ಬಾಲಿವುಡ್ ನಟ ಸೈಫ್ ಅಲಿ ಖಾನ್ ಪತ್ನಿ ಕರೀನಾ ಕಪೂರ್ ಖಾನ್ ಮತ್ತು ಮಗ ತೈಮೂರ್ ವಿರುದ್ಧ ದೂರು ನೀಡಿದ್ದಾರೆ..! ಇದಕ್ಕೆ ಅವರಿಬ್ಬರು ಮುತ್ತು ನೀಡದಿರೋದೇ ಕಾರಣ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸೈಫ್ ಅಲಿ ಖಾನ್ ನನ್ನ ಪತ್ನಿ ನಂಗೆ ಮುತ್ತು ನೀಡುವುದಿಲ್ಲ ಎಂದಿದ್ದಾಳೆ ಎಂದು ಹೇಳಿದ್ದಾರೆ.
ಮಗ ತೈಮೂರ್ ಗೆ ಒಂದು ಮುತ್ತು ನೀಡು ಎಂದು ಕೇಳಿದರೆ , ಆತ ನನ್ನ ಕೈಗೆ ಮುತ್ತು ನೀಡ್ತಾನೆ, ಕೆನ್ನೆಗೆ ನೀಡು ಎಂದಾಗ ಮುತ್ತು ನೀಡೋ ರೀತಿ ನಾಟಕ ಮಾಡ್ತಾನೆ. ಕರೀನಾ ಕೂಡ ಅದೇ ರೀತಿ ಮಾಡ್ತಾಳೆ ಎಂದು ಹೇಳಿದ್ದಾರೆ.
ಸೈಫ್ ಅಲಿ ಖಾನ್ ಮುಂದಿನ ಚಿತ್ರದಲ್ಲಿ ನಾಗಾ ಸಾಧು ಹಂಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಆ ಪಾತ್ರಕ್ಕಾಗಿ ಅವರು ಗಡ್ಡ ಬಿಟ್ಟಿದ್ದಾರೆ. ಆದ್ದರಿಂದ ಪತ್ನಿ ಮತ್ತು ಮಗನ ಸಿಹಿಮುತ್ತಿನಿಂದ ವಂಚಿತರಾಗಿದ್ದಾರೆ.