RTO ಪರೀಕ್ಷೆ ಇಲ್ಲದೇ ಸಿಗಲಿದೆ DL!

Date:

ನವದೆಹಲಿ, ಜೂನ್ 16: ಡ್ರೈವಿಂಗ್ ಲೈಸೆನ್ಸ್‌ ನಿರೀಕ್ಷೆಯಲ್ಲಿರುವ ಜನರಿಗೆ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಚಾಲನಾ ಪರವಾನಗಿ ಪಡೆಯಲು ಹೊಸ ಅಧಿಸೂಚನೆ ಹೊರಡಿಸಿದ್ದು, ಈ ನಿಯಮದ ಪ್ರಕಾರ ನೀವು ಡ್ರೈವಿಂಗ್ ಲೈಸೆನ್ಸ್‌ ಪಡೆಯಲು ಇದೀಗ ಆರ್‌ಟಿಒಗೆ ಹೋಗಿ ಚಾಲನಾ ಪರೀಕ್ಷೆಗೆ ಒಳಪಡಬೇಕಾಗಿಲ್ಲ.

ಆದರೆ ಯಾವುದೇ ಸರ್ಕಾರಿ ಮಾನ್ಯತೆ ಪಡೆದ ಚಾಲನಾ ತರಬೇತಿ ಕೇಂದ್ರದಿಂದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ಕಡ್ಡಾಯವಾಗಿದೆ. ಅಂಥವರಿಗೆ ಚಾಲನಾ ಪರವಾನಗಿ ಅರ್ಜಿ ಸಲ್ಲಿಸುವಾಗ ಆರ್‌ಟಿಒದಲ್ಲಿ ನಡೆಯಲಿರುವ ಚಾಲನಾ ಪರೀಕ್ಷೆಯಿಂದ ವಿನಾಯಿತಿ ಸಿಗಲಿದೆ. ಈ ನಿಯಮ ಯಾವಾಗ ಜಾರಿಗೆ ಬರಲಿದೆ? ಮುಂದೆ ಓದಿ…

ಜುಲೈ 1ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ. ಚಾಲನಾ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸುವ ವ್ಯಕ್ತಿಗೆ ಇನ್ನು ಆರ್‌ಟಿಒದಲ್ಲಿ ಚಾಲನಾ ಪರೀಕ್ಷೆಯ ಅಗತ್ಯವಿರುವುದಿಲ್ಲ. ಅವರ ಚಾಲನಾ ಪರವಾನಗಿಯನ್ನು ಅವರು ಚಾಲನೆ ತರಬೇತಿ ಪಡೆದುಕೊಂಡ, ರಾಜ್ಯ ಸಾರಿಗೆ ಪ್ರಾಧಿಕಾರ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಖಾಸಗಿ ಚಾಲನಾ ತರಬೇತಿ ಕೇಂದ್ರದ ಪ್ರಮಾಣ ಪತ್ರವನ್ನು ಪರಿಗಣಿಸಿ ನೀಡಲಾಗುವುದು.

 

 

 

Share post:

Subscribe

spot_imgspot_img

Popular

More like this
Related

ಹಿಂದೂ ಧರ್ಮವು ಪೂಜಾ, ಆಚರಣೆಗಳಷ್ಟೇ ಅಲ್ಲ; ಅದು ಒಂದು ಜೀವನ ಶೈಲಿ: ಮೋಹನ್ ಭಾಗವತ್

ಹಿಂದೂ ಧರ್ಮವು ಪೂಜಾ, ಆಚರಣೆಗಳಷ್ಟೇ ಅಲ್ಲ; ಅದು ಒಂದು ಜೀವನ ಶೈಲಿ:...

ವಯೋವೃದ್ಧ ಗಜೇಂದ್ರನಿಗೆ ಶಿಬಿರಕ್ಕೆ ಸ್ಥಳಾಂತರಕ್ಕೆ ಈಶ್ವರ್ ಖಂಡ್ರೆ ಸೂಚನೆ

ವಯೋವೃದ್ಧ ಗಜೇಂದ್ರನಿಗೆ ಶಿಬಿರಕ್ಕೆ ಸ್ಥಳಾಂತರಕ್ಕೆ ಈಶ್ವರ್ ಖಂಡ್ರೆ ಸೂಚನೆ ಚಾಮರಾಜನಗರ: ಹಲವು ದಸರಾ...

ಐಪಿಎಲ್ 2026 ಹಿನ್ನೆಲೆ: ಮೆಟ್ರೋ ಸೇವೆ ರಾತ್ರಿ 2ರವರೆಗೆ ವಿಸ್ತರಣೆ

ಐಪಿಎಲ್ 2026 ಹಿನ್ನೆಲೆ: ಮೆಟ್ರೋ ಸೇವೆ ರಾತ್ರಿ 2ರವರೆಗೆ ವಿಸ್ತರಣೆ ಬೆಂಗಳೂರು: 2026ರ...

IPL ಆರಂಭಕ್ಕೂ ಮುನ್ನ CSK ಗೆ ಶಾಕ್: ಧೋನಿ ಆರಂಭಿಕ ಪಂದ್ಯಗಳಿಂದ ಔಟ್?

IPL ಆರಂಭಕ್ಕೂ ಮುನ್ನ CSK ಗೆ ಶಾಕ್: ಧೋನಿ ಆರಂಭಿಕ ಪಂದ್ಯಗಳಿಂದ...