ಅವಳು ‘ಆಕಸ್ಮಿತ’ ..ಅವನಿಗೆ ಸಿಕ್ಕಿದ್ದೂ ಆಕಸ್ಮಿಕ..! ಸಿನಿಮಾ ಥಿಯೇಟರ್ನಲ್ಲಿ ಸಿನಿಮೀಯ ರೀತಿಯಲ್ಲಾದ ಅವಳ ಪರಿಚಯ, ಸ್ನೇಹ, ಸ್ನೇಹದಿಂದ ಪ್ರೀತಿ , ಪ್ರೀತಿಯಿಂದ ಮದುವೆ…! ಸಾರಿ, ಸಾರಿ ಇನ್ನು ಮದ್ವೆ ಆಗಿಲ್ಲ..ಆಗ್ತಾರೋ ಇಲ್ಲ ಗೊತ್ತಿಲ್ಲ..! ಆಕಸ್ಮಿಕ ಪ್ರೇಮ್ ಕಹಾನಿಯಲ್ಲೊಂದು ಟ್ವಿಸ್ಟ್ ಸಿಕ್ಕಿದೆ..!
ಹ್ಞೂಂ, ಇದು ಆಕಾಶ್, ಆಕಸ್ಮಿತ ಲವ್ ಸ್ಟೋರಿ..!
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ -2 ಸಿನಿಮಾ ಬಿಡುಗಡೆಯಾದ ಮೊದಲವಾರ..! ಬೆಂಗಳೂರಿನ ಪ್ರತಿಷ್ಠಿತ ಮಾಲ್ ವೊಂದರಲ್ಲಿ ಸಿನಿಮಾ ಪ್ರದರ್ಶನವಾಗುತ್ತಿತ್ತು. ವಾರದ ರಜೆಯಲ್ಲಿ ಆಕಾಶ್ ಗೆಳೆಯ ಅಭಿನವ್ ಜೊತೆ ಸಿನಿಮಾಕ್ಕೆ ಹೋಗಿದ್ದ..! ಸಿನಿಮಾ ಪರದೆ ಪ್ರವೇಶಿಸಿರಲಿಲ್ಲ. ಫೇಸ್ ಬುಕ್ ಗೆ ಪೋಸ್ಟ್ ಮಾಡೋಕೆ ಆಕಾಶ್ ಅಭಿನವ್ ಜೊತೆಗೊಂದು ಸೆಲ್ಫಿ ತಗೊಂಡ.
ಅಭಿನವ್ ಆಕಾಶ್ ನಲ್ಲಿದ್ದ ಕೆಲವು ಅಪ್ಲಿಕೇಶನ್, ಫೋಟೋಸ್, ಹಾಡುಗಳನ್ನು ತನಗೆ ಶೇರ್ ಮಾಡೋಕೆ ಹೇಳಿ ಶೇರಿಟ್ ಆನ್ ಮಾಡಿದ. ಆಕಾಶ್ ಯಾವ್ ಆ್ಯಪ್ ಬೇಕು,ಯಾವ್ ಸಾಂಗ್ಸ್ ಬೇಕು, ಯಾವ್ ಫೋಟೋ ಬೇಕು ಅಂತ ಅಭಿನವ್ಗೆ ಕೇಳಿ, ಒಂದೊಂದೇ ಸೆಂಡ್ ಮಾಡಿದ. ಆದ್ರೆ ಅದ್ಯಾವುದು ಅಭಿನವ್ ಸೆಲ್ಗೆ ಹೋಗಿಲ್ಲ..! ಮಿಸ್ಸಾಗಿ ಶೇರ್ ಇಟ್ನಲ್ಲಿ ಬೇರೆಯವರಿಗೆ ಆಕಸ್ಮಿಕವಾಗಿ ಕಳುಹಿಸಿ ಬಿಟ್ಟಿದ್ದ..!
ಅದನ್ನು ರಿಸೀವ್ ಮಾಡಿದವ್ರು ಕೂಡಲೇ ಶೇರ್ ಇಟ್ನಲ್ಲಿ ಕಂಡ ಇ-ಮೇಲ್ ಗೆ ಮೆಸೇಜ್ ಹಾಕಿದ್ರು..! ಆಕಾಶ್ ಜಿ-ಮೇಲ್ ಗೆ ಮೆಸೇಜ್ ಬಂತು..! ಸಾರಿ, ಮಿಸ್ ಆಯ್ತು, ಫ್ರೆಂಡ್ ಗೆ ಶೇರ್ ಮಾಡೋಕೆ ಹೋಗಿ ನಿಮಗೆ ಸೆಂಡ್ ಆಯ್ತು ಅಂದ..! ಸರಿ, ಅಂತ ಅತ್ತಿಂದ ಮೇಲ್ ಬಂತು.
ಆಕಸ್ಮಿತ ಎಂಬ ಹೆಸರಿನಿಂದ ಪ್ರಾರಂಭವಾಗಿದ್ದ ಆ ಜಿ-ಮೇಲ್ ಅಕೌಂಟ್ನ ಪ್ರೊಫೈಲ್ ಪಿಕ್ ನೋಡಿದ ಆಕಾಶ್ಗೆ ಹಾರ್ಟ್ ಬೀಟ್ ಜಾಸ್ತಿಯಾಯ್ತು..! ಕಣ್ಣಲ್ಲಿ ಫೋಟೋ ಕ್ಲಿಕ್ಕಿಸಿದ..! ಅಷ್ಟೊತ್ತಿಗೆ ಕೋಟಿಗೊಬ್ಬ- 2 ಇಂಟ್ರುವಲ್ ಬಂದಾಗಿತ್ತು..
ನೆನದವರ ಮನದಲ್ಲಿ ಎಂಬಂತೆ ಪಾಪ್ ಕಾರ್ನ್ ತಗೊಳ್ತಾ ಇರುವಾಗ ಪಕ್ಕದಲ್ಲಿಯೇ ಆಕಸ್ಮಿತ ನಿಂತಿದ್ಲು..!
ಮಾತನಾಡಿಸೋಕಂತ ಅನ್ಕೊಂಡ.. ಆದ್ರೆ ಹಾಳಾದ ಭಯ..!
ಸುಮ್ನೆ, ಪಾಪ್ ಕಾರ್ನ್ ತಿನ್ತಾ ಗೆಳೆಯ ಅಭಿನವ್ ಹೆಗಲ ಮೇಲೆ ಕೈ ಹಾಕಿಕೊಂಡು ಒಳಬಂದ..! ಆಕಸ್ಮಿತ ಸಹ ಬಂದಳು…! ಅವಳು ಅವನ ಎದುರು ಸೀಟಲ್ಲೇ ಕುಂತಿದ್ಲು..!
ಕೂಡಲೇ ತನ್ನ ಜಿ- ಮೇಲ್ ಅಕೌಂಟ್ ಪ್ರೊಫೈಲ್ ಗೆ ಈಗಾಗಲೇ ಅವಳಿಗೆ ಕಳುಹಿಸಿದ್ದ ಫೋಟೋವನ್ನು ಹಾಕಿದ.
ಅವಳು ಶೇರಿಟ್ ಆನ್ ಮಾಡಿಟ್ಟು ಕೊಂಡಿರೋದನ್ನ ನೋಡಿ ಶೇರ್ ಇಟ್ಟಲ್ಲಿ ರನ್ನ ಸಿನಿಮಾದ ‘ಸೀರೇಲಿ ಹುಡುಗಿರೀನಾ ನೋಡಲೇ ಬಾರದು….” ಹಾಡನ್ನು ಸೆಂಡ್ ಮಾಡಿದ..!
ಆಕಸ್ಮಿಕ ಅಂತ ಈ ಬಾರಿ ಆಕಾಶ್ ಹೇಳೋಕೆ ಅವಕಾಶ ಕೊಡಲಿಲ್ಲ ಆಕಸ್ಮಿತ..!
ಜಿ- ಮೇಲ್ ಗೆ ಮತ್ತೆ ಮೇಲ್ ಮಾಡಿದ್ಲು..ಆಗ ಮಿಸ್, ಈಗ ಉದ್ದೇಶ ಪೂರ್ವಕವಾಗಯೇ ಕಳುಹಿಸಿದ್ದೀರಿ..ನೀವು ಯಾರು? ಆಟ ಆಡಿಸಿದ್ರೆ ಕಂಪ್ಲೇಂಟ್ ಕೊಡ್ತೀನಿ ಅಂತ ಆ ಮೇಲ್ ನಲ್ಲಿತ್ತು..
ಆಕಾಶ್ ಸಾರಿ ಎಂದು ಸುಮ್ಮನಾದ..
ಮರುದಿನ gm ಅಂತ ಇಹ-ಪರ ಮೇಲ್ ಮಾಡಿದ..! ಅವಳು ಕೋಪಿಸಿಕೊಂಡಳು. ಆಗ, ಆಕಾಶ್, ಮೊದಲು ಶೇರ್ ಇಟ್ನಲ್ಲಿ ಆಕಸ್ಮಿಕವಾಗಿಯೇ ಕಳುಹಿಸಿದ್ದು. ಜಿ ಮೇಲ್ ಅಕೌಂಟ್ ನಲ್ಲಿ ನಿಮ್ ಫೋಟೋ ನೋಡಿದೆ..ಆಮೇಲೆ ಇ
ಇಂಟರ್ ವಲ್ ನಲ್ಲಿ ನಿಮ್ಮ ನೋಡಿದೆ..ಮತ್ತೆ ಶೇರಿಟ್ ನಲ್ಲಿ ಬೇಕಂತ ಹಾಡು ಶೇರ್ ಮಾಡಿದೆ ಎಂದು ಹೇಳಿದ.
ಹೀಗೇ ಇ-ಮೇಲ್ ನಲ್ಲಿ ಮಾತು ಕತೆ ಆದ್ಮೇಲೆ.
ವಾಟ್ಸಪ್ ನಂಬರ್ ವಿನಿಮಯ ಆಯ್ತು..ಭೇಟಿ, ಪರಿಚಯ ಎಲ್ಲವೂ ಆಯ್ತು..! ಈಗ ಅವರಿಬ್ಬರು ಪ್ರೇಮಿಗಳು..
ಇಂಜಿನಿಯರ್ ಆಕಸ್ಮಿತ, ಬ್ಯಾಂಕ್ ಮ್ಯಾನೇಜರ್ ಆಕಾಶ್ ಮದುವೆಗೆ ತಯಾರಾಗಿದ್ದಾರೆ.. ಆದರೇ..ಈ ರಿಯಲ್ ಲವ್ ಸ್ಟೋರಿಲೀ ಇನ್ನೊಂದು ಸಿನಿಮೋಯ ಟ್ವಿಸ್ಟ್ ಸಿಕ್ಕಿದೆ ..ಆಕಾಶ್ನ ಮೊದಲ ಲವ್ವರ್ ಪ್ರತೀಕ್ಷ ಮತ್ತೆ ಬಂದಿದ್ದಾಳೆ..! ಅವಳು ಆಕಸ್ಮಿತಾಳ ದೊಡ್ಡಪ್ಪನ ಮಗಳಂತೆ..!
Like us on Facebook The New India Times
POPULAR STORIES :
ಎಲ್ಲಾ ಮಾಧ್ಯಮಗಳಿಗೆ ರಾಕಿಂಗ್ ಸ್ಟಾರ್ ಓಪನ್ ಚಾಲೆಂಜ್..! #Video
ಆ್ಯಪಲ್ ಕಂಪನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ನ ಕೊನೆಯ ಪತ್ರ
ಅಸಲಿಗೆ ‘ಒಳ್ಳೆಯ ಹುಡುಗ’ನ ಹೆಸರು ಪ್ರಥಮ್ ಅಲ್ಲ..! ಮತ್ತೇನು?
ಮೊಬೈಲ್ ಚಾರ್ಜರನ್ನು ವೈರ್‍ಲೆಸ್ ಚಾರ್ಜರ್ ಆಗಿ ಮಾಡೋ ಸಿಂಪಲ್ ವಿಧಾನ..!