ಸಲ್ಮಾನ್ ನ ರೇಪ್ ಮಹಿಳೆಯ ಸಂಬಂಧವಾಗಿ ನೀಡಿದ ಬಹಿರಂಗ ಹೇಳಿಕೆಗೆ ಮಾಧ್ಯಮದಲ್ಲುಂಟಾದ ಬಿಸಿ ಬಿಸಿ ಚರ್ಚೆಗೆ ಅವನಿಂದ ಯಾವ ಪ್ರತಿಕ್ರಿಯೆಯೂ ಇಲ್ಲವಾಗಿದೆ.ಇದರಿಂದ ಕೇವಲ ಮಾಧ್ಯಮದಲ್ಲಷ್ಟೆ ಅಲ್ಲ ದೇಶದ ಹಲವೆಡೆ ಜನ ಸಾಮಾನ್ಯರೊಳಗೂ ಆಕ್ರೋಶ ವ್ಯಕ್ತವಾಗುತ್ತಿದೆ. ಜನ ಸಾಮಾನ್ಯರ ಪ್ರಕಾರ ಸಲ್ಮಾನ್ ತನ್ನ ಅಸಹ್ಯ ಹೇಳಿಕೆಗೆ ಸಂಬಂಧಿಸಿ ಯಾವುದೇ ಕ್ಷಮೆ ಕೇಳಿಲ್ಲ.ಹೀಗಿರುವಾಗ ಜನಸಾಮಾನ್ಯರೇ ಅವನಿಗೆ ಬುದ್ದಿ ಕಲಿಸಲು ಸಿದ್ದರಾಗುತ್ತಿದ್ದರೆ, ಈ ನಿಟ್ಟಿನಲ್ಲಿ ಸುನೀತ ಕೃಷ್ಣನ್ ಎಂಬ ಒಬ್ಬ ಮಹಿಳೆ ಸಲ್ಲುಗೆ ಒಂದು ಬಹಿರಂಗ ಪತ್ರ ಬರೆದಿದ್ದಾಳೆ.ಸುನೀತಾ ಬರೆದ ಪತ್ರ ಹೀಗಿದೆ….
“ಈ ಪತ್ರದಲ್ಲಿ ನಾನು ಆ ವ್ಯಕ್ತಿಯ ಹೆಸರನ್ನು ಹೇಳಲು ಇಷ್ಟ ಪಡುತ್ತಿಲ್ಲ ಯಾಕೆಂದರೆ,ಇದರಿಂದ ನಾನು ಆತನಿಗೆ ತೀರ ಗೌರವ ಕೊಟ್ಟಂಗೆ ಅನ್ಸುತ್ತೆ.ಅದೆಷ್ಟು ಕೆಟ್ದಾಗಿ ಅವ್ನು ರೇಪ್ ಬಗ್ಗೆ ನೀಡಿದ ಹೇಳಿಕೆಯಿಂದ ರೇಪ್ ಅವನಿಗೆ ಕೇವಲ ಒಂದು ಸಾಧಾರಣ ವಿಷಯವೆಂಬ ಸತ್ಯ ತೋರಿಬರುತ್ತದೆ.ಕಠೋರ ಸತ್ಯ ಏನೆಂದರೆ ಅವನ ಸೌಂದರ್ಯ ಹಾಗೂ ಅವನ ಪ್ರತಿಭೆಯಿಂದ ಅವನೊಬ್ಬ ಹೀರೋ ಆಗಿರಬಹುದು ಹಾಗೂ ಈ ವಿಷಯವನ್ನು ಕ್ಷುಲ್ಲಕ ಎಂದು ಪರಿಗಣಿಸಿರಬಹುದು.ಅವನಿಗಿರೊ ಖ್ಯಾತಿಯಿಂದ ಸಮಾಜಕ್ಕೆ ಅವನು ಜವಾಬ್ದಾರಿಯುತ ವ್ಯಕ್ತಿಯಂತೆ ನಡೆಯಬೇಕಿತ್ತು.ಆದರೆ ಇದ್ಯಾವುದರ ಬಗ್ಗೆ ಅರಿವಿಲ್ಲದೆ,ಅವನು ಈ ತರನಾದ ಆಘಾತಕಾರಿ,ನಿಂದನಾರ್ಹ ಹೇಳಿಕೆಯನ್ನು ನೀಡಿದ್ದಲ್ಲದೆ,ತನ್ನ ಸಿನಿಮಾದ ಪಾತ್ರಕ್ಕೆ ಈ ತರನಾದ ಹೋಲಿಕೆಯನ್ನು ಮಾಡಿದ್ದಾನೆ.ಇಲ್ಲಿ ನೆನಪಿಡಬೇಕಾದ ಅಂಶವೇನೆಂದರೆ ರೇಪ್ ಸಂಸ್ಕಾರಗಳು ನಮ್ಮ ಸುತ್ತಲಿದ್ದು ಈ ತರನಾದ ಆಘಾತಕಾರಿ ಹೇಳಿಕೆಯು ಅದಕ್ಕಿನ್ನೂ ಪುಷ್ಟಿಕೊಡುತ್ತದೆ.ನನಗೆ ತಿಳಿದ ಪ್ರಕಾರ ಕೇವಲ ಮೂರ್ಖರು ಮಾತ್ರ ಈ ತರನಾದ ಹೇಳಿಕೆಯನ್ನು ನೀಡಲು ಸಾಧ್ಯ ಅವನೊಬ್ಬ ನಾಚಿಕೆಗೇಡಿನ ಮನುಷ್ಯ”
ಸುನೀತಾ ಬಗ್ಗೆ ತಿಳಿಯಬೇಕೆಂದರೆ ಅವಳೊಬ್ಬ ಸಮಾಜ ಕಾರ್ಯಕರ್ತೆ ಮತ್ತು ಒಂದು ಗೇಂಗ್ ರೇಪ್ ಗೆ ಒಳಗಾದ ಮಹಿಳೆ.ಕೇವಲ 8 ನೇ ವಯಸ್ಸಿನಿಂದಲೇ ಅವಳು ಬುದ್ದಿ ಮಾಂಧ್ಯಮಕ್ಕಳಿಗಾಗಿ ನೃತ್ಯ ಹೇಳಿಕೊಡುತ್ತಿದ್ದಳು.12 ನೇ ವಯಸ್ಸಿಗೆ ಅವಳೊಂದು ಸ್ಲಮ್ ಜಾಗದಲ್ಲಿ, ಅಲ್ಲಿ ವಾಸವಾಗಿರೋ ಮಕ್ಕಳಿಗೆ ನೃತ್ಯ ಹೇಳಿಕೊಡುತ್ತಿದ್ದಳು.ಆದರೆ 15 ನೇ ವಯಸ್ಸಿಗೆ ದಲಿತ ಸಮಜಕ್ಕಾಗಿ ಕೆಲಸ ಮಾಡುತ್ತಿರುವಾಗ 8 ಜನರಿಂದ ಅವಳು ಗೇಂಗ್ ರೇಪ್ ಗೊಳಗಾದಳು.ಒಂದು ನತದೃಷ್ಟ ಯುವತಿ.ಈ ಕಾರಣಕ್ಕಾಗಿಯೇ ಅವಳು ತನ್ನ ಕೆಲಸದ ಬಗ್ಗೆ ದೃಢವಾಗಿದ್ದಾಳೆ.ಸುನೀತಾಳಂತವರು ಕೇವಲ ಸಲ್ಮಾನ್ ಗಷ್ಟೆ ಅಲ್ಲ ಈ ಸಮಾಜಕ್ಕೆ ಕಳಂಕಪ್ರಾಯರಾಗಿರೋ ಅನೇಕ ಗಂಡಸರಿಗೂ ಪಾಠ ಕಲಿಸಲು ಸಮರ್ಥರು.
ಆದ್ರೇನು???ಅಯ್ಯೊ !ಈ ಸಲ್ಮಾನ್ ವಿಷಯದಲ್ಲಿ ಮಾತ್ರ ಯಾವಾಗಲೂ ರಾಮಯಣದಲ್ಲೊಂದು ಪಿಟಿಕಾಯಣದಂತೆ ಆಗುತ್ತೆ ನೋಡಿ!
- ಸ್ವರ್ಣಲತ ಭಟ್
POPULAR STORIES :
ಕಾರ್ಮಿಕ ನಿದ್ರೆ ಮಾಡಿದ್ದಕ್ಕೆ ಬಟ್ಟೆ ಬಿಚ್ಚಿ ಹೊಡೆದ ಅವಿವೇಕಿ ಅಧಿಕಾರಿ..!
ರೈಲು ನಿಲ್ದಾಣದಲ್ಲಿ ಪುಕ್ಕಟೆ ವೈ-ಫೈನಲ್ಲಿ ಭಾರತೀಯರು ಏನ್ ಹುಡುಕುತ್ತಾರೆ? ಗೂಗಲ್ ಬಯಲು ಮಾಡಿದ ರಹಸ್ಯ!
ಅಡುಗೆ ಮನೆಯಲ್ಲಿ ಅಡಗಿಸಿಟ್ಟ ಔಷಧಿಗಳು..!!
ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ ಎನ್ನುವ ವಿವರ ಇಲ್ಲಿದೆ