ಸೊಂಟನೋವು (ಸಯಾಟಿಕಾ) ತೊಂದರೆಯಿಂದ ಮುಕ್ತಿ ಬೇಕೆ.? ಇನ್ನೊಂದು ನೋವಿನ ಮಾತ್ರೆ ತೆಗೆದುಕೊಳ್ಳೋ ಮುನ್ನ ಎಚ್ಚೆತ್ತುಕೊಳ್ಳಿ

Date:

ನಮ್ಮ ದೇಹದಲ್ಲಿರೋ ನರಗಳಲ್ಲೇ ಅತೀ ದೊಡ್ಡ ನರವೇ ಈ ಸಯಾಟಿಕಾ ನರವಾಗಿದೆ, ಇದು ಬೆನ್ನಿನ ಎಲುಬಿನ ಕೆಳಭಾಗದಿಂದ ಆರಂಭವಾಗಿ, ಪೃಷ್ಠ ಭಾಗದ ಮೂಲಕ ಹಾದು ಹೋಗಿ, ಕೆಳ ಕಾಲಿನ ಹಿಂಭಾಗದಲ್ಲಿ ಕೊನೆಗೊಳ್ಳುತ್ತದೆ. ಈ ನರಗಳ ಈ ವ್ಯವಸ್ಥೆಯು ಕಾಲುಗಳ ಚಲನೆ, ಸ್ಪರ್ಷ ಹಾಗೂ ಶಕ್ತಿಗೆ ನೆರವಾಗುತ್ತದೆ.
ಇಂದು ಸುಮಾರು 40% ಕ್ಕೂ ಅಧಿಕ ಜನರನ್ನು ಈ ನೋವು ಬಾಧಿಸುತ್ತದೆ. ತೀವ್ರ ಸೊಂಟ ನೋವು, ಕಾಲುಗಳಲ್ಲಿ ಸೆಳೆತ, ಜೋಮು ಹಿಡಿಯುವಿಕೆ ಹಾಗೂ ಕಾಲುಗಳ ನಿಶ್ಶಕ್ತಿ ಇವುಗಳಿಂದಾಗುವ ಹಲವು ಸಮಸ್ಯೆಗಳು.
ಪುರುಷರನ್ನು ಹಾಗೂ ಮಹಿಳೆಯರನ್ನು ನಿರಂತರವಾಗಿ ಕಾಡುತ್ತಿರುವ ಈ ನೋವಿಗೆ ಆರಂಭದಿಂದಲೇ ಮುಂಜಾಗ್ರತೆ ವಹಿಸಿದಲ್ಲಿ ಇದನ್ನು ನಿವಾರಿಸಬಹುದು. ಸಾಮಾನ್ಯವಾಗಿ ಮಹಿಳೆಯರನ್ನು ಹೆಚ್ಚಾಗಿ ಬಾಧಿಸೋ ಈ ನೋವು ಸಿಸೇರಿಯನ್ ನಿಂದಲೇ ಬರುತ್ತದೆ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಇದು ಸಿಸೇರಿಯನ್ ನಿಂದ ಖಂಡಿತ ಬರುವಂತಹುದಲ್ಲ! ಇಂದಿನ ಜನರ ಯಾಂತ್ರಿಕ ಜೀವನ ಶೈಲಿ, ಕುಳಿತುಕೊಳ್ಳುವ, ನಿಲ್ಲುವ ಹಾಗೂ ಮಲಗುವ ಭಂಗಿಗಳಲ್ಲಿನ ವ್ಯತ್ಯಾಸದಿಂದ ಈ ನೋವು ಕಾಡುತ್ತದೆ, ಕೆಲವೊಮ್ಮೆ ಇದು ತೀವ್ರ ಸ್ವರೂಪವನ್ನು ತಾಳುವುದೂ ಉಂಟು ಹಲವರು ಇದಕ್ಕಾಗಿ ಹಲವು ವೈದ್ಯರ ಬಳಿ ಅಲೆದದ್ದೂ ಇದೆ, ಹಲವು ವಿಧದ ನೋವು ನಿವಾರಕ ಗುಳಿಗೆಗಳ ದಾಸರಾಗಿದ್ದೂ ಇದೆ. ಸಯಾಟಿಕಾ ತೊಂದರೆಯಿದ್ದ ವ್ಯಕ್ತಿಗಳು ಒಂದೇ ಭಂಗಿಯಲ್ಲಿ ತುಂಬಾ ಸಮಯ ಕುಳಿತುಕೊಳ್ಳುವುದಾಗಲೀ, ನಿಲ್ಲುವುದಾಗಲೀ ಮಾಡಬಾರದು. ಇದಕ್ಕಾಗಿ ಕೆಲವೊಂದು ಪರಿಹಾರಗಳು ನಿಮಗಾಗಿ…
1.ಆಕ್ಯುಪ್ರೆಷರ್
ಇದೊಂದು ಏಷ್ಯನ್ ಬಾಡಿ ವರ್ಕ್ ಥೆರಪಿ (ABT)ಯಾಗಿದ್ದು, ಸುಮಾರು ಐದು ಸಾವಿರ ವರುಷಗಳ ಹಿಂದೆಯೇ ಇದನ್ನು ಅನ್ವೇಷಿಸಲಾಗಿತ್ತು. ದೇಹದ ಶಕ್ತಿಗೆ ಕಾರಣವಾದ ಕೆಲವೊಂದು ಸೂಕ್ಷ್ಮ ಜಾಗಗಳ ಮೇಲೆ ಕೈಬೆರಳುಗಳ ಸಹಾಯದಿಂದ ಒತ್ತಡ ಹೇರುವುದೇ ಈ ಕ್ರಿಯೆಯ ಮಹತ್ವ. ಇದು ಹಲವು ಅವಧಿಗಳಲ್ಲಿ ನಡೆಸಲಾಗುವ ಚಿಕಿತ್ಸೆಯಾಗಿದ್ದು, ಮೊದಲ ಅವಧಿಯಲ್ಲೇ ನಮಗೆ ಇದರ ಲಾಭ ಸ್ವಲ್ಪ ಮಟ್ಟಿಗೆ ತಿಳಿಯುವಂತಾಗುತ್ತದೆ.
2.ಕೋಲ್ಡ್ ಪ್ಯಾಕ್
ನೋವಿನ ತೀವ್ರತೆಗೆ ಐಸ್ ಪ್ಯಾಕ್ ತಾತ್ಕಾಲಿಕ ಶಮನವನ್ನೊದಗಿಸುತ್ತದೆ.
3.ಬಿಸಿ ನೀರಿನ ಸ್ನಾನ ಹಾಗೂ ಬಿಸಿ ನೀರ ಶಾಖ
ಕೋಲ್ಡ್ ಪ್ಯಾಕ್ ನಮಗೆ ತಾತ್ಕಾಲಿಕ ಪರಿಹಾರವನ್ನಿತ್ತರೂ ಆಳವಾದ ನೋವಿಗೆ ಪರಿಹಾರವನ್ನೊದಗಿಸದು, ಸಯಾಟಿಕಾ ನರವು ನಮ್ಮ ದೇಹದಲ್ಲಿ ಆಳವಾಗಿ ಬೇರೂರಿರುವುದರಿಂದ ಇದಕ್ಕೆ ಶೀಘ್ರ ಸಮಾಧಾನ ಬಿಸಿನೀರ ಶಾಖ ಅಥವಾ ಬಿಸಿ ಬಿಸಿ ನೀರಿನ ಸ್ನಾನ. ಯಾಕೆಂದರೆ ಉಷ್ಣತೆಯಲ್ಲಿನ ವ್ಯತ್ಯಾಸವು ದೇಹದಲ್ಲಿರೋ ನರಗಳ ಚಲನೆಗೆ ಸಹಕರಿಸುತ್ತದೆ, ಇದರಿಂದಾಗಿ ನೋವಿಗೆ ಸುಮಾರಾಗಿ ಪರಿಹಾರ ನೀಡುತ್ತದೆ.
4.ಯೋಗಾಸನಗಳು
ಯೋಗದಲ್ಲಿ ಸಯಾಟಿಕಾ ತೊಂದರೆಗೆಂದೇ ಹಲವು ಆಸನಗಳಿವೆ; ಮಕರಾಸನ, ಭುಜಂಗಾಸನ, ಶಲಭಾಸನ, ಮರ್ಕಟಾಸನ, ಉಷ್ಟ್ರಾಸನ, ಕಟಿ ಉತ್ಥಾನಾಸನ ಹಾಗೂ ಕಂದರಾಸನಗಳಂತಹ ಆಸನಗಳನ್ನು ವ್ಯವಸ್ಥಿತವಾಗಿ ಒಬ್ಬ ಯೋಗ ಗುರುಗಳ ಬಳಿ ಕಲಿತುಕೊಂಡು ಮಾಡಿದಲ್ಲಿ ನಿಮ್ಮ ಸೊಂಟ ನೋವು ಶೀಘ್ರದಲ್ಲಿ ಪರಿಹಾರವಾಗಬಹುದು.
5.ಮಸಾಜ್
ಹಲವು ತರಹದ ನೈಸರ್ಗಿಕ ಎಣ್ಣೆಗಳ ಮಸಾಜ್ ಗಳಿಂದಲೂ ಸೊಂಟ ನೋವನ್ನು ನಿವಾರಿಸಬಹುದು.
6.ನಿದ್ದೆ
ಕಣ್ಣು ಮುಚ್ಚಿ ೭ ರಿಂದ ೮ ಘಂಟೆ ನಿದ್ದೆ ಮಾಡಲೇ ಬೇಕು. ನಿಮ್ಮ ಮಲಗುವ ಭಂಗಿಯು ಹೇಗಿರಬೇಕೆಂದರೆ, ಬದಿಗೆ ಹೊರಳಿ ಕಾಲುಗಳನ್ನು ಒಂದರ ಮೇಲೊಂದಿಟ್ಟು ನಿಮ್ಮ ಒಂದು ಕೈಯನ್ನು ನೇರವಾಗಿ ಕಾಲುಗಳವರೆಗೆ ಇಳಿಬಿಟ್ಟು ಇನ್ನೊಂದು ಕೈಯನ್ನು ನಿಮ್ಮ ಕತ್ತಿನಿಂದ ಕೆಳಗಿಡಬೇಕು,ಅಂದರೆ (ದಿಂಬಿನಲ್ಲಿ ಪೂರ್ತಿ ಕತ್ತು ಇರಿಸುವಂತಿರಬೇಕು)ಅಲ್ಲಿಂದ ಕೆಳಗೆ ನಿಮ್ಮ ಕೈ ಇರಿಸಬೇಕು. ಇದರಿಂದಾಗಿ ನಿಮ್ಮ ಸಂಪೂರ್ಣ ದೇಹದ ನರಗಳು,ಮಾಂಸ ಪೇಶಿಗಳು ರಿಲ್ಯಾಕ್ಸ್ ಆಗಿ, ಅವುಗಳ ಪುನ:ಶ್ಚೇತನಕ್ಕೆ ಕಾರಣವಾಗುತ್ತದೆ.

  • ಸ್ವರ್ಣಲತ ಭಟ್

Like us on Facebook  The New India Times

POPULAR  STORIES :

ಹುಚ್ಚಾ ವೆಂಕಟ್ ಮೇಲೆ ಕಿಚ್ಚ ಸುದೀಪ್ ಗರಂ..!

30ನಿಮಿಷ ಕೋಕಾ ಕೋಲದಲ್ಲಿ ಹೊಸ 2000ರೂ ನೋಟನ್ನು ಮುಳುಗಿಸಿದರೆ ಏನಾಗುತ್ತೆ ಗೊತ್ತಾ.?

ಬಿಗ್‍ಬಾಸ್ ಮನೆಯಲ್ಲಿ ಕಣ್ಣೀರಾಕಿದ ಕಿರಿಕ್ ಕೀರ್ತಿ..! ಕೀರ್ತಿ ಅಳುವಿಗೆ ಪ್ರಥಮ್ ಕಾರಣ…!

ಬಿಗ್‍ಬಾಸ್ ಮನೆಗೆ ಹುಚ್ಚ ವೆಂಕಟ್ ಎಂಟ್ರಿ

2000ರೂ ನೋಟಿನ ಕ್ವಾಲಿಟಿ ಟೆಸ್ಟ್ ಮಾಡಿದ ಯುವಕ : ವೈರಲ್ ಆಯ್ತು ವೀಡಿಯೋ

Share post:

Subscribe

spot_imgspot_img

Popular

More like this
Related

ರೌಡಿಗಳನ್ನು, ಗೂಂಡಾಗಳನ್ನು ಬಿಟ್ಟು ಜನರ ಆಸ್ತಿಗಳನ್ನು ಲಪಟಾಯಿಸುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

ರೌಡಿಗಳನ್ನು, ಗೂಂಡಾಗಳನ್ನು ಬಿಟ್ಟು ಜನರ ಆಸ್ತಿಗಳನ್ನು ಲಪಟಾಯಿಸುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ ಬೆಂಗಳೂರು: ರೌಡಿಗಳನ್ನು,...

World Cup 2025: ಇಂದು ಭಾರತ- ಆಫ್ರಿಕಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯ! ಎಲ್ಲಿ ನಡೆಯಲಿದೆ?

World Cup 2025: ಇಂದು ಭಾರತ- ಆಫ್ರಿಕಾ ನಡುವಿನ ವಿಶ್ವಕಪ್ ಫೈನಲ್...

ನಿಮ್ಮ ಮುಖಕ್ಕೆ ಬಳಸುವ ರೋಸ್​ ವಾಟರ್​ನಿಂದಲೂ ಇದೆ ಅಪಾಯ; ಬಳಸೋ ಮುನ್ನ ಎಚ್ಚರ!

ನಿಮ್ಮ ಮುಖಕ್ಕೆ ಬಳಸುವ ರೋಸ್​ ವಾಟರ್​ನಿಂದಲೂ ಇದೆ ಅಪಾಯ; ಬಳಸೋ ಮುನ್ನ...

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ: ಯಥಾಸ್ಥಿತಿಯಲ್ಲಿ ಗೃಹಬಳಕೆ!

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ: ಯಥಾಸ್ಥಿತಿಯಲ್ಲಿ ಗೃಹಬಳಕೆ! ನವದೆಹಲಿ:- ದೇಶದಲ್ಲಿ ಪ್ರತಿ...