ನಮ್ಮ ಇಂಡಸ್ಟ್ರಿಯಲ್ಲಿ 2016ರ ಅರ್ಧ ವರ್ಷವನ್ನ ಕಳೆದಾಗಿದೆ.. ಕನ್ನಡ ಸೇರಿದಂತೆ ಬೇರೆ ಭಾಷೆಯ ಅದೆಷ್ಟೋ ಚಿತ್ರಗಳು ನಮ್ಮ ನೆಲದಲ್ಲಿ ತೆರೆಕಂಡು ಸೌಂಡ್ ಮಾಡಿವೆ ಕೆಲವು ಮಕಾಡೆ ಮಲಗಿ ಬಿಟ್ಟಿವೆ.. ಹಾಗಿದ್ರೆ ಈ ಆರು ತಿಂಗಳಲ್ಲಿ ಕನ್ನಡದಲ್ಲಿ ರಿಲೀಸ್ ಆದ ಚಿತ್ರಗಳೆಷ್ಟು..? ಅವುಗಳಲ್ಲಿ ಗೆದ್ದ ಸಿನಿಮಾಗಳು ಯಾವ್ ಯಾವುದು ಅನ್ನೋದ್ರ ಬಗ್ಗೆ ಒಂದು ನೋಟ..
ಯಸ್.. ಕಾಲ ಅನ್ನೋದು ಬೇಗಾ ಕಳೆದು ಬಿಡುತ್ತೆ.. ಈಗಷ್ಟೇ ಹೊಸ ವರ್ಷವನ್ನ ಆಚರಿಸಿದಂತಿದೆ.. ಆದ್ರೆ ಈಗಾಗ್ಲೇ 2016ರ ಅರ್ಧ ಆಯಸ್ಸು ಮುಗಿದಿದೆ.. ಈ ಆರು ತಿಂಗಳಲ್ಲಿ ತೆರೆಗೆ ಬಂದ ಚಿತ್ರಗಳು ಬರೋಬ್ಬರಿ 101.. ಆದ್ರೆ ಇವೂಗಳಲ್ಲಿ ಮನಸ್ಸಲ್ಲಿ ಉಳಿದೋ ಮಾತ್ರ ಮೂರು ಮತ್ತೊಂದು..
ಈ ವರ್ಷ ಕನ್ನಡದಲ್ಲಿ ಶುಭಾರಂಭ ಮಾಡಿದ ಮೊದಲ ಸಿನಿಮಾ ಕಿಲ್ಲಿಂಗ್ ವೀರಪ್ಪನ್.. ಹ್ಯಾಟ್ರಿಕ್ ಹೀರೊ ಹಾಗೆ ರಿಯಲಿಸ್ಟಿಕ್ ಡೈರೆಕ್ಟರ್ ರಾಮ್‍ಗೋಪಾಲ್ ವರ್ಮ ನಿರ್ದೇಶನದಲ್ಲಿ ಮೂಡಿ ಬಂದ ಈ ಮೂವೀ ಕಾಡುಗಳ್ಳನ ಭೇಟೆಯನ್ನ ಸೊಗಸಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದು ಮಾತ್ರವಲ್ಲದೆ 20 ಕೋಟಿಯಷ್ಟು ಹಣವನ್ನ ಲೂಟಿ ಮಾಡಿತ್ತು….
ಈ ಸಿನಿಮಾದ ಜೊತೆಗೆ ಹಲವಾರು ಚಿತ್ರಗಳು ರಿಲೀಸ್ ಆದ್ವು.. ಅದರಲ್ಲಿ ಲಾಸ್ಟ್ ಬಸ್, ರಿಕ್ಕಿ, ವಿರಾಟ್, ಹೀಗೆ ಫೆಬ್ರವರಿಯಷ್ಟರಲ್ಲಿ 21 ಚಿತ್ರಗಳು ತೆರೆಗೆ ಬಂದ್ವು.. ಅದರಲ್ಲಿ ಲಾಸ್ಟ್ ಬಸ್ ಹಾಗೆ ರಿಕ್ಕಿ ಸಿನಿಮಾಗಳಿಗೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ತು…
ಇದಾದ ಮೇಲೆ ಮತ್ತೆ ಬಾಕ್ಸ್ ಆಫೀಸ್‍ನ ಕಿಂಗ್ ಆಗಿ ಮೆರೆಯೋಕೆ ಬಂದಿದ್ದೆ ಶಿವಣ್ಣ.. ಅದು ಶಿವಲಿಂಗ ಸಿನಿಮಾದ ಮೂಲಕ.. ಪಿ.ವಾಸು ನಿರ್ದೇಶನದ ಹಾರರ್-ಸಸ್ಪೆನ್ಸ್ ಚಿತ್ರವನ್ನ ಪ್ರೇಕ್ಷಕ ನೂರು ದಿನಗಳ ಕಾಲ ಥೇಟರ್‍ನಲ್ಲೆ ಉಳಿಸಿಬಿಟ್ಟ.. ಇನ್ನೂ ಶ್ರೀ ಮುರುಳಿ ಅಭಿನಯದ ರಥಾವರ ಕೂಡ ನಿರೀಕ್ಷೆಯನ್ನ ಹುಸಿಗೊಳಿಸಲಿಲ್ಲ.. ಮಾರ್ಚ್ 18ಕ್ಕೆ ತೆರೆಗೆ ಬಂದ ಈ ಸಿನಿಮಾ ಪ್ರೇಕ್ಷಕರನ್ನ ಹಿಡಿದಿಡುವಲ್ಲಿ ಯಶಸ್ವಿಯಾಯ್ತು.. ಉಗ್ರಂನ ಬಳಿಕ ಈ ನಟನನಿಗೆ ಮತ್ತೊಂದು ಗೆಲುವನ್ನ ತಂದುಕೊಡ್ತು..
ಮಾರ್ಚ್ ತಿಂಗಳು ಮುಗಿಯುವಷ್ಟರಲ್ಲಿ ಕನ್ನಡದಲ್ಲಿ ತೆರೆಗೆ ಬಂದ ಸಿನಿಮಾಗಳ ಸಂಖ್ಯೆ ಎಷ್ಟು ಗೊತ್ತಾ,..? 56.. ಈ ಲಿಸ್ಟ್‍ನಲ್ಲಿ ಹೇಳಿಕೊಳ್ಳ ಬಹುದಾದಂತಹ ಮತ್ತಷ್ಟು ಚಿತ್ರಗಳೆಂದ್ರೆ ಜೆಸ್ಸಿ, ಕಿರುಗೂರಿನ ಗಯ್ಯಾಳಿಗಳು, ಟೈಸನ್..
ಮತ್ತೆ ಈ ಮೂರು ತಿಂಗಳ ಬಳಿಕ ಜೈ ಮಾರುತಿ 800, ಚಕ್ರವ್ಯೂಹ, ಅಖಿರಾ, ಅಪೂರ್ವ, ತಿಥಿ, ಯೂ-ಟರ್ನ್, ಜಗ್ಗುದಾದ ಈ ಎಲ್ಲ ಮೂವೀಗಳು ಪ್ರೇಕ್ಷಕರನ್ನ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ..
ಸದ್ಯಕ್ಕೆ 45 ಸಿನಿಮಾಗಳು ರಿಲೀಸ್ ಆಗಿವೆ.. ಇದರಲ್ಲಿ ಮೇಲೆ ಹೇಳಿದ ಚಿತ್ರಗಳು ಪ್ರೇಕ್ಷಕರಿಂದ ಮನ್ನಣೆಯನ್ನ ಪಡೆದ್ರೆ ಗಲ್ಲಪೆಟ್ಟಿಗೆಯಲ್ಲಿ ಮತ್ತೊಮ್ಮೆ ಅಬ್ಬರಿಸಿದ್ದು ಮಾತ್ರ ಬಾಕ್ಸ್‍ಆಫೀಸ್ ಸುಲ್ತಾನ್ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರು.. ಜೊತೆಗೆ ಇಲ್ಲಿ ಕರ್ವ ಹಾಗೆ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರಗಳನ್ನ ಮರೆಯೋ ಹಾಗಿಲ್ಲ.. ಇನ್ನೂ ಈ ತಿಂಗಳ ಅಂತ್ಯಕ್ಕೆ ರಿಲೀಸ್ ಆಗಿರೋ ಲಕ್ಷ್ಮಣ ಹಾಗೆ ಜಿಗರ್‍ಥಂಡ ಕೂಡ ಒಳ್ಳೆ ರೆಸ್ಪಾನ್ಸ್‍ನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ..
101 ಸಿನಿಮಾಗಳು ಈ ಆರು ತಿಂಗಳಲ್ಲಿ ತೆರೆಗೆ ಬಂದಿದ್ರೆ, ಇರದಲ್ಲಿ ಮತ್ತೆ ರೀ ರಿಲೀಸ್ ಆದ ಚಿತ್ರಗಳು ಸೇರಿವೆ.. ಅವುಗಳೆಂದ್ರೆ ರಾಜ ನನ್ನ ರಾಜ, ಬಬ್ರುವಾಹನ, ಸಾಹಸಸಿಂಹ.. ಒಟ್ಟಿನಲ್ಲಿ ಈ ಎಲ್ಲ ಚಿತ್ರಗಳಲ್ಲಿ ನಿರ್ಮಾಪಕರ ಬೇಜು ತುಂಬಿಸಿದ್ದು 10 ರಿಂದ 15 ಇರಬಹುದು.. ಮತ್ತಿನ್ನಾರು ತಿಂಗಳು ಮುಂದಿದೆ.. ಈಗಾಗ್ಲೇ ರಿಲೀಸ್‍ನಲ್ಲಿ ಸೆಂಚ್ಯುರಿ ಬಾರಿಸಿರೋ ಈ ಚಂದವನದಲ್ಲಿ ಮತ್ತೆ ನೂರಕ್ಕೂ ಹೆಚ್ಚು ಸಿನಿಮಾಗಳು ರಿಲೀಸ್ ಆದ್ರೆ ಅಚ್ಚರಿಯಿಲ್ಲ..
- ಅಶೋಕ್ ರಾಜ್
POPULAR STORIES :
ಹುಡುಗಿಯರಿಗೆ ಕಿರುಕುಳ ಕೊಡ್ತಿದ್ದ 420ಗೆ ಧರ್ಮದೇಟು..! ಹೆಂಗಿದ್ದಾ ಹೆಂಗಾದ? ಬೇಕಿತ್ತಾ ಪಾಪಿ ನಿನಗಿದು?
ಭಾರತೀಯ ಬುಡಕಟ್ಟು ಜನಾಂಗದತ್ತ ಒಂದು ಪಯಣ | 25 ಸುಂದರ ಬಣ್ಣ ಬಣ್ಣದ ಭಾವಚಿತ್ರ
ಗ್ರೇಟ್ ಖಲಿಯ ಶಿಷ್ಯನನ್ನು ಸೋಲಿಸಿದ ಹರ್ಭಜನ್ ಸಿಂಗ್..!
ವೆಂಕಟ್ ಗೆ ಮತ್ತೆ ಹುಚ್ಚು ಹಿಡೀತಾ? ಹುಚ್ಚ ವೆಂಕಟ್ ರಮ್ಯಾಗೆ ಎನಂದ್ರು ಗೊತ್ತಾ..?
26 ವರ್ಷದ ಮಾಡೆಲಿಂಗ್ ಹುಡುಗಿ 62 ವರ್ಷದ ತಾತನನ್ನೇ ಯಾಕೆ ಮದುವೆಯಾದ್ಲು?
ರೈಲು ನಿಲ್ದಾಣದಲ್ಲಿ ಪುಕ್ಕಟೆ ವೈ-ಫೈನಲ್ಲಿ ಭಾರತೀಯರು ಏನ್ ಹುಡುಕುತ್ತಾರೆ? ಗೂಗಲ್ ಬಯಲು ಮಾಡಿದ ರಹಸ್ಯ!
ಪ್ರೀತಿಸಿದ ಹುಡುಗನ ಎದೆಗೊರಗಿ ಪ್ರಾಣ ಬಿಡುವ ಮೊದಲು..!? ಅವಳು ಯಾರು? ಯಾಕಾಗಿ ಅವನನ್ನು ದೂರವಿಟ್ಟಳು..!?