ಬಿಗ್‍ಬಾಸ್ ಸೀಸನ್-4 ಗ್ರಾಂಡ್ ಫೀನಾಲೆಗೆ ಕೌಂಟ್‍ಡೌನ್ ಶುರುವಾಗಿದೆ. ಸೀಸನ್-4ನ ಗ್ರಾಂಡ್ ಫಿನಾಲೆಗೆ ಈಗಾಗ್ಲೆ ವೇದಿಕೆಯೂ ಕೂಡ ಸಿದ್ಧವಾಗಿ ನಿಂತಿದೆ. ಕುತೂಹಲ ಘಟ್ಟದಲ್ಲಿರೋ ಈ ರಿಯಾಲಿಟಿ ಶೋನಲ್ಲಿ ಈ ಬಾರಿಯ ವಿನ್ನರ್ ಯಾರಾಗ್ತಾರೋ ಏನೋ ಎಂಬ ಗೊಂದಲವು ಕೋಟ್ಯಾಂತರ ವೀಕ್ಷಕರಲ್ಲಿ ಮನೆ ಮಾಡಿದೆ. ಇಷ್ಟೆಲ್ಲಾ ಬೆಳವಣಿಗೆಯ ನಡುವೆಯೂ ಬಿಗ್‍ಬಾಸ್ ಮನೆಯಲ್ಲಿ ಅಚ್ಚರಿಯ ಎಲಿಮಿನೇಟ್ ನಡೆದು ಹೋಗಿದೆಯಂತೆ..! ಫಿನಾಲೆಗೆ ಇನ್ನು ನಾಲ್ಕು ದಿನವೇ ಬಾಕಿ ಉಳಿದಿರುವಾಗ್ಲೆ ಬಿಗ್‍ಬಾಸ್ ಮನೆಯಿಂದ ಶಾಲಿನಿಗೆ ಗೇಟ್‍ಪಾಸ್ ನೀಡಿ ಇನ್ನಷ್ಟು ಅಚ್ಚರಿ ಮೂಡಿಸಿದ್ದಾರೆ..! ಹೌದು.. ಸೋಮವಾರ ಮಧ್ಯರಾತ್ರಿ ಯಾರೂ ಊಹಿಸಲೂ ಸಾಧ್ಯವಾಗದ ನಿರ್ಧಾರವೊಂದು ಬಿಗ್‍ಬಾಸ್ ತೆಗೆದುಕೊಂಡಿದ್ದು ಮನೆಯಿಂದ ಶಾಲಿನಿ ಹೊರಬಿದ್ದಿದ್ದಾರಂತೆ..! ಮಿಡ್‍ವೀಕ್‍ನಲ್ಲಿ ಎಲಿಮಿನೇಟ್ ಆಗಲು ಮೋಹನ್ ಹೊರತು ಪಡಿಸಿದ್ರೆ ಪ್ರಥಮ್, ರೇಖಾ, ಶಾಲಿನಿ ಕೀರ್ತಿ ಹಾಗೂ ಮಾಳವಿಕ ಹೆಸರು ನಾಮಿನೇಟ್ ಆಗಿತ್ತು. ಎಲಿಮಿನೇಶನ್ ಪ್ರಕ್ರಿಯೆಗೆ ಇನ್ನು ಎರಡು ಮೂರು ದಿನ ಇರ್ಬೋದು ಅಂತ ಯೋಚನೆ ಮಾಡಿದ್ದ ಮನೆಯ ಸದಸ್ಯರಿಗೆ ಬಿಗ್‍ಬಾಸ್ ಸೋಮವಾರ ರಾತ್ರಿಯೇ ಶಾಲಿನಿ ಅವರನ್ನು ಎಲಿಮಿನೇಟ್ ಮಾಡಿ ಗ್ರಾಂಡ್ ಫಿನಾಲೆಗೆ ಐದು ಜನರನ್ನು ಉಳಿಸಿಕೊಂಡಿದ್ದಾರಂತೆ. ಇದೇ ಭಾನುವಾರ ಬಿಗ್‍ಬಾಸ್ ವಿನ್ನರ್ ಯಾರು ಅನ್ನೋದು ತಿಳಿಯಲಿದೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಹಂಪಿ ಸನ್‍ಲೈಟ್ & ಶ್ಯಾಡೋಸ್ ಚಿತ್ರಪ್ರದರ್ಶನ
ಈ ಬಾರಿಯ ಬಿಗ್‍ಬಾಸ್ ಫೈನಲ್ ಗೆಸ್ಟ್ ಯಾರು ಗೊತ್ತಾ..?
ಮಾಜಿ ಕ್ರಿಕೆಟಿಗ ವೀರು ಈಗ ಜಬರ್ದಸ್ತ್ ಸಿಂಗರ್
ಜಯಲಲಿತ ಜೀವನಾಧಾರಿತ ಸಿನಿಮಾ ಮಾಡ್ತಾರಂತೆ ಆರ್.ಜಿ.ವಿ..!
LIVE : ಬಿಗ್‍ಬಾಸ್ ಕನ್ನಡ ಸೀಸನ್-04 ಈ ಮೂವರಲ್ಲಿ ಫೈನಲ್ ತಲಪುವವರು ಯಾರು.?