ಟೀಮ್ ಇಂಡಿಯಾದ ಓಪನರ್ ಶಿಖರ್ ಧವನ್ 10 ವರ್ಷಗಳ ಬಳಿಕ ತವರು ಟೀಮ್ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡಲಿದ್ದಾರೆ.
2008 ರ ತಮ್ಮ ಮೊದಲ ಐಪಿಎಲ್ ನಲ್ಲಿ ಧವನ್ ಡೆಲ್ಲಿ ಪರ ಆಡಿದ್ದರು.
ಸದ್ಯ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಇದ್ದಾರೆ. ಇದೀಗ ಇವರು ಮರಳಿ ಡೆಲ್ಲಿ ತಂಡ ಸೇರುತ್ತಿದ್ದಾರೆ ಎಂದು ಹೈದರಾಬಾದ್ ಫ್ರಾಂಚೈಸಿ ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದೆ.
ವೇತನದ ಬಗ್ಗೆ ಧವನ್ ಗೆ ಅಸಮಧಾನ ಇದೆ ಎಂದು ತಿಳಿದುಬಂದಿದೆ.
ಕಳೆದ ಬಾರಿಯ ಹರಾಜಿನಲ್ಲಿ ಧವನ್ ಅವರನ್ನ ರೈಟ್ ಟು ಮ್ಯಾಚ್ ಬಳಸಿ ಡೆಲ್ಲಿ ಫ್ರಾಂಚೈಸಿ 5.2 ಕೋಟಿ ರೂ ಗೆ ಖರೀದಿಸಿತ್ತು.
ಹೀಗಾಗಿ ಧವನ್ ಬೇರೆ ಫ್ರಾಂಚೈಸಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಡೆಲ್ಲಿ ಫ್ರಾಂಚೈಸಿ ಧವನ್ ಅವ್ರನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳಲಿದೆ ಎನ್ನಲಾಗಿದೆ.