“ಆಫ್ ಸ್ಕ್ರೀನಲ್ಲೂ ಚೆನ್ನಾಗಿ ನಟಿಸ್ತೀರಿ’’ : ಸುಶಾಂತ್ ಕುರಿತ ಸಲ್ಮಾನ್ ಟ್ವೀಟ್ ಗೆ ನೆಟ್ಟಿಗರು ಕಿಡಿ

Date:

ಸುಶಾಂತ್ ಬಗ್ಗೆ ಸಲ್ಮಾನ್ ಮಾಡಿದ ಟ್ವೀಟ್ ಗೆ ನೆಟ್ಟಿಗರು ಕೆಂಡಾಮಂಡಲ ಆಗಿದ್ದೇಕೆ?

ಬಾಲಿವುಡ್ ನ ಯುವ ಪ್ರತಿಭೆ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬಳಿಕ ಬಾಲಿವುಡ್ ನ ಹತ್ತಾರು ಕಹಿಸತ್ಯಗಳು ಸ್ಫೋಟಗೊಳ್ಳುತ್ತಿವೆ. ಬೂದಿ ಮುಚ್ಚಿದ ಕೆಂಡದಂತಿದ್ದ ಸ್ಫೋಟಕ ಸುದ್ದಿಗಳು ಒಂದರ ಮೇಲೊಂದರಂತೆ ಹೊರಬರುತ್ತಿವೆ. ಅವುಗಳ ಅಸಲಿಯತ್ತಿನ ಬಗ್ಗೆ ಬಿಸಿಬಿಸಿ ಚರ್ಚೆಗಳು ನಡೀತಾ ಇವೆ .

ಸಿನಿರಂಗದ ಸ್ವಜನಪಕ್ಷಪಾತ, ವಂಶಪಾರಂಪರ್ಯತೆ ಮೊದಲಾದವುಗಳ ಚರ್ಚೆ ಜೋರಾಗಿದೆ. ಸುಶಾಂತ್ ಸಿಂಗ್ ಸಾವಿಗೆ ಕರಣ್ ಜೋಹರ್ , ಮಹೇಶ್ ಭಟ್, ಸಲ್ಮಾನ್ ಖಾನ್ ಮತ್ತಿತರರೇ ಕಾರಣ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಆರೋಪಗಳ ಸುರಿಮಳೆಯೇ ಸುರಿಯುತ್ತಿದೆ . ಕೆಲ ದಿನಗಳ ಹಿಂದಷ್ಟೇ ‘ದಬಂಗ್’ ಡೈರೆಕ್ಟರ್ ಅಭಿನವ್‌ ಕಶ್ಯಪ್, ಸಲ್ಮಾನ್‌ ಖಾನ್ ಮತ್ತು ಅವರ ಕುಟುಂಬದ ಮೇಲೆ ಆರೋಪಗಳ ಮಳೆ ಸುರಿಸಿದ್ದರು. ಕಂಗನಾ ರಣಾವತ್‌, ಸೋನು ನಿಗಮ್ ಮುಂತಾದ ಸೆಲೆಬ್ರಿಟಿಗಳು ಬಾಲಿವುಡ್‌ನ ಕಹಿಕಥೆಗಳನ್ನು ತೆರೆದಿಡುವ ಪ್ರಯತ್ನ ಮಾಡ್ತಿದ್ದಾರೆ.

ಈ ಎಲ್ಲದರ ನಡುವೆ ಸಲ್ಮಾನ್ ಖಾನ್ ಮಾಡಿರುವ ಟ್ಟೀಟ್ ಮತ್ತೆ ಚರ್ಚೆಗೆ ಕಾರಣವಾಗಿದೆ, ಕೆಲ ನೆಟ್ಟಿಗರು ಸಲ್ಲು ವಿರುದ್ಧ ಕೆಂಡಾಮಂಡಲರಾಗಿದ್ದು, ಟ್ವೀಟ್ ಬಾಣ ಚುಚ್ಚುತ್ತಿದ್ದಾರೆ .

ಸುಶಾಂತ್ ಸಾವಿಗೆ ಸಲ್ಮಾನ್ ಖಾನ್ ಕಾರಣ ಎಂಬ ಮಾತುಗಳು ಕೇಳಿಬಂದಾಗ ಯಾವ್ದೇ ಪ್ರತಿಕ್ರಿಯೆ ನೀಡದಿದ್ದ ಅವರು ದಿಢೀರ್ ಟ್ವೀಟ್ ಮಾಡಿರುವುದು ಚರ್ಚೆಯನ್ನು ಹುಟ್ಟುಹಾಕಿದೆ.

‘ನನ್ನ ಅಭಿಮಾನಿಗಳಲ್ಲಿ ನಾನು ಮಾಡಿಕೊಳ್ಳುವ ವಿನಂತಿ ಏನೆಂದರೆ, ನೀವೆಲ್ಲರೂ ಸುಶಾಂತ್ ಸಿಂಗ್ ಅವರ ಅಭಿಮಾನಿಗಳ ಜೊತೆ ಕೈಜೋಡಿಸಿ. ಅವರ ಭಾವನೆಗಳಿಗೆ ಸ್ಪಂದಿಸಿ, ಅವರ ಕುಟುಂಬಕ್ಕೆ ಬೆಂಬಲ ನೀಡಿ’ ಎಂದಿರುವ ಅವರು, ‘ಪ್ರೀತಿ ಪಾತ್ರರು ಅಗಲಿದಾಗ ತುಂಬ ದುಃಖವಾಗುತ್ತದೆ’ ಎಂದು ಸಲ್ಮಾನ್ ಖಾನ್ ಟ್ವೀಟ್ ಮಾಡಿದ್ದಾರೆ .

ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಸಲ್ಲು ವಿರುದ್ಧ ಹರಿಹಾಯ್ದಿದ್ದಾರೆ . ‘ಅವರ ಸಾವಿಗೆ ನೀವೂ ಕೂಡ ಕಾರಣ. ನಿಮ್ಮ ಸಂಸ್ಥೆಯ ಸಿನಿಮಾಗಳಿಂದ ಸುಶಾಂತ್‌ರನ್ನು ನೀವು ಬ್ಯಾನ್ ಮಾಡಿದ್ರಿ…’ ಎಂದು ಒಬ್ಬರು, ‘ಆಫ್ ಸ್ಕ್ರೀನ್ ನಲ್ಲಿ ಸಹ ಚೆನ್ನಾಗಿ ನಟಿಸ್ತೀರಿ’ ಅಂತ ಇನ್ನೊಬ್ಬರು, ಹೀಗೆ ನಾನಾ ರೀತಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ .

ಈ ಕಿಡಿ ಟ್ವೀಟ್ ಗಳಿಗೆ ವ್ಯತಿರಿಕ್ತವಾಗಿ ಕೆಲವರು ಸಲ್ಮಾನ್ ಖಾನ್ ಅವರನ್ನು ಹೊಗಳಿದ್ದಾರೆ . ಬಿಗ್ ಬಾಸ್ ವಿಡಿಯೋ ತುಣಕೊಂದನ್ನು ಶೇರ್ ಮಾಡಿ ಸಲ್ಲು – ಸುಶಾಂತ್ ನಡುವೆ ಒಳ್ಳೆಯ ಬಾಂಧವ್ಯವಿತ್ತು, ಸುಳ್ಳು ಹಬ್ಬಿಸಬೇಡಿ ಎಂದೂ ಕೂಡ ಸಲ್ಲು ಪರ ಬ್ಯಾಟಿಂಗ್ ನಡೆಸಿದ್ದಾರೆ .

 

ಅವತ್ತು ಭಿಕ್ಷೆ ಬೇಡಿದ, ಚಿಂದಿ ಆಯ್ದ, ಚಹಾ ಮಾರಿದ…ಇವತ್ತು ಮಾರ್ಷಲ್ ಆರ್ಟ್ ಟೀಚರ್…!

ಇದು ಬೆಂಗಳೂರಿನ ಉಬರ್ ನಂದಿನಿ ಯಶೋಗಾಥೆ!

ವಿಜ್ಞಾನಿಯಾಗಲಿದ್ದವರು ಸ್ವಾಮೀಜಿಯಾದ್ರು – ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಸ್ಟೋರಿ 

ಅವತ್ತು ಭಿಕ್ಷೆ ಬೇಡಿದ, ಚಿಂದಿ ಆಯ್ದ, ಚಹಾ ಮಾರಿದ…ಇವತ್ತು ಮಾರ್ಷಲ್ ಆರ್ಟ್ ಟೀಚರ್…!

ವಿಶ್ವದ ಅತ್ಯಂತ ಹೆಚ್ಚು ಬೆಲೆಯ ಹಣ್ಣು ಯಾವುದು? ಈ ಹಣ್ಣಿನ ಬೆಲೆ 154019.39 ರೂಪಾಯಿಗಳು!

ಮಹೇಶ್ ಬಾಬು ‘ಸರ್ಕಾರಿ ವಾರಿ ಪಾಟ’ ಸಿನಿಮಾದಲ್ಲಿ ನಟಿಸುವ ಸ್ಯಾಂಡಲ್ ವುಡ್ ಸ್ಟಾರ್  ಸುದೀಪ್ ಅಲ್ಲ ..! ಮತ್ಯಾರು?

ಇದು ಬೆಂಗಳೂರಿನ ಉಬರ್ ನಂದಿನಿ ಯಶೋಗಾಥೆ!

ಯಾವ ರಾಶಿ, ನಕ್ಷತ್ರದಲ್ಲಿ ನಡೆಯಲಿದೆ ಸೂರ್ಯಗ್ರಹಣ? ಗ್ರಹಣ ಕಾಲದಲ್ಲಿ ಏನ್ಮಾಡ್ಬೇಕು? ರಾಶಿಗಳ ಫಲಾಫಲಗಳೇನು?

 

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...