ಇಂದು ತೆರೆಯಲಿದೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು.. ಬಿಗಿ ಭದ್ರತೆ..!!
ಇಂದು ಸಂಜೆ ಕುಂಭ ಮಾಸ ಪೂಜೆ ಹಿನ್ನೆಲೆಯಲ್ಲಿ ಶಬರಿ ಮಲೆ ಸ್ವಾಮಿ ಅಯ್ಯಪ್ಪನ ದೇವಸ್ಥಾನದ ಬಾಗಿಲನ್ನ ತೆರೆಯಲಾಗುತ್ತಿದೆ.. ಮುಂದಿನ ಐದು ದಿನಗಳು ಸ್ವಾಮಿಗೆ ವಿಶೇಷ ಪೂಜೆಯನ್ನ ನಡೆಸಲಾಗುತ್ತಿದ್ದು, ಕಲಾಭಿಷೇಕ, ಸಹಸ್ರ ಕಲಶ ಪೂಜೆ ಸೇರಿದಂತೆ ಹಲವು ಪೂಜಾ ಕಾರ್ಯಕ್ರಮಗಳ ಹಮ್ಮಿಕೊಳ್ಳಲಾಗಿದೆ..
ಸದ್ಯ ಮತ್ತೆ ದೇವಸ್ಥಾನದ ಬಾಗಿಲು ತೆಗೆಯುತ್ತಿರುವುದರಿಂದ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆಗಳಿದ್ದು, ಮತ್ತಷ್ಟು ಮಹಿಳಾ ಭಕ್ತರು ಅಯ್ಯಪ್ಪನ ದೇವಸ್ಥಾನ ಪ್ರವೇಶಕ್ಕೆ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.. ಇದಕ್ಕೆ ವಿರೋಧ ವ್ಯಕ್ತವಾಗಿದ್ದು, ಆರ್ ಎಸ್ ಎಸ್ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಲು ಮುಂದಾಗಿದೆ..
ಇದರಿಂದ ಮತ್ತೆ ಅಯ್ಯಪ್ಪನ ಮಲೆಯಲ್ಲಿ ಪ್ರತಿಭಟನೆ ನಡೆಯುವ ಸಾಧ್ಯತೆ ಹೆಚ್ಚಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರವನ್ನ ವಹಿಸಲಾಗಿದ್ದು, ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ..