ತವರು ಮನೆಯರು ಆಸ್ತಿ ನೀಡಿಲ್ಲ ಎಂದು ಪತಿ ತನ್ನ ಗರ್ಭಿಣಿ ಹೆಂಡ್ತಿಗೆ ವಿಷ ನೀಡಿ ಕೊಂದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಹೊನ್ನಾಳಿ ತಾಲೂಕಿನ ಗೋವಿನಕೋವಿ ಗ್ರಾಮದ ರಾಜಪ್ಪ ಅವರ ಮಗಳು ನಳಿನಾ ಮೃತ ದುರ್ದೈವಿ.
ಇಂಜಿನಿಯರಿಂಗ್ ಪದವೀಧರೆ ಆಗಿರುವ ನಳಿನಾ ಅವರನ್ನು ಚೇತನ್ ಎಂಬಾತ ಪ್ರೀತಿಸಿ ಕಳೆದ ಏಪ್ರಿಲ್ ನಲ್ಲಿ ಮೈಸೂರಿಗೆ ಕರೆದುಕೊಂಡು ಹೋಗಿ ಮದ್ವೆ ಆಗಿದ್ದ. ಬಳಿಕ ವರದಕ್ಷಿಣಿಗೆ ಪೀಡಿಸುತ್ತಿದ್ದ ಎನ್ನಲಾಗಿದೆ.
ಕೊನೆಗೆ ನಳಿನಾ ಮನೆಯವರು ಪಾಲುಕೊಟ್ಟು ಜಂಟಿ ಖಾತೆ ಮಾಡಿದ್ರು. ಆದರೆ, ಎಲ್ಲಾ ಆಸ್ತಿ ತನ್ನ ಹೆಸರಿಗೇ ಬೇಕು, ಮಾರಾಟ ಮಾಡಬೇಕು ಎಂದು ಚೇತನ್ ಒತ್ತಾಯಿಸುತ್ತಿದ್ದನಂತೆ. ಇದಕ್ಕೆ ಒಪ್ಪದಾಗ ತಾಯಿ ಮತ್ತು ಅಜ್ಜನ ಜೊತೆ ಸೇರಿ ನಳಿನಾ ಅವರಿಗೆ ಬಲವಂತವಾಗಿ ವಿಷ ಕುಡಿಸಿ , ಸಾಯಿಸಿದ್ದಾನೆ. ನಳಿನಾ 7ತಿಂಗಳ ಗರ್ಭಿಣಿಯಾಗಿದ್ದರು. ಮಗು ಕೂಡ ಸಾವನ್ನಪ್ಪಿದೆ.