ಇತ್ತೀಚೆಗೆ ಕೆಲವರಿಗೆ ಚಿತ್ರವಿಚಿತ್ರವಾಗಿ, ಸಾಹಸಮಯವಾಗಿ ಸೆಲ್ಫಿ ತೆಗೆದುಕೊಳ್ಳುವ ಹುಚ್ಚಿರುತ್ತದೆ. ಈ ಸೆಲ್ಫಿ ಹುಚ್ಚಿಗೆ ಸಾಕಷ್ಟು ಜನರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಅಂತಹ ದುರಂತ ಪ್ರಕರಣಕ್ಕೆ ರಷ್ಯಾದ ಮಾಸ್ಕೋದಲ್ಲಿ ಇಪ್ಪತ್ತೊಂದು ವರ್ಷದ ಯುವತಿ ಬಲಿಯಾದ ಪ್ರಕರಣವೂ ಸೇರಿಕೊಳ್ಳುತ್ತದೆ. ಮಾಸ್ಕೋದ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಈ ಯುವತಿ ಒಂದು ಕೈಯ್ಯಲ್ಲಿ 9ಎಂಎಂ ಪಿಸ್ತೂಲನ್ನು ತಲೆಗೆ ಇಟ್ಟುಕೊಂಡು, ಇನ್ನೊಂದು ಕೈಯ್ಯಲ್ಲಿ ಮೊಬೈಲ್ ಫೋನನ್ನು ಇಟ್ಟುಕೊಂಡು ಸೆಲ್ಫಿ ತೆಗೆದುಕೊಳ್ಳುವ ದುಸ್ಸಾಹಸಕ್ಕೆ ಕೈ ಹಾಕಿದ್ದಾಳೆ. ಆದರೆ ಮೊಬೈಲ್ ಫೋನಿನ ಬಟನ್ ಪ್ರೆಸ್ ಮಾಡುವ ಬದಲು, ಪಿಸ್ತೂಲ್ ಟ್ರಿಗರ್ ಅಮುಕಿದ್ದಾಳೆ. ಅಷ್ಟೇ.. ಅವಳ ತಲೆ ಛಿದ್ರವಾಗಿಹೋಗಿದೆ. ಕಂಪನಿಯ ಸೆಕ್ಯೂರಿಟಿ ಗಾರ್ಡ್ ಗೆ ಸಂಬಂಧಿಸಿದ ಪಿಸ್ತೂಲ್ ಅನ್ನು ಅವನ ಗಮನಕ್ಕೆ ಬಾರದೆ ಸೆಲ್ಫಿಗೆ ಬಳಸಿಕೊಳ್ಳಲು ಹೋಗಿ ದುರಂತವಾಗಿ ಸಾವನ್ನಪ್ಪಿದ್ದಾಳೆ. ಇತ್ತೀಚೆಗೆ ಅಮೆರಿಕಾದ ಪೈಲಟ್ ಒಬ್ಬ, ವಿಮಾನದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ವಿಮಾನಪತನಕ್ಕೆ ಕಾರಣವಾಗಿದ್ದ. ಸೆಲ್ಫಿ ಎಂಬ ವಿಚಿತ್ರ ಹುಚ್ಚನ್ನು ಬಿಡದಿದ್ದರೇ ಅಪಾಯ ತಪ್ಪಿದ್ದಲ್ಲ.
POPULAR STORIES :
ಅಲ್ಲಿ ಮನುಷ್ಯನ ಮಾಂಸದ ಬಿರಿಯಾನಿ ಬೇಯುತ್ತಿತ್ತು..!? ಮಾಂಸ ಬೇಯುತ್ತಿದ್ದಾಗ ಆಗಿದ್ದೇನು ಗೊತ್ತಾ..!?
ಐಫೋನ್ ಅಂದ್ರೆ ಸಿಕ್ಕಾಪಟ್ಟೆ ಆಸೇನಾ..!? ಇದನ್ನು ಓದಿದ್ರೆ ಐಫೋನ್ ಗೆ ದೊಡ್ಡ ನಮಸ್ಕಾರ ಹಾಕ್ತೀರಾ..?
ಹಕ್ಕಿ ಜ್ವರ ಮತ್ತೆ ಬಂದಿದೆ ಎಚ್ಚರ..!! ಸಾವು ಹೊಂಚು ಹಾಕಿ ಕುಂತಿದೆ..!
ಕೊಹ್ಲಿ ಬಗ್ಗೆ ಹೀಗೆಲ್ಲಾ ಮಾತಾಡಬಹುದಾ..? ಕಾಲ್ ಎಳೆಯೋರಿಗೆ ವಿರಾಟ್ ಉತ್ತರವೇನು..?
ಇದು ಪ್ರೇಕ್ಷಕನ ನೆಚ್ಚಿನ ತಿಥಿ…! 10 International Award Winner Thithi Kannada Movie
ಶಿವಣ್ಣನ ಸ್ಯಾಂಡಲ್ ವುಡ್ ಪ್ರೀತಿ…. ಶಿವಣ್ಣ ನಿಮಗೆ ನೀವೇ ಸಾಟಿ
ಕ್ರಿಸ್ ಗೇಲ್ ಗೆ ಡೇಟಿಂಗ್ ಆಫರ್ ಕೊಟ್ಟವಳ ಕಂಡಿಷನ್ ಏನ್ ಗೊತ್ತಾ..?
ದಿಲ್ಶಾನ್ ಹೆಂಡ್ತೀನಾ ಉಪುಲ್ ತರಂಗ ಮದ್ವೆಯಾದ..!? ದಿನೇಶ್ ಹೆಂಡ್ತೀನಾ ಮುರಳಿ ವಿಜಯ್ ವರಿಸಿದ..!!