ಯೂ ಟರ್ನ್ ಚಿತ್ರ ಸೂಪರ್ ಹಿಟ್ ಆಗಿದ್ದು… ಹಾಗೇ ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ ಚಿತ್ರಕ್ಕೆ ಜನ ಜೈ ಅಂದಿದ್ದು ಈಗ ಹಳೇ ಸುದ್ದಿ ಆದ್ರೆ. ಆದ್ರೆ ಸದ್ಯದ ಬಿಸಿ ಬಿಸಿ ಸುದ್ದಿ ಅಂದ್ರೆ ಸಿಂಪಲ್ಲಾಗಿ ಇನ್ನೊಂದ್ ಲವ್ ಸ್ಟೋರಿಯ ಸಿಂಪಲ್ ಸುನಿ ಮತ್ತು ಯೂ ಟರ್ನ್ ಬೆಡಗಿ ಶ್ರದ್ಧಾ ಕಾಂಬಿನೇಷನ್ ಅಲ್ಲಿ ಆಪರೇಶನ್ ಅಲಮೇಲಮ್ಮ ಅನ್ನೋ ಚಿತ್ರ ಸೆಟ್ಟೇರಿ ಈಗಾಗ್ಲೇ ಸೈಲಾಂಟಾಗಿ ಚಿತ್ರತಂಡ ಫಸ್ಟ್ ಶೆಡ್ಯೂಲ್ ಶೂಟಿಂಗ್ ಕೂಡ ಮುಗಿಸಿಬಿಟ್ಟಿದೆ.
ಸಿಂಪಲ್ ಸುನಿ ನಿರ್ದೇಶನದ ಈ ‘ಆಪರೇಶನ್ ಅಲಮೇಲಮ್ಮ’ ಹೆಸರೇ ಇಷ್ಟು ಇಂಟರೆಸ್ಟಿಂಗ್ ಆಗಿದೆ ಅಂದ್ಮೇಲೆ ಚಿತ್ರ ಇನ್ನೆಷ್ಟು ಸ್ಟೆಷಲ್ ಆಗಿರಬೇಡ ಹೇಳಿ. ಮೊದಲೇ ಸುನಿ ಚಿತ್ರ ಅಂದ್ಮೇಲೆ ಅಲ್ಲಿ ವೆರೈಟಿ ಇರತ್ತೆ ಅನ್ನೋ ಗ್ಯಾರಂಟಿ ನಮ್ಮ ಜನಕ್ಕೆ. ಸೋ ಈ ಬಾರಿಯೂ ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತ ಕಥೆ ಹೆಣೆದಿದ್ದಾರೆ ಈ ಪ್ರತಿಭಾವಂತ ನಿರ್ದೇಶಕ.
ಇನ್ನು ಈ ‘ಆಪರೇಶನ್ ಅಲಮೇಲಮ್ಮ’ ಚಿತ್ರದಲ್ಲಿ ತುಂಬಾ ಸಸ್ಪೆನ್ಸ್ ಎಲಿಮೆಂಟ್ಸ್ ಇದ್ಯಂತೆ ಹಾಗೆ ಇದೊಂದು ಲೈಟ್ ಹಾರ್ಟೆಡ್ ಸಿನಿಮಾ ಅನ್ನೋದು ಚಿತ್ರತಂಡದ ಮಾತು. ಕಿಡ್ನಾಪ್ ಕಥೆಯೊಂದಕ್ಕೆ ತಮ್ಮದೇ ಸ್ಟೈಲ್‌ನಲ್ಲಿ ರೋಚಕತೆಯ ಟಚ್ ಕೊಟ್ಟಿರೋ ಸುನಿ ಕಿರುತೆರೆಯ ನಟ ಮನೀಷ್ ರಿಷಿ ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಜರ್ನಲಿಸ್ಟ್ ಆಗಿ ಪತ್ತೆದಾರಿ ಪಾತ್ರ ಮಾಡಿದ್ದ ಶ್ರದ್ಧಾ ಇಲ್ಲಿ ಸ್ಕೂಲ್ ಟೀಚರ್ ಆಗಿ ಪಾಠ ಮಾಡಲಿದ್ದಾರೆಪಾತ್ರವಂತೆ.
- ಶ್ರೀ
POPULAR STORIES :
ಸಲ್ಲು ವೆಡ್ಸ್ ಲೂಲಿಯಾ… ಕೊಹ್ಲಿ ವೆಡ್ಸ್ ಅನುಷ್ಕಾ….! ಇದಕ್ಕೆಲ್ಲಾ ಕಾರಣ ಸುಲ್ತಾನ್ ಚಿತ್ರ
ಚಿತೆಯಲ್ಲಿ ಮಲಗಿದ್ದ ವ್ಯಕ್ತಿ ಮತ್ತೆ ಜೀವಂತವಾದ..??
ಪಾಪಿಗಳು ಅಟ್ಟಹಾಸ ಮೆರೆದ ವಿಪರ್ಯಾಸದ ರಿಯಲ್ ಸ್ಟೋರಿ..!
ಕೋಹ್ಲಿ ಪ್ರಕಾರ ಪರ್ಫೆಕ್ಟ್ ಟೆಸ್ಟ್ ಬೌಲರ್ ಯಾರು?
ನಾಯಿಯನ್ನು ಟೆರೆಸ್ ಮೇಲಿನಿಂದ ಎಸೆದ ಮೃಗ ಯಾರು ಗೊತ್ತಾ..?
ಕುಂಬ್ಳೆ ಸವಾಲು ಗೆದ್ದ ಒಬ್ಬನೇ ಒಬ್ಬ ಆಟಗಾರ ಯಾರು? ವಿರಾಟ್ ಕೋಹ್ಲಿಯೇ ಗೆಲ್ಲದ ಸವಾಲು ಗೆದ್ದ ಯುವ ಆಟಗಾರ..!
ಎಲ್ಲರ ಮನಗೆದ್ದ ಧೋನಿಯ ಸ್ಪೂರ್ತಿದಾಯಕ ಮಾತುಗಳು..!