ಮಹೇಶ್ ಬಾಬು ‘ಸರ್ಕಾರಿ ವಾರಿ ಪಾಟ’ ಸಿನಿಮಾದಲ್ಲಿ ನಟಿಸುವ ಸ್ಯಾಂಡಲ್ ವುಡ್ ಸ್ಟಾರ್  ಸುದೀಪ್ ಅಲ್ಲ ..! ಮತ್ಯಾರು?

Date:

ಮಹೇಶ್ ಬಾಬು ‘ಸರ್ಕಾರಿ ವಾರಿ ಪಾಟ’ ಸಿನಿಮಾದಲ್ಲಿ ನಟಿಸುವ ಸ್ಯಾಂಡಲ್ ವುಡ್ ಸ್ಟಾರ್  ಸುದೀಪ್ ಅಲ್ಲ ..! ಮತ್ಯಾರು?

ಟಾಲಿವುಡ್ ಸ್ಟಾರ್ ನಟ ಮಹೇಶ್ ಬಾಬು ಅಭಿನಯದ `ಸರ್ಕಾರಿ ವಾರಿ ಪಾಟ’ ಸಿನಿಮಾದಲ್ಲಿ ಕನ್ನಡದ ಸ್ಟಾರ್ ನಟರೊಬ್ಬರು ನಟಿಸ್ತಾರೆ ಅನ್ನೋ ಸುದ್ದಿ ಬಹಳ ದಿನಗಳಿಂದ ಕೇಳಿಬರುತ್ತಲೇ ಇದೆ . ಈಗಾಗಲೇ ಸ್ಯಾಂಡಲ್ ವುಡ್ ಆಚೆಗೂ ಸಖತ್ ಸದ್ದು ಮಾಡ್ತಿರೋ ಕನ್ನಡದ ‘ಪೈಲ್ವಾನ್’ ಕಿಚ್ಚ ಸುದೀಪ್ ‘ಸರ್ಕಾರಿ ವಾರಿ ಪಾಟ’ದಲ್ಲಿ ಅಭಿನಯಿಸ್ತಾರೆ ಅನ್ನೋ ಸುದ್ದಿ ಹರಿದಾಡಿತ್ತು . ಆದರೆ ಇದೀಗ ಸುದೀಪ್ ಬದಲು ಮತ್ತೊಬ್ಬ ಸ್ಟಾರ್ ಹೆಸರು ಕೇಳಿಬರುತ್ತಿದೆ. ಆ ಸ್ಟಾರ್ ಬೇರಾರು ಅಲ್ಲ ಕನ್ನಡ ಚಿತ್ರರಂಗದ ರಿಯಲ್ ಸ್ಟಾರ್ ಉಪೇಂದ್ರ ..!

ಹೌದು, ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ನಟನೆಯ ‘ಸರ್ಕಾರಿ ವಾರಿ ಪಾಟ’ ಸಿನಿಮಾದಲ್ಲಿ `ಅಭಿಮಾನಿಗಳ ಚಕ್ರವರ್ತಿ` ಉಪೇಂದ್ರ ನಟಿಸ್ತಾರೆಂಬ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಉಪ್ಪಿ ಈ ಹಿಂದೆ  ಅಲ್ಲು ಅರ್ಜುನ್ ಅವರ `ಸನ್ ಆಫ್ ಸತ್ಯಮೂರ್ತಿ’ ಸಿನಿಮಾದಲ್ಲಿ ಅಭಿನಯಿಸಿದ್ದರು . ಆ ಸಿನಿಮಾ ಸಖತ್ ಹಿಟ್ ಕೂಡ ಆಗಿತ್ತು . ಇದೀಗ ಉಪ್ಪಿ ಮಹೇಶ್ ಬಾಬು ಜೊತೆ ಅಭಿನಯಿಸಲಿದ್ದಾರೆ ಎಂದು ಹೇಳಲಾಗುತ್ತಿದೆ .

‘ಸರ್ಕಾರಿ ವಾರಿ ಪಾಟ’ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಸುದೀಪ್ ಅಭಿನಯಿಸ್ತಾರೆ ಎಂಬ ಸುದ್ದಿ ಇತ್ತು . ಈಗ ಸುದೀಪ್ ಬದಲು ಉಪೇಂದ್ರ ಹೆಸರು ಕೇಳಿಬರುತ್ತಿದೆ . ಉಪ್ಪಿ ಈಗಾಗಲೇ ಕಥೆ ಕೇಳಿದ್ದು, ಗ್ರೀನ್ ಸಿಗ್ನಲ್ ಕೊಡುವುದೊಂದೇ ಬಾಕಿ ಇದೆ ಎನ್ನಲಾಗಿದೆ .

`ಗೀತಾ ಗೋವಿಂದಂ’ ಡೈರೆಕ್ಟರ್  ಪರುಶಯರಾಮ್ ‘ಸರ್ಕಾರಿ ವಾರಿ ಪಾಟ’ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ .

ಕರ್ನಾಟಕದಲ್ಲಿ ತೆಲುಗು ಪ್ರೇಕ್ಷಕರು ಹೆಚ್ಚಿರೋದ್ರಿಂದ ಕನ್ನಡ ನಟರಿಗೆ ಹೆಚ್ಚಿನ ಅವಕಾಶ ನೀಡುವುದಾಗಿ ಮಹೇಶ್ ಬಾಬು ಈ ಹಿಂದೆ ಹೇಳಿದ್ದರು . ಅಲ್ಲದೆ ಉಪ್ಪಿಗೆ ತೆಲುಗು ಮಾತಾಡೋ ರಾಜ್ಯಗಳಲ್ಲೂ ಹೆಚ್ಚು ಅಭಿಮಾನಿಗಳಿರುವುದರಿಂದ ಅವರನ್ನು ತಂಡ ಕೂಡಿಸಿಕೊಳ್ಳಲು ‘ಸರ್ಕಾರಿ ವಾರಿ ಪಾಟ’ ಟೀಮ್ ಪ್ಲ್ಯಾನ್ ಮಾಡಿದೆ ಎಂದು ತಿಳಿದುಬಂದಿದೆ .  ಉಪ್ಪಿ  ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡ್ರೆ ಅವರು ಮತ್ತು ಮಹೇಶ್ ಬಾಬು ಅಭಿಮಾನಿಗಳಿಗೆ ಭರ್ಜರಿ ಸಿನಿಹಬ್ಬ ಪಕ್ಕಾ ..!

ಇನ್ನು ನಾಯಕಿ ವಿಚಾರಕ್ಕೆ ಬರೋದಾದ್ರೆ ‘ಭರತ್‌ ಅನೇ ನೇನು’ ಖ್ಯಾತಿಯ ಕಿಯಾರಾ ಅಡ್ವಾಣಿ ಮತ್ತೊಮ್ಮೆ ‘ಪ್ರಿನ್ಸ್‌’ಗೆ ನಾಯಕಿಯಾಗುವ ಸಾಧ್ಯತೆಗಳಿವೆ ಎನ್ನಲಾಗಿತ್ತು. ಆದರೆ ಇದೀಗ ಆ ಜಾಗಕ್ಕೆ ಕೀರ್ತಿ ಸುರೇಶ್ ಬಂದಿದ್ದಾರೆ. ಇತ್ತೀಚೆಗೆ ಅಭಿಮಾನಿಗಳೊಂದಿಗೆ ಸೋಶಿಯಲ್‌ ಮೀಡಿಯಾದಲ್ಲಿ ಲೈವ್ ಚಾಟ್ ಮಾಡುವಾಗ ಮಹೇಶ್ ಬಾಬು ಜೊತೆ ಸಿನಿಮಾ ಮಾಡುತ್ತಿರುವ ವಿಚಾರವನ್ನು ಅವರು ಅಧಿಕೃತವಾಗಿ ಹೇಳಿದ್ದರು. ಇನ್ನು ಉಪೇಂದ್ರ ಯಾವಾಗ ಒಪ್ಪಿಗೆ ನೀಡ್ತಾರೆ ಅನ್ನೋದು ಸದ್ಯದ ಕುತೂಹಲ ..!

ವಿಶ್ವದ ಅತ್ಯಂತ ಹೆಚ್ಚು ಬೆಲೆಯ ಹಣ್ಣು ಯಾವುದು? ಈ ಹಣ್ಣಿನ ಬೆಲೆ 154019.39 ರೂಪಾಯಿಗಳು!

ದೇಶದ ಮೊದಲ ಮಹಿಳಾ ಸರ್ಫರ್ ಬಗ್ಗೆ ತಿಳಿದಿದ್ದೀರಾ?

Share post:

Subscribe

spot_imgspot_img

Popular

More like this
Related

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ: ಶಿವಾನಂದ ಪಾಟೀಲ್

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ:...

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ!

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್...

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...