ಯೂಟರ್ನ್ ಬೆಡಗಿ ಶ್ರದ್ಧಾ ಶ್ರೀನಾಥ್ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರೊಂದಿಗೆ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
ರುಸ್ತುಂ ಸಿನಿಮಾದಲ್ಲಿ ಶಿವಣ್ಣನ ಪತ್ನಿಯಾಗಿ ನಟಿಸಲಿದ್ದಾರೆ ಶ್ರದ್ಧಾ ಶ್ರೀನಾಥ್. ಈಗಾಗಲೇ ಚಿತ್ರದ ಚಿತ್ರೀಕರಣ ಶುರುವಾಗಿದೆ.
ಖಡಕ್ ಪೊಲೀಸ್ ಅಧಿಕಾರಿಯಾಗಿ ಶಿವಣ್ಣ ಕಾಣಿಸಿಕೊಳ್ಳಲಿರುವುದು ಈಗಾಗಲೇ ನಿಮಗೆ ಗೊತ್ತಿದೆ. ಶ್ರದ್ಧಾ ಅವರದ್ದು ಪೊಲೀಸ್ ಶಿವಣ್ಣ ಅವರ ಮಡದಿಯ ಪಾತ್ರ.
ದಕ್ಷಿಣ ಭಾರತದ ಹೆಸರಾಂತ ನಿರ್ದೇಶಕ ಕನ್ನಡಿಗ ರವಿವರ್ಮ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.