ಯರಶಗುಂಬ ಬೇರು ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಕಂಡು ಬರುವ ಬೇರು ಲೈಂಗಿಕ ಸಾಮಾರ್ಥ್ಯ ಹೆಚ್ಚಿಸುತ್ತದೆ. ಇದನ್ನು ಹಿಮಾಲಯದ ವಯಾಗ್ರ ಎಂದೂ ಕೂಡ ಕರೆಯುತ್ತಾರೆ. ಈ ಬೇರು ಲೈಂಗಿಕ ಆಸಕ್ತಿಯನ್ನು ಕೆರಳಿಸುವುದಲ್ಲದೇ, ಕ್ಯಾನ್ಸರ್, ಅಸ್ತಮಾದಂತಹ ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ. ಸದ್ಯ ಒಂದು ಕೆ.ಜಿ ಯರಶಗುಂಬ ಬೇರಿಗೆ 5 ಲಕ್ಷದಿಂದ 1 ಕೋಟಿವರೆಗೆ ಬೆಲೆಯಿದೆ.
ಏಷ್ಯಾ ದೇಶಗಳ ಪರ್ವತಗಳಲ್ಲಿ ಈ ಗಿಡ ಮೂಲಿಕೆಗಳು ಹೆಚ್ಚಾಗಿ ಕಂಡು ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಬೇರಿನ ಬೇಡಿಕೆ ಹೆಚ್ಚಾಗಿದ್ದು, ಮಾರುಕಟ್ಟೆಯಲ್ಲಿ ಭಾರೀ ಮೊತ್ತಕ್ಕೆ ಮಾರಾಟವಾಗುತ್ತಿದೆ. ಹೀಗಾಗಿ ಚೀನಾ, ನೇಪಾಳ, ಟಿಬೆಟ್ ದೇಶದ ಜನರು ಈ ಅಮೂಲ್ಯ ಮೂಲಿಕೆ ಹುಡುಕಾಟದಲ್ಲಿ ತೊಡಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹವಾಮಾನದ ವೈಪರಿತ್ಯದಿಂದ ಈ ಗಿಡಗಳು ಕೂಡ ವಿನಾಶಕ್ಕೆ ಒಳಗಾಗುತ್ತಿದೆ. ಇದರಿಂದ ಇದರ ಬೇಡಿಕೆಹೆಚ್ಚಾಗಿದ್ದು, ಹಣದ ಸಂಪಾದನೆಗಾಗಿ ಗಿಡವನ್ನು ಸಂಪೂರ್ಣ ನಾಶ ಪಡಿಸುತ್ತಿದ್ದಾರೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಹಿಮಾಲಯದಲ್ಲಿ ಹೆಚ್ಚಾಗಿ ಹಿಮ ಬೀಳುವ ಸಂದರ್ಭದಲ್ಲಿ ಈ ಗಿಡ ಬೆಳೆಯುತ್ತದೆ. 3200 ರಿಂದ 3800 ಮೀಟರ್ ಎತ್ತರದ ಪರ್ವತ ಪ್ರದೇಶದಲ್ಲಿ ಬೆಳೆಯುವ ಈ ಗಿಡ ಮೂಲಿಕೆಯನ್ನು ಮೊದಲ ಬಾರಿ ಪತ್ತೆ ಹಚ್ಚಿದ್ದು ಭಾರತದ ಇಂದರ್ ಸಿಂಗ್ ಎಂಬ ವ್ಯಕ್ತಿ. ಬಳಿಕ ಈ ಔಷಧಿ ಬೇರು ಫೇಮಸ್ಸು ಆಗುತ್ತಿದ್ದಂತೆ ನೇಪಾಳದ ಹುಡುಗರು ಇದಕ್ಕೊಂದು ಮಾರುಕಟ್ಟೆ ಸೃಷ್ಟಿಸಿದರು ಎನ್ನಲಾಗಿದೆ. ಅಲ್ಲದೆ ಬೀಜಿಂಗ್ ಒಲಿಂಪಿಕ್ಸ್ ಸಂದರ್ಭದಲ್ಲಂತೂ ಈ ಗಿಡ ಮೂಲಿಕೆಗೆ ಹೊಸ ಮಾರುಕಟ್ಟೆಯನ್ನು ಸೃಷ್ಟಿಯಾಯಿತು. ಒಲಿಂಪಿಕ್ಸ್ ಸಂದರ್ಭದಲ್ಲಿ ಈ ಮೂಲಿಕೆಯ ಬೆಲೆಯು ಲಕ್ಷ ರೂಗಳಲ್ಲಿ ಮಾರಾಟವಾಗಿತ್ತು. ಆನಂತರ ಯರಶಗುಂಬ ಬೇರು ವಿಶ್ವ ಮಾರುಕಟ್ಟೆಯ ಗಮನ ಸೆಳೆದಿದೆ ಎನ್ನಲಾಗಿದೆ.
ಯರಶಗುಂಬ ಮೂಲಿಕೆಯು ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ, ಇದೊಂದು ಆಯುರ್ವೇದ ಗಿಡ ಮೂಲಿಕೆಯಾಗಿದೆ. ಇದನ್ನು ಉಸಿರಾಟದ ತೊಂದರೆ, ಮೂತ್ರಪಿಂಡದ ಸಮಸ್ಯೆ ಸೇರಿದಂತೆ ಹಲವು ರೋಗಗಳಿಗೆ ಮನೆಮದ್ದಾಗಿ ಬಳಸಬಹುದು. ಅಷ್ಟೇ ಅಲ್ಲದೆ ವೃದ್ಧಾಪ್ಯವನ್ನು ನಿಧಾನಗೊಳಿಸಿ, ದೇಹದಲ್ಲಿ ರೋಗದ ಪ್ರತಿರೋಧವನ್ನು ಹೆಚ್ಚಿಸುವಲ್ಲಿ ಈ ಗಿಡದ ಬೇರು ಸಹಕಾರಿಯಾಗಿದೆ.