ತು..! ಹುಟ್ಟು ಹಬ್ಬದ ಶುಭಾಶಯಗಳು ಶಂಕ್ರಣ್ಣ..! ಶಂಕರ್ ನಾಗ್ ಮತ್ತೆ ಹುಟ್ಟಿಬನ್ನಿ…

0
94

ಅವರು ಸಿನಿಲೋಕ ಕಂಡ ಅಪರೂಪದ ನಟ, ನಿರ್ದೇಶಕ. ಅವರ ನಟನೆಯನ್ನು ಮೆಚ್ಚಿಕೊಂಡಿರುವ ನಾವು ಅವರ ಬಗ್ಗೆ ತಿಳಿಯದೇ ಇರುವುದು ತುಂಬಾ ಇದೆ..! ಸಿನಿಮಾ ಕಲಾವಿದ ಮಾತ್ರ ಆಗಿರದ ಆ ಮಹಾನ್ ವ್ಯಕ್ತಿ ಸಾಮಾಜಿಕ ಬದಲಾವಣೆಯ ಹರಿಕಾರ ಕೂಡ ಆಗಿದ್ದಾರೆ..! ಬರೀ ಸಿನಿಮಾ, ನಟನೆ, ಹಣ ಅಂತ ಕೂತವರಲ್ಲ ಇವರು..! ಇವರೊಳಗೆ ಅದೆಷ್ಟೋ ಸಮಾಜಮುಖಿ ಆಲೋಚನೆಗಳಿದ್ದವು…!
ಎಲ್ಲರಿಗೂ ಸ್ವಂತ ಮನೆಯೊಂದನ್ನು ಕಟ್ಟಿಸಿಕೊಡಬೇಕೆಂಬ ಕನಸನ್ನು ಕಂಡಿದ್ದರು..! ಇವರ ಜೊತೆ ಸಿನಿಮಾದಲ್ಲಿ ಕೆಲಸ ಮಾಡುತ್ತಿರುವವರಿಗೆಲ್ಲಾ ಸೂರೊಂದನ್ನು ಮಾಡಿಕೊಡಲು ಆಗಲೇ ನಿರ್ಧರಿಸಿ ಬಿಟ್ಟಿದ್ದರು..! ಒಮ್ಮೆ ಶೂಟಿಂಗ್ ನಡೆಯುವಾಗ, ಬಿಡುವಿನ ವೇಳೆಯಲ್ಲಿ ತನ್ನ ಆಪ್ತಮಿತ್ರ ಶಿವರಾಜ್ ಅವರ ಹತ್ತಿರ ಬಂದು.. “ಹೇ ಶಿವು ನಮ್ಮಜೊತೆ ಇರುವ ಯಾರ್ಯಾರಿಗೆ ಸ್ವಂತ ಮನೆಯಿಲ್ಲ ಅಂತ ತಿಳಿದು ಪಟ್ಟಿಯೊಂದನ್ನು ಮಾಡಿ ಕುಡು ಅಂದಿದ್ದರಂತೆ..! ಇದನ್ನು ಶಿವರಾಜ್ ಅವರೇ ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದರು..! ಅವತ್ತು ಸಂಜೆ ಹೊತ್ತಿಗೆ 200-300 ಜನರ ಲೀಸ್ಟ್ ರೆಡಿಯಾಗಿತ್ತು..! ಇವರಿಗೆ ಸಿನಿಮಾದವರ ಕಾಲೋನಿಯೊಂದನ್ನು ಮಾಡಬೇಕೆಂಬ ಮಹದಾಸೆಯಿತ್ತು..! ಕೇವಲ ಸಿನಿಮಾರಂಗದವರಿಗೆ ಮಾತ್ರವಲ್ಲದೆ ವಸತಿ ನಿರಾಶ್ರಿತರಿಗೆಲ್ಲಾ ಚಿಕ್ಕದಾದ ಮನೆಯನ್ನು ಮಾಡಿಕೊಡಬೇಕೆಂದಿದ್ದರು..! ಆ ಟೈಮಲ್ಲಿ ನಿವೇಶನ ಕಡಿಮೆ ಬೆಲೆಯಲ್ಲಿ ಸಿಗ್ತಾ ಇತ್ತು..! ಆದ್ರೆ ಮನೆ ಕಟ್ಟೋದೆ ದೊಡ್ಡ ತಲೆನೋವಾಗಿತ್ತು..! ಆಗ ಅವರ ತಲೆಯಲ್ಲಿ ಬಂದಿದ್ದೇ `ಲೋ ಕಾಸ್ಟ್ ಹೌಸಿಂಗ್’ ಅನ್ನೋ ಯೋಜನೆ..! ಈ ಸಲುವಾಗಿಯೇ ಆಸ್ಟ್ರೀಯಾಕ್ಕೆ ಹೋಗಿ ಆಧುನಿಕ ತಂತ್ರಜ್ಞಾನವೊಂದನ್ನು ತಂದಿದ್ದರು..! ಇಟ್ಟಿಗೆ ಬದಲಿಗೆ ಬೇರೆ ಬೇರೆ ವಸ್ತುಗಳನ್ನು ಬಳಸಿ ಮನೆ ಕಟ್ಟುವ ತಂತ್ರಜ್ಞಾನ ಅದಾಗಿತ್ತು..! ರಾಮಕೃಷ್ಟ ಹೆಗ್ಗಡೆ ಅವರು ಮುಖ್ಯಮಂತ್ರಿಗಳಾಗಿದ್ದ ಕಾಲವದು..! ಆಗ ಇವರಿಗೆ ಸರ್ಕಾರವೂ ಬೆಂಬಲ ನೀಡಿತ್ತು..! ಕಬ್ಬಿಣದ ಸರಳು, ಥರ್ಮೋಕೋಲ್ ಶೀಟ್ ಗಳನ್ನು ಬಳಸಿ ಮನೆಯನ್ನು ಕಟ್ಟುವ ಪ್ಲಾನ್ ಅವರದ್ದಾಗಿತ್ತು..! ಇದನ್ನೇ ಬಳಸಿ ಸುಮಾರು 50-60 ಸಾವಿರ ವೆಚ್ಚದಲ್ಲಿ 30-40 ಮನೆಗಳನ್ನು ಕಟ್ಟಿಸಿದ್ರು..! ಈ ಮನೆ ಕಟ್ಟಲು ಬೇಕಾಗುವ ವಸ್ತುಗಳನ್ನು ಆಸ್ಟ್ರೀಯಾದಿಂದ ತರಿಸಿಕೊಳ್ತಾ ಇದ್ರು..! ಹಡಗಿನಲ್ಲಿ ಬರುತ್ತಿದ್ದ ವಸ್ತುಗಳ ಸಾರಿಗೆ ವೆಚ್ಚವೇ ಜಾಸ್ತಿ ಆಗಿತ್ತು..! ಇದನ್ನು ಕಡಿಮೆ ಮಾಡ್ಬೇಕು ಅಂತ ಯೋಚನೆಯನ್ನು ಮಾಡಿ ಪ್ಲಾನ್ ಕೂಡ ರೆಡಿ ಮಾಡಿಕೊಂಡಿದ್ರು..! ಆ ವಸ್ತುಗಳನ್ನು ತಯಾರಿಸೋ ಕಾಖರ್ಾನೆಯೊಂದನ್ನು ಬೆಂಗಳೂರಲ್ಲೇ ತೆರೆಯಬೇಕೆಂದು ನಿರ್ಧರಿಸಿದ್ರು..! ಆ ಯೋಜನೆಯೂ ಕಾರಣಾಂತರಿಂದ ಅರ್ಧಕ್ಕೆ ನಿಂತು ಹೋಯ್ತು..! ಅಷ್ಟರಲ್ಲಿ ಈ ಮಹಾನ್ ವ್ಯಕ್ತಿಯೂ ನಮ್ಮನ್ನೆಲ್ಲಾ ಬಿಟ್ಟು ಹೋದರು..! ಇವರ ತಲೆಯಲ್ಲಿ ಇಂಥಹ ಅನೇಕ ಆಲೋಚನೆಗಳಿದ್ವು..! ನಮ್ಮ ದುರಾದೃಷ್ಟವೋ ಏನೋ.. ಅವರು ಬೇಗ ಮರೆಯಾದರು..! ಇವತ್ತು ಆ ಮಹಾನ್ ವ್ಯಕ್ತಿಯ ಹುಟ್ಟು ಹಬ್ಬ..! ಆ ಮರೆಯಲಾಗದ ವ್ಯಕ್ತಿ ಬೇರೆ ಯಾರೂ ಅಲ್ಲ..! ನಮ್ಮ ನಿಮ್ಮೆಲ್ಲರ ಪ್ರೀತಿಯ ಶಂಕರ್ ನಾಗ್.. ನಮ್ಮ ಶಂಕ್ರಣ್ಣ..! ನಮ್ಮೆದುರು ಇಲ್ಲದೇ ಇದ್ದರೂ ನಮ್ಮಲ್ಲೇ ಇರೋ ಶಂಕ್ರಣ್ಣಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುತ್ತಾ…….

  • ಶಶಿಧರ ಡಿ ಎಸ್ ದೋಣಿಹಕ್ಲು

LEAVE A REPLY

Please enter your comment!
Please enter your name here