ಬಾ ಮಳೆಯೇ ಬಾ ಆತಂಕ ಬೇಡ ಈ ಬಾರಿ ಸಿಕ್ಕಾಪಟ್ಟೆ ಮಳೆ..!?

0
65

ಬರಗಾಲವನ್ನು ಮರೆತುಬಿಡಿ. ಸುರಿಯುವ ಮಳೆಯಲ್ಲಿ ಸುಮ್ಮನೇ ನೆನೆಯುತ್ತಾ.. ಕುಣಿಯುತ್ತಾ.. ಹಾಡುತ್ತಾ… ಒಂದ್ ಸಲ ಹಾಗೇ ಮೈ ಮರೆಯುವ ಕ್ಷಣಕ್ಕೆ ಸಿದ್ದರಾಗಿ. ಭೂರಮೆಯನ್ನು ಮುತ್ತಿಕ್ಕೋ ಮಳೆಹನಿಗಳು, ಗುಡುಗು ಸಿಡಿಲಿನ ಬೆಚ್ಚಿ ಬೀಳಿಸೋ ರೋಮಾಂಚನ, ಮನೆಯ ಹಿತ್ತಲಲ್ಲಿ ಟಿಸಿಲೊಡೆದ ಪುಟ್ಟ ಪುಟ್ಟ ಜಲ ಬೇರು, ಈ ತಿಂಗಳು ಮಾತ್ರ ನಮ್ಮದೇ ಅಂತ ವಟಗುಟ್ಟೋ ಕಪ್ಪೆಗಳು, ಹರಿಯುವ ತೊರೆಯ ಸೆಳೆತವನ್ನ ತಪ್ಪಿಸಿಕೊಳ್ಳಲು ಗದ್ದೆಗಳನ್ನು ಆಕ್ರಮಿಸೋ ಮೀನುಗಳು, ಕೆರೆಯ ದಿಣ್ಣೆಯಲ್ಲಿ ಪುಟ್ಟದೊಂದು ಮನೆ ಕಟ್ಟಿಕೊಂಡು ಮಳೆಯನ್ನು ಆಸ್ವಾಧಿಸೋ ಏಡಿಗಳು… ಅಬ್ಬಾ.. ಮಳೆಗಾಲ ಅಂದ್ರೇನೇ ಹಾಗೇ… ಆಗತಾನೇ ಅಂತರಂಗದಲ್ಲೊಂದು ಮೊಗ್ಗು ಅರಳಿದಂತೆ, ಹತ್ತಾರು ವರ್ಷದಿಂದ ಕಾದು ಕುಂತ ಪ್ರೀತಿಯೊಂದು ಕೈಗೆ ಸಿಕ್ಕಂತೆ..! ಬಾ ಮಳೆಯೇ ಬಾ.

ಒಂದು ಕಡೆ ಮಳೆ ಸುರಿಯುತ್ತಿದ್ದರೇ ಹಿತ್ತಲ ಒಲೆಯಲ್ಲಿ ಬಿಸಿ ನೀರು ಕಾಯುತ್ತಿರುತ್ತೆ, ಅಡುಗೆ ಮನೆಯಲ್ಲಿ ಹಪ್ಪಳ, ಸಂಡಿಗೆ ಕರಿಯುತ್ತಿರುತ್ತೆ, ಹಲಸಿನ ಹಣ್ಣು ತಿಂದು ಕೈಗೆ ಮೆತ್ತಿಕೊಂಡ ಮೇಣವನ್ನು ಬಿಡಿಸಿಕೊಳ್ಳೋದೇ ಚಂದದ ಅನುಭವ. ಇವೆಲ್ಲವನ್ನು ಅರಗಿಸಿಕೊಂಡು ಕಂಬಳಿ ಹೊದ್ದು ಮಲಗಿಬಿಟ್ಟರೇ… ಸುಂದರ ಮಲೆನಾಡನ್ನು ಸ್ವಲ್ಪ ಮಟ್ಟಿಗೆ ಸವಿದ ತೃಪ್ತಿಯೊಂದಿಗೆ ನಿದ್ರೆ ಆವರಿಸಿಕೊಳ್ಳೋದು ಗ್ಯಾರಂಟಿ. ಬೆಟ್ಟ, ಕಾಡುಗಳಲ್ಲಿ ಹರಿದ ನೀರು, ಹಳ್ಳ, ತೊರೆಗಳನ್ನು ತುಂಬಿಸಿ, ನದಿಯ ಭೋರ್ಗರೆತಕ್ಕೆ ಸಾಥ್ ಕೊಡುತ್ತಿವೆ.

ಮಳೆಗಾಲ ಬಂತಂದ್ರೇ ಪ್ರೇಕ್ಷಣೀಯ ಸ್ಥಳಗಳಿಗೆ ಅದೇನೋ ಗತ್ತು ಬಂದುಬಿಡುತ್ತೆ, ಜಲಾಶಯಗಳನ್ನು ಹಿಡಿಯೋದು ಕಷ್ಟ… ಕಷ್ಟ. ಜೋಗ, ಜಲಪಾತಗಳು ಮಳೆಗಾಲದಲ್ಲಿ ಅತ್ಯಂತ ಸ್ಪಷ್ಟವಾಗುತ್ತೆ..! ಮಳೆಗಾಲ ರೈತರಿಗೆ ವರ. ಉಳುಮೆ, ಬಿತ್ತನೆಗೆ ಸುವರ್ಣ ಕಾಲ. ಹಳ್ಳಿ ಹೆಂಗಸರು, ಗಂಡಸರು, ಯುವಕರು ಸುರಿಯೋ ಮಳೆಯಲ್ಲಿ ಬೆನ್ನಿಗೆ ಕವಚ ಹಾಕಿಕೊಂಡು ಬಿತ್ತನೆ ಮಾಡೋದನ್ನ, ಗದ್ದೆಯ ದಂಡೆಯ ಮೇಲೆ ನಿಂತು ಕೆಲಸ ಮಾಡಿಸೋ ಊರ ಗೌಡರ ಠೀವಿಯನ್ನ ನೋಡೋಕೂ ಮಳೆಗಾಲವೇ ಬರಬೇಕು ಕಣ್ರೀ..! ಮಲೆನಾಡಿನ ಮಟ್ಟಿಗೆ ಮಳೆ ಒಂದರ್ಥದಲ್ಲಿ ಸುಭಿಕ್ಷವೆನಿಸುತ್ತೆ, ಇನ್ನೊಂದು ಲೆಕ್ಕದಲ್ಲಿ ನೆರೆ ರೂಪದಲ್ಲಿ ರಕ್ಕಸನ ಪ್ರವೇಶವಾಗುತ್ತೆ. ಕೆಲ ಹಳ್ಳಿಯ ಜನಕ್ಕೆ ನೆರೆ ಮಜಬೂತಾದ ಅನುಭವ ನೀಡುತ್ತೆ, ಕೆಲವರಿಗೆ ಗದ್ದೆ, ತೋಟಗಳು ಮುಳುಗಿದ ಸಂಕಷ್ಟ. ಅದೇನೇ ಇದ್ರೂ ಮಳೆಗಾಲದಲ್ಲಿ ಪಶ್ಚಿಮಘಟ್ಟ, ಮಲೆನಾಡಿನ ವಾತಾವರಣ ಮತ್ತು ಜನಜೀವನ ಸೊಗಸಾಗಿರುತ್ತದೆ.

ಸಧ್ಯದ ವಾಸ್ತವ ಹೇಗಿದೆ ನೋಡಿ. ಕೆರೆ, ಹಳ್ಳಗಳು ಒಣಗಿವೆ. ಜನರು ನೀರಿಲ್ಲದೆ ಪೇಚಾಡುತ್ತಿದ್ದಾರೆ. ಭಾರತದ ಆರ್ಥಿಕತೆ, ಜನಜೀವನ ಎಲ್ಲವೂ ಮಳೆಯ ಮೇಲೆ ಅವಲಂಭಿತವಾಗಿದೆ. ಮಳೆ ಅಂದ್ರೆ ಮಾಯೆ, ಮುಂಗಾರು ಅನ್ನೋದು ಮಾಯಾಜಾಲ. ಆ ಮಾಯೆಯ ಹೊರತಾದ ಜೀವನವನ್ನ ಕಲ್ಪಿಸಿಕೊಳ್ಳೋದೇ ಅಸಾಧ್ಯ. ಸದ್ಯ ದೇಶದಲ್ಲಿ ಬೆಲೆಯೇರಿಕೆಯ ಬಿಸಿಯಿದೆ. `ಅಚ್ಚೇ ದಿನ್’ಗಳ ವಾಗ್ದಾನ ಕೊಟ್ಟವರು ಸಂಕಷ್ಟದಲ್ಲಿದ್ದಾರೆ. ಒಂದಲ್ಲ, ಎರಡಲ್ಲ.. ತಿಂಗಳ ಹಿಂದಿನ ಕಸಿವಿಸಿಗಳು, ಹಾಗೂ ಎಲ್ಲಾ ಆತಂಕಗಳಿಗೂ ಮಳೆ ಸಾಂತ್ವಾನ ಹೇಳುತ್ತದೆ.

ಈ ಬಾರಿ ನಿರೀಕ್ಷಿಸಿದಷ್ಟು ಮಳೆಯಾಗಬಹುದು. ಇದು ಕೇವಲ ರಾಜ್ಯದ ವಿಚಾರವಲ್ಲ. ದೇಶದ ಸಮಸೈಯೂ ಹೌದು. ಕಳೆದ ಬಾರಿ ಮುಂಗಾರಿನ ಬಗ್ಗೆ ಹವಾಮಾನ ಇಲಾಖೆ ಭವಿಷ್ಯ ಹೇಳಿತ್ತು. ಸಮುದ್ರದಲ್ಲಿ ಉಂಟಾಗೋ `ಎಲ್ನಿನೋ’ ಹವಾಮಾನ ವೈಪರಿತ್ಯ, ಕಳೆದ ಮಳೆಯ ಪ್ರಮಾಣವನ್ನ ಕಡಿಮೆಗೊಳಿಸುತ್ತೆ ಎಂದಿತ್ತು ಹವಾಮಾನ ಇಲಾಖೆ. ಕಳೆದ ವರ್ಷ ಹವಾಮಾನ ಇಲಾಖೆ ಹೇಳಿದಂತೆ ಆಗಿತ್ತು. ಆದರೆ ಈ ಬಾರಿ ಅದೇ ಹವಾಮಾನ ಇಲಾಖೆ, ಭರಪೂರ್ತಿ ಮಳೆ ಸುರಿಯುತ್ತದೆ ಎಂದಿದೆ. ಅವರು ನುಡಿದಂತೆ ಆಗಲಿ ಎನ್ನುವುದೇ ಎಲ್ಲರ ಆಶಯ.

  •  ರಾ ಚಿಂತನ್.

POPULAR  STORIES :

ಅಲ್ಲಿ ಮನುಷ್ಯನ ಮಾಂಸದ ಬಿರಿಯಾನಿ ಬೇಯುತ್ತಿತ್ತು..!? ಮಾಂಸ ಬೇಯುತ್ತಿದ್ದಾಗ ಆಗಿದ್ದೇನು ಗೊತ್ತಾ..!?

ಒಂದು ಕೈಯ್ಯಲ್ಲಿ ಪಿಸ್ತೂಲು.. ಮತ್ತೊಂದು ಕೈಯ್ಯಲ್ಲಿ ಮೊಬೈಲು..! ಸೆಲ್ಫಿ ತೆಗೆದುಕೊಳ್ಳಲು ಹೋಗಿ ಏನಾಯ್ತು ಗೊತ್ತಾ..?

ಐಫೋನ್ ಅಂದ್ರೆ ಸಿಕ್ಕಾಪಟ್ಟೆ ಆಸೇನಾ..!? ಇದನ್ನು ಓದಿದ್ರೆ ಐಫೋನ್ ಗೆ ದೊಡ್ಡ ನಮಸ್ಕಾರ ಹಾಕ್ತೀರಾ..?

ಹಕ್ಕಿ ಜ್ವರ ಮತ್ತೆ ಬಂದಿದೆ ಎಚ್ಚರ..!! ಸಾವು ಹೊಂಚು ಹಾಕಿ ಕುಂತಿದೆ..!

ಕೊಹ್ಲಿ ಬಗ್ಗೆ ಹೀಗೆಲ್ಲಾ ಮಾತಾಡಬಹುದಾ..? ಕಾಲ್ ಎಳೆಯೋರಿಗೆ ವಿರಾಟ್ ಉತ್ತರವೇನು..?

ಇದು ಪ್ರೇಕ್ಷಕನ ನೆಚ್ಚಿನ ತಿಥಿ…! 10 International Award Winner Thithi Kannada Movie

ಶಿವಣ್ಣನ ಸ್ಯಾಂಡಲ್ ವುಡ್ ಪ್ರೀತಿ…. ಶಿವಣ್ಣ ನಿಮಗೆ ನೀವೇ ಸಾಟಿ

ಕ್ರಿಸ್ ಗೇಲ್ ಗೆ ಡೇಟಿಂಗ್ ಆಫರ್ ಕೊಟ್ಟವಳ ಕಂಡಿಷನ್ ಏನ್ ಗೊತ್ತಾ..?

ದಿಲ್ಶಾನ್ ಹೆಂಡ್ತೀನಾ ಉಪುಲ್ ತರಂಗ ಮದ್ವೆಯಾದ..!? ದಿನೇಶ್ ಹೆಂಡ್ತೀನಾ ಮುರಳಿ ವಿಜಯ್ ವರಿಸಿದ..!!

LEAVE A REPLY

Please enter your comment!
Please enter your name here