ನಟ ಸಂಜಯ್ ದತ್ ಅವರ ಜೀವನ ಕುರಿತ ಸಂಜು ಎಂಬ ಚಿತ್ರ ಬಿಡುಗಡೆಗೆ ತಯಾರಾಗಿದೆ. ಈ ವೇಳೆ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಸಂಜಯ್ ದತ್ ಅವರ ಬಗ್ಗೆ ಸ್ಪೋಟಕ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ…!
ಸಂಜಯ್ ದತ್ ಸುಮಾರು 308 ಮಹಿಳೆಯರೊಂದಿಗೆ ಹಾಸಿಗೆ ಹಂಚಿಕೊಂಡಿದ್ದಾರಂತೆ…!
ತನ್ನ ಕಣ್ಣಿಗೆ ಬಿದ್ದ ಮಹಿಳೆಯರನ್ನು, ಹುಡುಗಿಯರನ್ನು ತಮ್ಮ ತಾಯಿಯ ದೇಹ ಹೂಳಿದ್ದ ಸ್ಥಳಕ್ಕೆ ಕರೆದೊಯ್ದು ತಾಯಿಯನ್ನು ಭೇಟಿ ಮಾಡಲು ಕರೆತಂದಿದ್ದೇನೆ ಎಂದು ಅನುಕಂಪ ಗಿಟ್ಟಿಸಿಕೊಂಡು ಅವರನ್ನು ಭಾವನಾತ್ಮಕವಾಗಿ ಸೆಳೆದು ಪ್ರೇಮಪಾಶಕ್ಕೆ ಬೀಳಿಸಿಕೊಳ್ಳುತ್ತಿದ್ದರಂತೆ. ತಾಯಿ ನರ್ಗೀಸ್ ದತ್ ಅವರನ್ನು ಹೂಳಿದ್ದ ಸ್ಥಳ ಮಗ ಸಂಜಯ್ ದತ್ ಗೆ ವಂಚನೆಯ ಭಾಗವಾಗಿತ್ತು.
ತಾನು ಮೆಚ್ಚಿಕೊಂಡ ಹುಡುಗಿ ಕೈಕೊಟ್ಟರೆ ಸಂಜಯ್ ವಿಚಿತ್ರವಾಗಿ ವರ್ತಿಸುತ್ತಿದ್ದರು. ಹುಡುಗಿಯೊಬ್ಬಳು ಕೈಕೊಟ್ಟಾಗ ತನ್ನ ಸ್ನೇಹಿತನ ಹೊಸ ಕಾರನ್ನು ತೆಗೆದುಕೊಂಡು ಹೋಗಿ ಆ ಹುಡುಗಿಯ ಮನೆಮುಂದೆ ನಿಂತಿದ್ದ ಆಕೆಯ ಹೊಸ ಬಾಯ್ ಫ್ರೆಂಡ್ ಕಾರಿಗೆ ಗುದ್ದಿದ್ದರಂತೆ ಎಂದು ರಾಜ್ ಕುಮಾರ್ ಹಿರಾನಿ ಹೇಳಿದ್ದಾರೆ.