ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ರಾಂತಿವೀರ ‘ಸಂಗೊಳ್ಳಿ ರಾಯಣ್ಣ’ನಾಗಿ ಅಬ್ಬರಿಸಿ 5ವರ್ಷ. ಅಂತೆಯೇ ರಾಕಿಂಗ್ ಸ್ಟಾರ್ ಯಶ್ ‘ರಾಜಾಹುಲಿ’ಯಾಗಿ ಘರ್ಜಿಸಿ 4 ವರ್ಷ..!
ಹೌದು, ದರ್ಶನ್ ಅಭಿನಯದ ಕ್ರಾಂತಿವೀರ ‘ಸಂಗೊಳ್ಳಿ ರಾಯಣ್ಣ’ ಸಿನಿಮಾ 2012ರ ನವೆಂಬರ್ 1ರಂದು ಅಂದರೇ ರಾಜ್ಯೋತ್ಸವದ ದಿನದಂದೇ ತೆರೆಕಂಡಿತ್ತು. ಸ್ಯಾಂಡಲ್‍ವುಡ್‍ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಸಿನಿಮಾವಿದು. ಈ ಸಿನಿಮಾದಲ್ಲಿ ಸಂಗೊಳ್ಳಿ ರಾಯಣ್ಣನಾಗಿ ಮಿಂಚಿದ ದರ್ಶನ್ ಇಮೇಜ್ ಬದಲಾಗಿತ್ತು. ಕೇವಲ ಕನ್ನಡ ಚಿತ್ರರಂಗವಲ್ಲದೇ ಇಡೀ ದಕ್ಷಿಣ ಭಾರತದ ಚಿತ್ರರಂಗ ದರ್ಶನ್ ಅಭಿನಯಕ್ಕೆ ತಲೆಬಾಗಿತ್ತು..!
ನಾಗಣ್ಣ ನಿರ್ದೇಶನದ, ಆನಂದ್ ಅಪ್ಪುಗಲ್ ನಿರ್ಮಾಣದ ಸಂಗೊಳ್ಳಿ ರಾಯಣ್ಣ ಸಿನಿಮಾ ತೋರಿಸಲು ಸ್ವತಃ ಶಿಕ್ಷಕರೇ ತಮ್ಮ ವಿದ್ಯಾರ್ಥಿಗಳನ್ನು ಹತ್ತಿರದ ಥಿಯೇಟರ್‍ಗೆ ಕರ್ಕೊಂಡು ಹೋಗಿದ್ದರು..! ನಾವ್ಯಾರೂ ನೋಡದ, ಕೇವಲ ಪಠ್ಯದಲ್ಲಿ ಓದಿದ್ದ ಸಂಗೊಳ್ಳಿ ರಾಯಣ್ಣನೇ ನಮ್ಮೆದುರು ಬಂದಿದ್ದಾರೆ ಎನ್ನುವಂತಿತ್ತು ದರ್ಶನ್ ಅಭಿನಯ..! ಇವತ್ತಿಗೂ ಸಂಗೊಳ್ಳಿ ರಾಯಣ್ಣನನ್ನು ನೆನೆದಾಗ, ಕಲ್ಪಿಸಿಕೊಂಡಾಗ ಸಂಗೊಳ್ಳಿರಾಯಣ್ಣನಾಗಿ ಮಿಂಚಿದ ದರ್ಶನ್ ಕಣ್ಣೆದುರು ಬರುತ್ತಾರೆ..! ಹೀಗೆ ದರ್ಶನ್ ಸಂಗೊಳ್ಳಿ ರಾಯಣ್ಣನಾಗಿ ಕನ್ನಡಿಗರ ಮನಸ್ಸು ಗೆದ್ದು 5 ವರ್ಷ 2 ದಿನ..!
ಅದೇರೀತಿ ರಾಕಿಂಗ್ ಸ್ಟಾರ್ ಯಶ್ ‘ರಾಜಾಹುಲಿ’ಯಾಗಿ ಘರ್ಜಿಸಿ ಇವತ್ತಿಗೆ 4 ವರ್ಷ 2 ದಿನ..! ಕೆ. ಮಂಜು ನಿರ್ಮಾಣದ ಗುರುದೇಶ್‍ಪಾಂಡೆ ನಿರ್ದೇಶನದ ‘ರಾಜಾಹುಲಿ’ ಸಿನಿಮಾ 2013ರ ನವೆಂಬರ್ 1ರಂದು ತೆರೆಕಂಡಿತ್ತು. ಅದೇ ವರ್ಷ ಜುಲೈ 19ರಂದು ತೆರೆಕಂಡಿದ್ದ ಗೂಗ್ಲಿ ಸಿನಿಮಾ ಕೂಡ ಗೆದ್ದಿತ್ತು. ಗೂಗ್ಲಿ ರಿಲೀಸ್ ಆಗಿ ಕೇವಲ 4 ತಿಂಗಳಲ್ಲಿ ತೆರೆಕಂಡ ರಾಜಾಹುಲಿ ಕೂಡ ಸಿಕ್ಕಾಪಟ್ಟೆ ಘರ್ಜನೆ ಮಾಡಿತ್ತು. ಇವತ್ತಿಗೂ ‘ರಾಜಾಹುಲಿ’ ಗತ್ತು ಕಡಿಮೆಯಾಗಿಲ್ಲ.
ಸದ್ಯ ದರ್ಶನ್ ‘ಕುರುಕ್ಷೇತ್ರ’ ಚಿತ್ರೀಕರಣಲ್ಲಿ ಹಾಗೂ ಯಶ್ ‘ಕೆಜಿಎಫ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.