ಸಂಜನಾ… ಸಂಜನಾ ಗಲ್ರಾನಿ… ನಮಗೆ ಅವರೊಬ್ಬರು ಸಿನಿಮಾ ನಟಿ ಅಷ್ಟೆ. ಆದ್ರೆ ಅವರು ಅಷ್ಟೆ ಅಲ್ಲ. ಸಂಜನಾ ಇವತ್ತು ಸಿನಿಮಾ ನಟಿಯಾಚೆಗೆ ಹೊಸ ಹೊಸ ಪ್ರಯತ್ನ, ಪ್ರಯೋಗಗಳನ್ನು ಮಾಡ್ತಿರ್ತಾರೆ, ಮಾಡ್ತಿದ್ದಾರೆ. ಅವರ ಫೇಸ್ ಬುಕ್ ಪೇಜಲ್ಲಿ ಇದ್ದವರಿಗೆ ಸಂಜನಾ ಏನೇನು ಮಾಡ್ತಿದ್ದಾರೆ ಅನ್ನೋ ಐಡಿಯಾ ಇರುತ್ತೆ. ಇಲ್ಲ ಅಂದ್ರೆ ನಾವು ಹೇಳ್ತೀವಿ ಕೇಳಿ.
ಸಂಜನಾ ಅಂದ ತಕ್ಷಣ ಕೆಲವರು ಗಂಡಹೆಂಡತಿ ಸಂಜನಾ ಅಂತಾರೆ, ಮತ್ತೆ ಕೆಲವರು ಬಿಗ್ ಬಾಸ್ ಸಂಜನಾ ಅಂತಾರೆ. ಆದ್ರೆ ಇತ್ತೀಚೆಗೆ ಸಂಜನಾ ಹೆಸರಿನ ಜೊತೆಗೆ ಮತ್ತೊಂದು ಪದ ಸೇರಿಕೊಂಡಿದೆ.ಅಕ್ಷರ್ ಯೋಗ ಸಂಜನಾ ಅಂತ..! ಅರೆರೆ, ಇದೇನಪ್ಪ ಅಕ್ಷರ್ ಯೋಗ ಸಂಜನಾ ಅಂದ್ರೆ ಅಂತ ತಲೆಕೆಡಿಸ್ಕೋಬೇಡಿ. ಅವರು ಯೋಗ ಮಾಡೋಕೆ ಶುರು ಮಾಡಿದ್ದಾರೆ ಅಂತ ಅವರ ಹೆಸರಿನ ಜೊತೆಗೆ ಅಕ್ಷರ್ ಯೋಗ ಸೇರಿಕೊಂಡಿಲ್ಲ, ಅವರು ಯೋಗ ಮಾಡ್ಸೋಕೆ ಶುರು ಮಾಡಿದ್ದಾರೆ ಅಂತ ಆ ಹೆಸರು ಬಂದಿದೆ..ಅರೆರೆ, ಸಂಜನಾ ಯೋಗ ಮಾಡಿಸ್ತಾರ..? ಹಂಗಾದ್ರೆ ನಾವೂ ಸೇರಿಕೊಳ್ತೀವಿ, ಎಲ್ಲಿ ಸೇರಬೇಕು, ಯಾವಾಗ ಸೇರಬೇಕು ಅಂತ ಪಡ್ಡೆ ಹುಡುಗರು ರೆಡಿಯಾಗ್ತಿದ್ರೆ ಆಶ್ಚರ್ಯವೇನಿಲ್ಲ. ಆದ್ರೆ ಮ್ಯಾಟರ್ ಏನು ಗೊತ್ತಾ..? ಸಿನಿಮಾ ಮಾಡೋದರ ಜೊತೆಗೆ ಸಂಜನಾ ಈಗ ತಮ್ಮದೇ ಸ್ಟೈಲಲ್ಲಿ ಉದ್ಯಮಿ ಆಗಿದ್ದರೆ. ಅಂದ್ರೆ ಇದು ಯಾವುದೋ ಕಂಪನಿ, ಫ್ಯಾಕ್ಟರಿ ಕಟ್ಟಿ ಉದ್ಯಮಿ ಆದ ಕಥೆ ಅಲ್ಲ. ಇದು ಬೆಂಗಳೂರಿಗರನ್ನು ಆರೋಗ್ಯವಾಗಿಡೋ ಉದ್ಯಮ. ಅಂದ್ರೆ, ಸಂಜನಾ ತಮ್ಮದೇ ಸ್ವಂತ ಫಿಟ್ನೆಸ್ ಸೆಂಟರ್ ಮಾಲೀಕರಾಗಿದ್ದಾರೆ. ಇದು ನೂರರಲ್ಲಿ ಒಂದು ಅನ್ನೋ ತರದ ಜಿಮ್ ಅಲ್ಲ. ಇದು ಯೋಗದ ಮೂಲಕ ಫಿಟ್ ಆಗಿಡೋ ಫಿಟ್ನೆಸ್ ಸೆಂಟರ್. ಇದು ಅಕ್ಷರ್ ಪವರ್ ಯೋಗಾ ಅಕಾಡಮಿ. ಸಂಜನಾರ ಕನಸಿನ ಕೂಸು ಇದು.
ಈ ಅಕ್ಷರ್ ಪವರ್ ಯೋಗಾ ಅಕಾಡಮಿ ಕೇವಲ 15 ದಿನದಲ್ಲಿ ನಿಮ್ಮ ದೇಹದಿಂದ 3ಕೆಜಿ ತೂಕ ಇಳಿಸಿಬಿಡುತ್ತೆ. ತೂಕ ಇಳಿಸೋ ಇರಾದೆ ಇಲ್ಲಪ್ಪ ಅಂದ್ರೆ ನಿಮ್ಮನ್ನು ಹಿಂದೆಂದಿಗಿಂತಲೂ ಫಿಟ್ ಆಗಿ, ಆರೋಗ್ಯವಾಗಿ ಇಡುತ್ತೆ ಈ ಅಕ್ಷರ್ ಯೋಗ. ಯೋಗದ ಜೊತೆಗೆ ಪ್ರಾಣಾಯಾಮ, ಮುದ್ರೆಗಳು, ಹೀಲಿಂಗ್ ಹಾಗೂ ಇನ್ನೂ ಏನೇನೋ ಹೇಳಿಕೊಡ್ತಾರೆ. ಟೋಟಲಿ ಇದೊಂಥರಾ ಆರೋಗ್ಯಕರ ಪ್ಯಾಕೇಜ್. ಏನೇ ಮಾಡಿದ್ರೂ ಬೆಸ್ಟ್ ಇರಬೇಕು ಅನ್ನೋ ಸಂಜನಾ ತಮ್ಮ ಈ ಯೋಗಾ ಕೇಂದ್ರವನ್ನು ಕೋರಮಂಗಲದಲ್ಲಿ ನಿರ್ಮಿಸಿದ್ದಾರೆ. ಅಲ್ಲಿಗೆ ಹೋಗ್ತಿರೋರೆಲ್ಲಾ ಈಗಾಗ್ಲೆ ಸಂಜನಾ ಯೋಗಾ ಸೆಂಟರ್ ಸೂಪರ್ ಅಂತ ಹೇಳ್ತಿದ್ದಾರೆ. ಇನ್ನು ಈಗ ನಿಮ್ಮ ಸರದಿ.
ಹಾ..ಮತ್ತೊಂದು ವಿಷಯ, ಇಲ್ಲಿ ಕೇವಲ ನಿಮಗೆ ಯೋಗ ಹೇಳಿಕೊಡೋದು ಮಾತ್ರವಲ್ಲ. ನೀವು ಮುಂದೆ ಯೋಗಾ ಟೀಚರ್ ಆಗಬೇಕು ಅನ್ಕೊಂಡಿದ್ರೆ ಅದಕ್ಕೆ ಸರ್ಟಿಫಿಕೇಟ್ ಕೋರ್ಸ್ ಸಹ ಇದೆ. ಇಲ್ಲಿ ಕಲಿತು ನೀವೇ ಮುಂದೆ ಯೋಗಾ ಟೀಚರ್ ಸಹ ಆಗಬಹುದು. ಅಕ್ಷರ್ ಅಕಾಡಮಿ ಒಳಗೆ ಅತ್ಯದ್ಬುತ ಪ್ರೊಫೇಶನಲ್ ಟ್ರೇನರ್ ಗಳಿದ್ದಾರೆ. ಇದೊಂಥರ ಹೋಮ್ಲಿ ಎನ್ವಿರಾನ್ಮೆಂಟ್ ಅಂತಾರೆ ಸಂಜನಾ..! ಇನ್ನೇನು ಈಗಲೇ ಕರೆಮಾಡಿ ರಿಜಿಸ್ಟರ್ ಮಾಡ್ಕೊಳಿ… ಸಂಜನಾ ಫ್ಯಾನ್ಸ್ ಅಂತು ಯೋಚ್ನೆ ಮಾಡೋ ಹಾಗೇ ಇಲ್ಲ..
ಕಾಲ್ ಮಾಡಿ ಇನ್ಯಾಕೆ ತಡ…
Sanjjanaa’s koramangala AksharPowerYoga – 9741117687
ದಿ ನ್ಯೂ ಇಂಡಿಯನ್ ಟೈಮ್ಸ್ ಓದುಗರಿಗೆ ಒಂದು ವಾರ ಉಚಿತ,
ಈ ಲಿಂಕ್ ಕ್ಲಿಕ್ ಮಾಡಿ ರಿಜಿಸ್ಟರ್ ಆಗಿ : Sanjjanaa’s koramangala poweryoga academy
POPULAR STORIES :
ತನ್ನ ಸಿನಿಮಾವನ್ನ ನೋಡಿ ಆತ್ಮಹತ್ಯೆ ಮಾಡಿಕೊಂಡ ನಿರ್ಮಾಪಕ..!
ವಾರ್ ವಾರ್ ಗಿತ್ತಿಯರಲ್ಲ… ಓರಗಿತ್ತಿಯರು..!
ಅಪ್ಪಾಜಿ ಹುಟ್ಟುಹಬ್ಬಕ್ಕೆ ಅಪ್ಪು ಬರಲಿಲ್ಲ ಯಾಕೆ..?
ಮಂದಿನ ಮೆಟ್ರೊರೈಲ್ ಬರುತ್ತಲೇ ಜಿಗಿಯುವ ಯೋಚ್ನೆಯಲ್ಲಿದ್ದ ನನ್ನ ಕೈನ ಯಾರೊ ಹಿಂದಕ್ಕೆಳೆದರು..!
ಮಿಸ್ಡ್ ಕಾಲ್ ಗೆಳೆಯ..! ಅವನ ಸಾವಿನ ಜೊತೆ ಇವಳು ಒಂದಾದಳು..!?
ಮೋದಿ ದೇಹದಲ್ಲಿ ಅಹ್ಮದ್ ಖಾನ್ `ಆತ್ಮ..!!’ ಮೋದಿಯಲ್ಲ, ಇಂದಿರಾ ಗಾಂಧಿಯಿದ್ದಿದ್ದರೂ ಆಗುತ್ತಿತ್ತು ಮಾರಣಹೋಮ..!!
`ಸೆಕ್ಸ್’ ಸೈಟುಗಳ ಹಾಟ್ ವಿಚಾರ..!? ಅಶ್ಲೀಲ ಎಂಎಂಎಸ್ ಹೇಗೆಲ್ಲಾ ಸೃಷ್ಟಿಯಾಗುತ್ತೆ ಗೊತ್ತಾ..!?