ಹೆಣ್ಣು ಮಕ್ಕಳಿಗೆ ಜನ್ಮನೀಡಿದ್ದೀಯಾ ಅಂತ ಅಮ್ಮನನ್ನು ಹಿಂಸಿಸುತ್ತಿದ್ದ ಅಪ್ಪ..! ಪುಟ್ಟ ಮಕ್ಕಳನ್ನು ಎತ್ತಿಕೊಂಡು ಉಟ್ಟ ಬಟ್ಟೆಯಲ್ಲೇ ರಾತ್ರೋ ರಾತ್ರಿ ಮನೆ ಬಿಟ್ಟ ತಾಯಿ..!

Date:

ಅದು ಮುಂಬೈನ ಸಮೀಪದ ಸಣ್ಣ ಊರು. ಅಲ್ಲೊಂದು ಪುಟ್ಟ ಕುಟುಂಬ. ಗಂಡ-ಹೆಂಡತಿ, ಇಬ್ಬರು ಮುದ್ದಾದ ಪುಟ್ಟ ಹೆಣ್ಣು ಮಕ್ಕಳು..! ಕುಟುಂಬದ ಯಜಮಾನನಿಗೆ ಕುಡಿತದ ಹುಚ್ಚು..! ಕುಡಿಯುದನ್ನೇ ಬ್ಯುಸನೆಸ್ ಮಾಡಿಕೊಂಡಿದ್ದ ಭೂಪ..! ಪ್ರತಿದಿನ ಕಂಠ ಪೂರ್ತಿ ಕುಡಿದು ಮನೆಗೆ ಬರ್ತಾ ಇದ್ದ..! ಕುಡಿದು ಬಂದವನು ಹೆಂಡತಿಗೆ ಆವಾಚ್ಯ ಶಬ್ದಗಳಿಂದ ಬೈಯುವುದು, ಸಿಕ್ಕಾಪಟ್ಟೆ ಹೊಡೆಯುವುದನ್ನು ಮಾಡ್ತಾ ಇದ್ದ..!
ಬೇರೆ ಬೇರೆ ಧರ್ಮದವರಾಗಿದ್ರೂ ಪ್ರೀತಿಸಿ ಮದುವೆಯಾಗೋ ಮೂಲಕ ಪ್ರೀತಿಗೆ ಜಾತಿ-ಮತ, ಧರ್ಮಗಳ ಬೇಧವಿಲ್ಲ ಅಂತ ಸಾರಿದ್ದ ಆ ವ್ಯಕ್ತಿ, ಬರುಬರುತ್ತಾ ಹೆಂಡತಿಯನ್ನು ನಾಯಿಯಂತೆ ಟ್ರೀಟ್ ಮಾಡೋಕೆ ಶುರು ಮಾಡಿದ್ದು ಹೆಣ್ಣು ಮಕ್ಕಳಿಗೆ ಜನ್ಮ ಕೊಟ್ಟಳೆಂಬ ಕಾರಣಕ್ಕೆ..!
ದಿನಾಲೂ ಕುಡಿದು ಬಂದು ಅಮ್ಮನಿಗೆ ಹೊಡೆಯುತ್ತಿರೋದನ್ನು ಆ ಇಬ್ಬರು ಪುಟ್ಟ ಹೆಣ್ಣು ಮಕ್ಕಳು ನೋಡುತ್ತಲೇ ಬೆಳೆದರು..! ಎರಡನೇ ಅವಳಿನ್ನೂ ತುಂಬಾ ಚಿಕ್ಕವಳು, ಪುಟ್ಟ ಮಗು..! ಆಕೆಗೆ ಏನೂ ಅರ್ಥವಾಗ್ತಾ ಇರ್ಲಿಲ್ಲ..! ಆದರೆ ಮೊದಲನೆಯವಳಿಗೆ ಎಲ್ಲಾ ಅರ್ಥವಾಗ್ತಾ ಇತ್ತು..!
ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದೀ ಅಂತ ಹೆಂಡತಿಗೆ ಹೊಡೆಯುವುದನ್ನೇ ಮಾಡ್ತಾ ಇದ್ದ ಪುಣ್ಯಾತ್ಮ, ಯಾವತ್ತೂ ತನ್ನ ಆ ಎರಡು ಪುಟ್ಟ ಕಂದಮ್ಮಗಳನ್ನು ಎತ್ತಿಕೊಂಡವನಲ್ಲ..! ಈ ಎಲ್ಲಾ ವಿಚಾರವನ್ನು ಮೊದಲನೇ ಮಗಳು ಶಾಯಿನಾ ಲೆಬಾನ Humans of Bombay ಎಂಬ ಫೇಸ್ಬುಕ್ ಪೇಜಲ್ಲಿ ಬರೆದಿದ್ದಾರೆ…! ಅವರೇ ಬರೆದ ಅವರ ಜೀವನ ಕಥೆಯಿದು..!
ಶಾಯಿನಾ ಲೆಬಾನರ ಅಪ್ಪ ದಿನಾ ರಾತ್ರಿ ಕುಡಿದು ಬಂದು ತಾಯಿಗೆ ಹೊಡೆಯುದನ್ನು ಮಾಡ್ತಾನೇ ಇದ್ರಂತೆ..! ಇವತ್ತು ಸರಿ ಹೋಗ್ತಾರೆ, ನಾಳೆ ಸರಿ ಹೋಗ್ತಾರೆ ಅಂತ ತಾಳ್ಮೆಯಿಂದ ಎಲ್ಲವನ್ನೂ ಸಹಿಸಿಕೊಂಡು ಕೂತರೂ ಏನೂ ಪ್ರಯೋಜನವೇ ಆಗ್ಲಿಲ್ಲ..! ಆ ಹೆಂಡಪಿಶಾಚಿ ಗಂಡನ ಟಾರ್ಚರ್ ಹೆಚ್ಚೇ ಆಯಿತಂತೆ..! ಶಾಯಿನಾ ಲೆಬಾನರ ಅಮ್ಮ ಮಕ್ಕಳಿಗೆ ಅಂತ ಹತ್ತು ರೂಪಾಯಿ ಬೇಡಿದರೂ ಆ ಪುಣ್ಯಾತ್ಮ ಕೊಡುತ್ತಲೇ ಇರ್ಲಿಲ್ವಂತೆ..!
ಹೀಗೆ ದಿನಾಲೂ ಹಿಂಸೆಯನ್ನು ಅಮ್ಮ ಮಕ್ಕಳು ಅನುಭವಿಸುತ್ತಲೇ ಇದ್ದರು. ಒಂದು ದಿನ ಜೋರಾಗಿ ಹೊಡೆದಿದ್ರಿಂದ ಶಾಯಿನಾ ಲೆಬಾನರ ಅಮ್ಮನಿಗೆ ಹಣೆ ಒಡೆದು ರಕ್ತ ಬರಲಾರಂಭಿಸಿತಂತೆ..! ಅಷ್ಟಾದರೂ ಮನಕರಗದ ಕುಡುಕ ತಂದೆ ಈಕೆಯನ್ನೂ ಈಕೆಯ, ಪುಟ್ಟ ತಂಗಿಯನ್ನು ಎತ್ತಿಕೊಂಡು ಬಾಲ್ಕನಿಯಿಂದ ಕೆಳಗೆ ಎಸೆಯುತ್ತೇನೆಂದು ಹೊರಟಿದ್ದನಂತೆ..! ಆಗ ತನ್ನ ಜೀವವನ್ನೇ ಒತ್ತೆಯಾಗಿಟ್ಟು ಅಮ್ಮ ತನ್ನಿಬ್ಬರು ಶಾಯಿನಾ ಲೆಬಾನರನ್ನು ಹಾಗೂ ಆಕೆಯ ತಂಗಿಯನ್ನು ಕುಡುಕ ಗಂಡನಿಂದ ಕಸಿದು ಕೊಂಡರಂತೆ…!
ಅದೇ ಕೊನೆ.. ಅವತ್ತೇ ರಾತ್ರೋ ರಾತ್ರಿ ಅಮ್ಮ ಈಕೆಯನ್ನೂ , ಪುಟ್ಟ ತಂಗಿಯನ್ನೂ ಕರ್ಕೊಂಡು ರಾತ್ರಿತೊಟ್ಟ ಬಟ್ಟೆಯಲ್ಲೇ ಮನೆ ಬಿಟ್ಟು ಹೊರ ಬಂದ್ರಂತೆ..!
ಮನೆಯಿಂದ ಆಚೆಬಂದು ಇವತ್ತಿಗೂ ಅದೇ ಸ್ಥಳದಲ್ಲಿರುವ ಒಂದು ಬಾರ್ ಬಳಿ ಹೋಗಿ, ಫೋನ್ ಮಾಡ್ಬೇಕಿತ್ತು ಅಂತ ವಿನಂತಿಸಿಕೊಂಡರಂತೆ..! ಪುಣ್ಯಕ್ಕೆ ಬಾರ್ ಮಾಲಿಕ ಇಲ್ಲ ಅನ್ನಲ್ಲ. ಸರಿ, ಫೋನ್ ಮಾಡಿ ಎಂದು ಹೇಳಿದನಂತೆ..! ಊಟಕ್ಕೂ ವಿಚಾರಿಸಿದನಂತೆ. ಸ್ವಲ್ಪ ಹೊತ್ತಿನ ನಂತರ ಆ ತಾಯಿಯ ತಂದೆ-ತಾಯಿ ಬಂದು ಅವರ ಮನೆಗೆ ಕರ್ಕೊಂಡು ಹೋದರಂತೆ..! ಕೆಲವು ವರ್ಷಗಳ ಹಿಂದೆ ಅವರೂ ಕೂಡ ಮರಣವನ್ನಪ್ಪಿದ್ದಾರೆ..!
ಮಕ್ಕಳಿಗೆ ಒಳ್ಳೆಯ ಜೀವನ ನೀಡೋಕೆ ಆಗ್ಲಿಲ್ಲ ಅಂತ ಈಕೆಯ ಅಮ್ಮ ಕೊರಗುತ್ತಿದ್ದಾರಂತೆ..! ಆದರೆ ನನ್ನ ಅಮ್ಮ ನಮಗೆ ಒಳ್ಳೆಯ ಜೀವನವನ್ನೇ ಕೊಟ್ಟಿದ್ದಾರೆ..! ಅವತ್ತು ಉಟ್ಟ ಬಟ್ಟೆಯಲ್ಲೇ ರಾತ್ರೋ ರಾತ್ರಿ ನಮಗಾಗಿ ಮನೆಯಿಂದ ಹೊರ ಬಂದು, ಕಷ್ಟಪಡುತ್ತಾ ಆ ನೋವನ್ನು ಮರೆಸಲು ನಾನು 8ನೇ ವರ್ಷದಲ್ಲಿರುವಾಗಲೇ ನನ್ನನ್ನು ಭರತನಾಟ್ಯಾ ತರಗತಿಗೆ ಸೇರಿಸಿ ನನ್ನನ್ನು ಒಬ್ಬ ನೃತ್ಯಗಾರ್ತಿಯಾಗಿ ಮಾಡಿದ್ದಾರೆಂದು ಶಾಯಿನಾ ಲೆಬಾನ ಫೇಸ್ಬುಕ್ ಪೇಜಲ್ಲಿ ಬರೆದುಕೊಂಡಿದ್ದಾರೆ..! ಶಾಯಿನಾ ಲೆಬಾನ ಇಡೀ ಭಾರತದಾದ್ಯಂತ ನೃತ್ಯ ಪ್ರದರ್ಶನ ನೀಡಿರೋ ಇವರು ಚೀನಾದಲ್ಲಿ ಬೆಲ್ಲಿ ಡ್ಯಾನ್ಸ್ ಕಾಂಪಿಟೇಷನ್ನಲ್ಲಿ ಪ್ರಶಸ್ತಿಯನ್ನೂ ಪಡೆದಿದ್ದಾರಂತೆ…!
ಶಾಯಿನಾ ಲೆಬಾನರ ತಂದೆ-ತಾಯಿ ಬೇರೆ ಬೇರೆ ಧರ್ಮೀಯರು. ಪ್ರೀತಿಸಿ ಮದುವೆ ಆಗಿದ್ದರು..! ಆದರೆ ಹೆಣ್ಣು ಮಕ್ಕಳಿಗೆ ಜನ್ಮ ಕೊಟ್ಟಿದ್ದೀ ಅಂತ ಹೆಂಡತಿಗೆ ಹಿಂಸಿಸಿದನೆಂದರೆ ಆತನೆಂಥಾ ಕಟುಕ..! ಮನಸ್ಸೇ ಇಲ್ಲದ ಮೃಗ..! ಆದರೆ ಶಾಯಿನಾ ಲೆಬಾನರ ತಾಯಿಗೆ ನಮಸ್ಕರಿಸಲೇ ಬೇಕು..! ಇಬ್ಬರು ಮಕ್ಕಳನ್ನು ಉಟ್ಟ ಬಟ್ಟೆಯಲ್ಲೇ ಮನೆಯಿಂದ ರಾತ್ರೋರಾತ್ರಿ ಕರ್ಕೊಂಡು ಬಂದು ಕಷ್ಟಪಟ್ಟು ಸಾಕಿ ಬೆಳೆಸಿದ್ದಾರೆಂದರೆ ನಿಜಕ್ಕೂ ಗ್ರೇಟ್..! ಇವರಿಗೆ ಕೋಟಿ ಕೋಟಿ ನಮನ. ಶಾಯಿನಾ ಲೆಬಾನ ಆಕೆ ಅಮ್ಮ, ತಂಗಿ ಎಲ್ಲರಿಗೂ ಒಳ್ಳೇದಾಗಲಿ.

  • ಶಶಿಧರ ಡಿ ಎಸ್ ದೋಣಿಹಕ್ಲು

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಎಂದೂ ತೆರಿಗೆ ಕಟ್ಟದ ಗಲ್ಫ್ ಪ್ರಜೆಗಳು ಇನ್ಮುಂದೆ ತೆರಿಗೆಕಟ್ಟಲೇ ಬೇಕು..!

ಶ್ರೀಲಂಕಾದಲ್ಲಿ ಭಾರತದ ಧ್ವಜ ಹಾರಿಸಿದ ಕನ್ನಡಿಗ ರಘು..!

ಸಿನಿಮಾಕಥೆಯಂತಿದ್ದರೂ ಇದು ಸಿನಿಮಾ ಸ್ಟೋರಿಯಲ್ಲ..! ಇದು ಇಂಡಿಯಾ, ಸ್ವೀಡನ್ ಲವ್ ಸ್ಟೋರಿ..!

ಇಲ್ಲಿ ಉಳಿದುಕೊಳ್ಳೋಕೆ ಬೇಕಾಗಿದ್ದನ್ನೆಲ್ಲಾ ಸರ್ಕಾರವೇ ಕೊಟ್ಟು, ಸಂಬಳವನ್ನೂ ನೀಡುತ್ತೆ..!

ಭಾರತದ ಅಗ್ರ ಸೆಲೆಬ್ರಿಟಿ ಯಾರು ಗೊತ್ತಾ..? ಟಾಪ್ 10 ಪಟ್ಟಿಯಲ್ಲಿದ್ದಾಳೆ ನಮ್ಮ ಕನ್ನಡತಿ..!

ಬಿಇಡ್ ಗೆ ಸೇರಿದ್ದು 12,800 ವಿದ್ಯಾರ್ಥಿಗಳು, ಪಾಸ್ ಆದವರು 20,000..! ಇದು ಡಾ. ಬಿ.ಆರ್ ಅಂಬೇಡ್ಕರ್ ಯೂನಿವರ್ಸಿಟಿಯ ಕರ್ಮಕಾಂಡ..!

ಈ ವ್ಯಕ್ತಿಗೆ ನಿದ್ದೆ ಮಾಡುವುದೇ ಮರೆತುಹೋಗಿದೆ..! 40 ವರ್ಷದಿಂದ ನಿದ್ದೆಯೇ ಮಾಡಿಲ್ವಂತೆ ಈ ಭೂಪ..!

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...