ಸಂಸದ ಶಶಿ ತರೂರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಸೋಶಿಯಲ್ ಮೀಡಿಯಾ ಖಾತೆಗಳನ್ನು ಹ್ಯಾಕ್ ಮಾಡೋ ಆಸೆ ಇದೆಯ? ಈ ಪ್ರಶ್ನೆ ಮೂಡಲು ಶಶಿತರೂರು ಸಂದರ್ಶನ ಒಂದರಲ್ಲಿ ನೀಡಿರೋ ಹೇಳಿಕೆ..!
ನಾನು ಮೋದಿ ಅವರ ಅಕೌಂಟ್ ಗಳನ್ನು ಹ್ಯಾಕ್ ಮಾಡಿ ಸತ್ಯಗಳನ್ನು ಹೇಳ ತೊಡಗಿದರೆ ಹೇಗಿರುತ್ತೆ ಎನ್ನೋದು ಊಹಿಸಿಕೊಳ್ಳಿ ಅಂತ ತರೂರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ನಿಮಗೆ ಅವಕಾಶ ಸಿಕ್ಕರೆ ಯಾರ ಸೋಶಿಯಲ್ ಮೀಡಿಯಾ ಖಾತೆಗಳನ್ನು ಹ್ಯಾಕ್ ಮಾಡಲು ಬಯಸಿತ್ತೀರಿ ಎಂಬ ಪ್ರಶ್ನೆಗೆ ಶಶಿ ತರೂರು ಈ ಉತ್ತರ ನೀಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗ್ತಿದೆ.