ಕಿರಿಕ್ ಹುಡ್ಗಿ ಈಗ ಲೇಡಿ ಹುಚ್ಚ ವೆಂಕಟ್, ಮನುಷ್ಯ ರೂಪದ ರಾಕ್ಷಸಿ…?!

Date:

ಕಿರಿಕ್ ಪಾರ್ಟಿ ಸಿನಿಮಾದ ಎರಡನೇ ಹೀರೋಯಿನ್ ಸಂಯುಕ್ತ ಹೆಗಡೆ… ಒಂದೇ ಒಂದು ಸಿನಿಮಾದಿಂದ ಅತ್ಯಂತ ಹೆಚ್ಚು ಜನಪ್ರಿಯತೆಯನ್ನು ಪಡೆದಿರೋ ನಟಿ…! ಕಿರಿಕ್ ಪಾರ್ಟಿ ಸಿನಿಮಾ ರಿಲೀಸ್ ಆಗ್ತಿದ್ದಂತೆ ಸಂಯುಕ್ತ ಸಿನಿಲೋಕದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಗಿಟ್ಟಿಸಿಕೊಂಡಿದ್ದಾರೆ…

ಆದ್ರೆ, ಸಿನಿಮಾಗಳಿಗಿಂತ ವಿವಾದಗಳಲ್ಲೇ ಸುದ್ದಿ ಆಗ್ತಿರೋ ಇವರೀಗ ನಟ ಹುಚ್ಚ ವೆಂಕಟ್ ಅವರ ತಂಗಿಯ ಪಟ್ಟವನ್ನು ಅಲಂಕರಿಸಿದ್ದಾರೆ…! ಅಷ್ಟೇ ಅಲ್ಲದೆ ಮನುಷ್ಯ ರೂಪದ ರಾಕ್ಷಸಿ ಎಂದು ಟ್ರೋಲ್ ಪೇಜ್ ಗಳ ಆಹಾರವಾಗಿದ್ದಾರೆ…! ಕನ್ನಡ ಬಿಗ್ ಬಾಸ್ ಸೀಸನ್ 5ರಲ್ಲಿ ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಹೋಗಿರೋ ಸಂಯುಕ್ತ ಓವರ್ ಕಿರಿಕ್ ಮಾಡಿದ್ದಾರೆ. ಅಷ್ಟೇ ಅಲ್ಲ, ಸಮೀರ್ ಆಚಾರ್ಯ ಅವರಿಗೆ ಕಪಾಳಮೋಕ್ಷ ಮಾಡಿ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ…!


ಸೀಸನ್ 3ರ ಸ್ಪರ್ಧಿ ಹುಚ್ಚ ವೆಂಕಟ್ ಅಂದು ಪ್ರತಿಸ್ಪರ್ಧಿ ರವಿಮುರೂರ್ ಮೇಲೆ ಕೈಮಾಡಿ ಹೊರಬಂದಿದ್ದರು. ಸೀಸನ್ 4ರಲ್ಲಿ ಮತ್ತೊಂದು ಅವಕಾಶ ನೀಡಿ ಅತಿಥಿಯಾಗಿ ವೆಂಕಟ್ ಅವರನ್ನು ಬಿಗ್ ಬಾಸ್ ಮನೆಯೊಳಕ್ಕೆ ಕಳುಹಿಸಲಾಗಿತ್ತು. ಆಗ ಒಳ್ಳೆಯ ಹುಡುಗ ಪ್ರಥಮ್ ಗೆ ಹೊಡೆದು ಕೆಲವೇ ಕ್ಷಣಗಲ್ಲಿ ಮನೆಯಿಂದ ಆಚೆ ಬಂದಿದ್ದರು.


ಕಳೆದ ಎರಡು ಸೀಸನ್ ಗಳಲ್ಲಿ ಹುಚ್ಚ ವೆಂಕಟ್ ಮಾಡಿದ್ದನ್ನು ಈ ಬಾರಿ ಸಂಯುಕ್ತ ಹೆಗಡೆ ಮಾಡಿದ್ದಾರೆ…! ಸೋಶಿಯಲ್ ಮೀಡಿಯಾದಲ್ಲಿ, ಅದರಲ್ಲೂ ಟ್ರೋಲ್ ಪೇಜ್ ಗಳಲ್ಲಿ ಸಂಯುಕ್ತ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಗ್ತಿದೆ.  ಹುಚ್ಚ ವೆಂಕಟ್ ತಂಗಿ, ಹುಚ್ಚಿ ವೆಂಕಮ್ಮ, ವೆಂಕಟಮ್ಮ, ಲೇಡಿ ಹುಚ್ಚ ವೆಂಕಟ್, ಮನುಷ್ಯ ರೂಪದ ರಾಕ್ಷಸಿ ಎಂದು ಸಂಯುಕ್ತ ಹೆಗಡೆ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.

 

Share post:

Subscribe

spot_imgspot_img

Popular

More like this
Related

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...