ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರತದ ಪ್ರಮುಖ ಬ್ಯಾಂಕ್ ಎಂದೇ ಹೇಳಬಹುದು. ಪ್ರತಿನಿತ್ಯದ ಹಣ ವರ್ಗಾವಣೆ ಚಟುವಟಿಕೆಗಳಿಗೆ ಒಳ್ಳೆಯ ಸೇವೆಯನ್ನು ಒದಗಿಸುವ ಬ್ಯಾಂಕ್ ಗಳಲ್ಲಿ ಇದು ಒಂದಾಗಿದ್ದು , ಅಪಾರವಾದ ಖಾತೆದಾರರನ್ನು ಈ ಬ್ಯಾಂಕ್ ಹೊಂದಿದೆ. ಇನ್ನು ಈ ಬ್ಯಾಂಕ್ ಬಗ್ಗೆ ಕರ್ನಾಟಕದಲ್ಲಿ ಆಗಾಗ ಅಸಮಾಧಾನ ವ್ಯಕ್ತವಾಗುತ್ತಲೇ ಬರುತ್ತಿದೆ. ಕೇವಲ ಎಸ್ಬಿಐ ಮಾತ್ರವಲ್ಲದೆ ಇನ್ನುಳಿದ ಬ್ಯಾಂಕ್ಗಳ ವಿರುದ್ಧವೂ ಸಹ ಕನ್ನಡಿಗರ ಆಕ್ರೋಶ ಆಗಾಗ ಆ ವ್ಯಕ್ತವಾಗುತ್ತದೆ.
ಇನ್ನು ಬ್ಯಾಂಕ್ಗಳ ವಿರುದ್ಧ ಕನ್ನಡಿಗರು ಅಸಮಾಧಾನ ವ್ಯಕ್ತಪಡಿಸುವುದು ಬ್ಯಾಂಕ್ ಅವರಿಂದ ಕನ್ನಡ ಮತ್ತು ಕನ್ನಡಿಗರ ಕಡೆಗಣನೆ ಆದಾಗ.. ಹೌದು ಇಂದು ಸಹ ಎಸ್ಬಿಐ ಬ್ಯಾಂಕ್ ತನ್ನ ವರಸೆಯನ್ನು ಮುಂದುವರೆಸಿದ್ದು ಹಳೆಯ ಪಾಸ್ ಬುಕ್ ಮುಖಪುಟದ ಮೇಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಂದು ಕನ್ನಡದಲ್ಲಿಯೂ ಸಹ ಬರೆಯಲಾಗಿತ್ತು. ಆದರೆ ಇದೀಗ ನವೀಕರಿಸಲಾಗಿರುವ ಪಾಸ್ ಬುಕ್ ಮೇಲೆ ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಬರೆಯಲಾಗಿದ್ದು ಕನ್ನಡದಲ್ಲಿ ಬ್ಯಾಂಕಿನ ಹೆಸರನ್ನು ನಮೂದಿಸಿಲ್ಲ. ಇನ್ನು ಈ ವಿರುದ್ಧ ಇಡೀ ಕನ್ನಡಿಗರು ಆಕ್ರೋಶವನ್ನು ವ್ಯಕ್ತಪಡಿಸಿದ್ದು ಬ್ಯಾಂಕ್ ಆಡಳಿತ ಮಂಡಳಿಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರುತ್ತಿದ್ದಾರೆ.