‘ಹಾಡು ನಿಲ್ಲಿಸಿದ ಕೋಗಿಲೆ’ ಟೈಟಲ್ ಮಾಡಿದ ಪ್ರಮಾದ…!

Date:

ಎಸ್ ಜಾನಕಿ.. ದಕ್ಷಿಣ ಭಾರತ ಸುಪ್ರಸಿದ್ದ ಹಿನ್ನಲೆ ಗಾಯಕಿಯರಲ್ಲಿ ಒಬ್ಬರು. 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ತಮ್ಮ ಅತ್ಯದ್ಭುತ ಕಂಠಗಳಿಂದ ಹಾಡುಗಳಿಗೆ ಜೀವ ತುಂಬಿದ ಸರಸ್ವತಿ.. 1957ರಲ್ಲಿ ಪ್ರಸಿದ್ದ ಸಂಗೀತ ನಿರ್ದೇಶಕರಾದ ಟಿ. ಚಲಪತಿ ರಾವ್ ಅವರ ತಮಿಳು ಚಿತ್ರ ‘ವಿಧಿಯಿನ್ ವಿಳಯಟ್ಟು’ ಚಿತ್ರಕ್ಕೆ ತಮ್ಮ ಸುಮಧುರ ಕಂಠವನ್ನು ನೀಡಿದ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ಗಾನ ಕೋಗಿಲೆ ಈ ಎಸ್ ಜಾನಕಿ ಅವರು.. ತಮ್ಮ ಮೈನವರೇಳಿಸೋ ಸ್ವರದಿಂದಲೇ ಇಡೀ ದೇಶದಾದ್ಯಂತ ತನ್ನ ಮನ್ನಣೆ ಪಡೆದ ಈ ತಾಯಿಗೆ ಸಾಮಾಜಿಕ ಜಾಲತಾಣಗಳಲ್ಲಿ ರೆಸ್ಟ್ ಇನ್ ಪೀಸ್(ಆರ್.ಐ.ಪಿ) ಸ್ಟೇಟಸ್‍ಗಳು ಒಂದು ಕ್ಷಣ ದಿಗ್ಭ್ರಮೆಗೊಳಿದ್ದಲ್ಲದೇ ಸತ್ಯಾಂಶ ಏನು ಎಂಬುದು ತಿಳಿಯದೇ ತನ್ನನ್ನು ತಾನು ಸಮಾಜದಲ್ಲಿ ಗುರುತಿಸಿಕೊಳ್ಳಬೇಕೆಂಬ ಹುಚ್ಚು ಆಸೆಗೆ ಈ ರೀತಿಯ ತಪ್ಪು ಮಾಹಿತಿ ನೀಡಿ ಎಲ್ಲರನ್ನೂ ಬೇರೆಡೆ ಸೆಳೆಯುವ ಕುತಂತ್ರಿಗಳಿಗೆ ಏನನ್ನಬೇಕೋ ಗೊತ್ತಾಗ್ತಾ ಇಲ್ಲ…
ಸುಮಾರು 60 ವರ್ಷಗಳ ತಮ್ಮ ಸಂಗೀತ ಪ್ರಯಾಣದಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ತಮ್ಮ ಸುಮಧುರ ಕಂಠವನ್ನು ನೀಡಿರೋ ಎಸ್ ಜಾನಕಿ ಅವರಿಗೆ ಪ್ರಶಸ್ತಿಗಳ ಸುರಿಮಮಳೆಯೂ ಅವರ ಹಾಡುಗಳಂತೆ ಅತೀ ವಿಸ್ತಾರವಾದದ್ದು. ಭಾರತದ ಗಾನ ಕೋಗಿಲೆ ಎಂದು ಪ್ರಖ್ಯಾತಿ ಪಡೆದ ಈ ಮಹಾನ್ ತಾಯಿಗೆ ನಾಲ್ಕು ರಾಷ್ಟ್ರೀಯ ಪ್ರಶಸ್ತಿ, 32 ರಾಜ್ಯ ಚಲನಚಿತ್ರ ಪ್ರಶಸ್ತಿ, ( ಮಲಯಾಳಂ, ತಮಿಳು, ತೆಲುಗು ಹಾಗೂ ಒರಿಯಾ) ಹಾಗೂ 2013ರಲ್ಲಿ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಹುಟ್ಟಿದ್ದು ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಾದರೂ, ಕೇರಳದಲ್ಲಿ ನೆಲೆಸಿ ಅಲ್ಲಿಂದಲೇ ಓರ್ವ ಅತ್ಯದ್ಭುತ ಪ್ರತಿಭೆಯಾಗಿ ಹೊರಹೊಮ್ಮಿದರು.
ಆದರೆ ಈಗ ಈ ಗಾನ ಕೋಗಿಲೆ ಹಾಡು ನಿಲ್ಲಿಸಿದೆ. ಅಂದಹಾಗೆ ಹಾಡು ನಿಲ್ಲಿಸಿದ ಕೋಗಿಲೆ ಅಂದ ಮಾತ್ರಕ್ಕೆ ಜನರು ಏನೆಲ್ಲಾ ಆಲೋಚನೆಗಳನ್ನು ಮಾಡ್ತಾರಲ್ವಾ..? ಭಾರತ ದೇಶ ಕಂಡ ಅತ್ಯುತ್ತಮರಲ್ಲಿ ಉತ್ತಮ ಸಂಗೀತಗಾರ್ತಿಯರಲ್ಲಿ ನಮ್ಮ ಎಸ್ ಜಾನಕಿ ಅಮ್ಮಾ ಕೂಡ ಒಬ್ಬರು ಆದರೆ ಈಗ ಅವರಿಗೆ ವಯಸ್ಸಾಗಿದೆ. ಇಂತಹ ಇಳಿ ವಯಸ್ಸಿನಲ್ಲೂ ಎಲ್ಲರನ್ನು ರಂಜಿಸಿದ್ದಾರೆ ಅಂದ್ರೆ ಅದು ನಮ್ಮ ದೊಡ್ಡ ಭಾಗ್ಯ ಹಾಗು ಅವರ ದೊಡ್ಡ ಗುಣ. ಇಂತಹ ಮಹಾನ್ ಗಾಯಕಿಯರಿಗೆ ಇಂದು ಸಾಮಾಜಿಕ ಜಾಲತಾಣಗಳಲ್ಲಿ ನೀಡಿದ ಗೌರವ ಕ್ಷಮೆಯೇ ಇಲ್ಲದ್ದು. ತನಗೆ ವಯಸ್ಸಾದ ಕಾರಣ ತಾನಿನ್ನು ಯಾವ ಸಿನಿಮಾದಲ್ಲೂ, ಅಥವಾ ಯಾವುದೇ ಸಮಾರಂಭದಲ್ಲೂ ಹಾಡಲು ಸಾಧ್ಯವಿಲ್ಲ ಎಂದು ಹೇಳಿದ ಇವರ ಈ ಹೇಳಿಕೆಯನ್ನು ಮಾಧ್ಯಮವೊಂದು ನೀಡಿದ್ದ ಟೈಟಲ್‍ನಿಂದ ಅತೀ ದೊಡ್ಡ ಮಟ್ಟದ ತಪ್ಪು ನಡೆದೇ ಹೋಗಿದೆ. ಅಷ್ಟಕ್ಕೂ ಮಾಧ್ಯಮದಲ್ಲಿ ಆ ರೀತಿ ಟೈಟಲ್ ಕೊಟ್ಟಿದ್ದಕ್ಕೆ ಈ ರೀತಿಯಾಗಿ ವರ್ತಿಸುವ ಮನಸ್ಥಿತಿಗಳಿಗೆ ಏನೆಂದರೂ ಅದು ಸಾಲದು. ತಾಲತಾಣಗಳಲ್ಲಿ ಎಸ್ ಜಾನಕಿ ಅವರು ಇಹ ಲೋಕ ತ್ಯಜಿಸಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹಬ್ಬುತ್ತಿರುವುದು ತೀರಾ ದುಃಖದ ಸಂಗತಿ. ಈ ರೀತಿ ಸ್ಟೇಟಸ್‍ಗಳನ್ನಾಕಿ ಪ್ರಚಾರ ಗಿಟ್ಟಿಸಿಕೊಂಡಿರೋ ಯಾರೇ ಆದರೂ ಅವರಿಗೆ ತಕ್ಕ ಶಿಕ್ಷೆ ಆಗಲೇ ಬೇಕು.

Like us on Facebook  The New India Times

POPULAR  STORIES :

ಆನ್‍ಲೈನ್ ಶಾಪಿಂಗ್ ಮಾಡೋಕು ಮುನ್ನ ಈ ಸ್ಟೋರಿ ಓದಿ..!

ನಿಮಗೆ ಗೊತ್ತಾ ವಾಟ್ಸಾಪ್‍ಗಿಂತ ‘ಅಲ್ಲೋ ಆಪ್’ ಸಖತ್ ಡಿಫರೆಂಟ್ ಆಗಿದೆ..!

ಐಫೋನ್-7 ಮೋಬೈಲ್‍ನ ಕೋಕ ಕೋಲದಲ್ಲಿ ಹಾಕಿ ಫ್ರೀಜರ್‍ನಲ್ಲಿ ಇಟ್ಟ ಮುಂದೇನಾಯ್ತು ಗೊತ್ತಾ.?

ಕಾವೇರಿಗಾಗಿ ಮಣ್ಣು ತಿಂದು ವಿನೂತನ ಪ್ರತಿಭಟನೆ..!

ಬೈಕ್‍ನಲ್ಲಿ ಸ್ಟಂಟ್ ಪ್ರದರ್ಶನ ಮಾಡುವ ಯುವಕರೇ ಎಚ್ಚರಾ… ಎಚ್ಚರ…!

ಚಲಿಸುತ್ತಿರುವ ಕಾರಿನಲ್ಲೇ ಯುವತಿಯರ ‘ಕಿಸ್ಸಿಂಗ್ ಕಿಸ್ಸಿಂಗ್’… ಆರ್.ಟಿ ನಗರದಲ್ಲಿ ಸರಣಿ ಅವಘಡ..!

ಚೀನಾ ತನ್ನ ದೇಶದ 6 ವರ್ಷದ ಮಕ್ಕಳನ್ನು ಭವಿಷ್ಯದ ಒಲಿಂಪಿಕ್ ದಿಗ್ಗಜರನ್ನು ಮಾಡಲು ಕೊಡುವ ಕಠಿಣ ತರಬೇತಿ..!

ತಾಮ್ರದ ಪಾತ್ರೆಯಲ್ಲಿ ಕೂಡಿಟ್ಟ ನೀರನ್ನು ಸೇವಿಸುವುದು ಉತ್ತಮ ಯಾಕೆ..?

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...