ಭಾರತಕ್ಕೆ ಪದಕ ತಂದುಕೊಟ್ಟು ಐತಿಹಾಸಿಕ ಸಾಧನೆ ಮಾಡಿದ ಸಾಕ್ಷಿ

Date:

ಭಾರತಕ್ಕೆ ಪದಕ ಈಗ ಬರತ್ತೆ ಆಗ ಬರುತ್ತೆ ಅಂತಲೇ ರಿಯೋ ಒಲಂಪಿಕ್ಕೇ ಮುಗೀತಾ ಬಂತು. ಭರವಸೆ ಇಟ್ಟಿದ್ದ ಆಟಗಾರರೆಲ್ಲರೂ ರಿಯೋದಲ್ಲಿ ಟುಸ್.. ಆಗಿ ಹೋಗಿದ್ದಾರೆ ಕೋಟ್ಯಾಂತರ ಅಭಿಮಾನಿಗಳು ಇವರ ಮೇಲಿಟ್ಟ ಭರವಸೆಯೂ ಮಣ್ಣಲ್ಲಿ ಮಣ್ಣಾಗಿ ಹೋಗಿದೆ. ಯಾರಾದ್ರು ಭಾರತದ ಮರ್ಯಾದೆ ಉಳಿಸಲಾದರೂ ಒಂದು ಪದಕ ಗೆಲ್ಲುತ್ತಾರೆಯೇ ಎಂಬ ಕೋಟ್ಯಾನು ಕೋಟಿ ಭಾರತೀಯರ ಕನಸು ನನಸು ಮಾಡಿದ್ದು ಮಾತ್ರ ಮಹಿಳಾ ಕುಸ್ತಿಪಟು ಹರಿಯಾಣದ ಸಾಕ್ಷಿ ಮಲ್ಲಿಕ್…!
ಹೌದು. ಬುಧವಾರ ನಡೆದ 58 ಕೆಜಿ ವಿಭಾಗದ ಫ್ರೀ ಸ್ಟೈಲ್ ಸ್ಪರ್ಧೆಯಲ್ಲಿ ಸಾಕ್ಷಿ ಮಲ್ಲಿಕ್ ರಿಯೋ ಒಲಂಪಿಕ್‍ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆಯನ್ನು ಮಾಡಿದ್ದಾಳೆ. ಅಲ್ಲದೇ ಭಾರತ ಕುಸ್ತಿ ವಿಭಾಗದಲ್ಲಿ ಒಟ್ಟಾರೆಯ ಐದನೇ ಪದಕ ಇದಾಗಿದೆ.
ವಿಶ್ವದ ಒಂಭತ್ತನೇ ಶ್ರೇಯಾಂಕಿತ ವಿನಿಶಾ ಪೋಗತ್ ಗಾಯಗೊಂಡು ಕ್ವಾಟರ್ ಫೈನಲ್‍ನಲ್ಲಿ ನಿರ್ಗಮಿಸಿದಾಗ ಭಾರತದ ಪದಕ ಗೆಲ್ಲುವ ಕನಸು ನುಚ್ಚು ನೂರಾಗಿತ್ತು. 58 ಕೆಜಿ ವಿಭಾಗದಲ್ಲಿ ಸಾಕ್ಷಿ ಕ್ವಾಟರ್ ಫೈನಲ್‍ನಲ್ಲಿ 2-9 ರಿಂದ ಸೋಲು ಕಂಡಿದ್ದರು. ಆದರೆ ಕ್ವಾಟರ್ ಫೈನಲ್‍ನಲ್ಲಿ ಸಾಕ್ಷಿ ಎದುರಾಳಿಯಾಗಿದ್ದ ವಲೇರಿಯಾ ಕೊಬೋಲೋವಾ ಫೈನಲ್ ಪ್ರವೇಶಸಿದ್ದರು. ಈ ಮೂಲಕ ರಿಪೆಚಾಜ್ ಮೂಲಕ ಕಂಚಿನ ಪದಕಕ್ಕಾಗಿ ಹೋರಾಡುವ ಅವಕಾಶ ದೊರೆತಂತಾಯಿತು. ಆದರೆ ಕಂಚು ಗೆಲಲ್ಲಬೇಕಾದರೆ ಸಾಕ್ಷಿಗೆ ಎರಡು ಪಂದ್ಯಗಳನ್ನು ಗಲ್ಲಬೇಕಾದ ಸನ್ನಿವೇಶ ಒದಗಿ ಬಂದಿತ್ತು. ಮೊದಲ ಪಂದ್ಯದಲ್ಲಿ ಮಂಗೋಲಿಯಾದ ಜಾಕ್ರೂನ್ ಪುರವೊಟ್ಟಿ ವಿರುದ್ದ 10-3 ಅಂತಗಳ ಭಾರೀ ಅಂತರದ ಜಯ ಲಭಿಸಿತ್ತು. ಆದರೆ ನಿರ್ಣಾಯಕ ಎರಡನೇ ಪಂದ್ಯದಲ್ಲಿ ಕಜಕಿಸ್ತಾನದ ಐಸುಲು ಟೈಂಕೆಬೆಕೋವಾ ವಿರುದ್ದದ ಜಿದ್ದಾಗಿದ್ದಿನ ಪಂದ್ಯದಲ್ಲಿ 5-3 ರ ಅಂತರದಿಂದ ಜಯಶಾಲಿಯಾದ ಸಾಕ್ಷಿ ಇತಿಹಾಸ ನಿರ್ಮಿಸಿದರು.
ಐಸಲು ವಿರುದ್ದದ ಪಂದ್ಯದಲ್ಲಿ ಸಾಕ್ಷಿ ತಲಾ ಎರಡು ನಿಮಿಷಗಳ 9 ಅವಧಿಯ ಸ್ಪರ್ಧೆಯಲ್ಲಿ ಮೊದಲ ಅವಧಿ ಮುಗಿಯುವಾಗಲೇ 0-3ರ ಭಾರೀ ಹಿನ್ನಡೆಯಲ್ಲಿದ್ದ ಸಾಕ್ಷಿ ಎರಡನೇ ಅವಧಿಯ ಆಟದಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ 5 ಅಂಕ ಪಡೆದು ಕಂಚು ತಮ್ಮದಾಗಿಸಿಕೊಂಡರು.

POPULAR  STORIES :

ಸೆಕ್ಸ್ ಉದ್ಯಮದಲ್ಲಿ ಚೀನಾ ನಂ.1 ಭಾರತ ನಂ.7..!

ಮುಂದಿನ ದಿನಗಳಲ್ಲಿ ಮೂತ್ರಕ್ಕೂ ಬರ್ಬೋದು ಭಾರೀ ಬೇಡಿಕೆ..!

ಗಾಳಿಯಲ್ಲಿ ಕುಡಿಯುವ ನೀರು ಕಂಡು ಹಿಡಿದ ಮೊದಲ ಭಾರತೀಯ ಯುವಕ…!

ಪ್ರಾಣದ ಹಂಗು ತೊರೆದು ಪಾಕ್ ಧ್ವಜ ಕಿತ್ತೆಸೆದು ತ್ರಿವರ್ಣ ಧ್ವಜ ಹಾರಿಸಿದ ಧೀರ ಯೋಧ.

ಆಸ್ತಿಗಾಗಿ ಐಸಿಯುನಲ್ಲಿದ್ದ ತಂದೆಯ ಆಕ್ಸಿಜನ್ ಪೈಪ್ ಕಿತ್ತು ಹಾಕಿದ ಪುತ್ರಿ..!

ರೈಲು ನಿಲ್ದಾಣದಲ್ಲಿ ಸೆಲ್ಫಿ ತೆಗೆದರೆ ಐದು ವರ್ಷ ಜೈಲು..!

ಕಿಂಗ್ ಖಾನ್‍ಗೆ ಅಮೇರಿಕಾ ವಿಮಾನ ನಿಲ್ದಾಣದಲ್ಲಿ ಮತ್ತೊಮ್ಮೆ ಪಪ್ಪಿ ಶೇಮ್…!

ಸೈಕಲ್ ಕದಿಯಲು ಇಡೀ ಮರವನ್ನೇ ಕತ್ತರಿಸಿದ ಕತರ್ನಾಕ್ ಕಳ್ಳ…!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...