ಶೃತಿ ಹರಿಹರನ್, ಇತ್ತೀಚಿಗೆ ಸಿನಿಮಾಗಿಂತ ಹೆಚ್ಚು ಸುದ್ದಿಯಾಗಿದ್ದು ಮೀಟೂ ವಿವಾದದಲ್ಲಿ. ಮೀಟೂ ಪ್ರಕರಣದಲ್ಲಿ ಹೆಚ್ಚು ಕಾಣಿಸಿಕೊಂಡ ಶೃತಿ, ಇದರಲ್ಲೇ ಮುಳುಗಿ ಹೋಗಿದ್ದಾರೆ. ಹೀಗಿದ್ದಾಗ ಮೀಟೂ ಗಲಾಟೆಯ ನಡುವಲ್ಲಿ ಶ್ರುತಿ ಹರಿಹರನ್ ಕೈಲಿದ್ದ ಕನ್ನಡದ ಅವಕಾಶಗಳೆಲ್ಲವೂ ಕೈ ಜಾರಿ ಹೋಗುತ್ತಿದೆ.ದರ್ಶನ್, ಸುದೀಪ್ ಸೇರಿದಂತೆ ದೊಡ್ಡ ಸ್ಟಾರ್ ನಟರ ಜೊತೆ ನಟಿಸಿದ ನಟಿ ಶೃತಿ ಹರಿಹರನ್ ಇನ್ಮುಂದೆ ಕನ್ನಡ ಚಿತ್ರರಂಗದಿಂದ ಕಣ್ಮರೆಯಾಗ್ತಾರೆ ಅನ್ನೋ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬರ್ತಿದೆ. ಇಂತಹ ಸಂದರ್ಭದಲ್ಲಿ ಶೃತಿ ಅಭಿನಯಿಸಬೇಕಿದೆ ಚಿತ್ರಕ್ಕೆ ಹೊಸ ನಾಯಕಿಯನ್ನು ಕರೆ ತರಲಾಗಿದೆಯಂತೆ..
ಬಿ.ಎಸ್. ಲಿಂಗದೇವರು ನಿರ್ದೇಶನದ ‘ದಾರಿ ತಪ್ಪಿಸು ದೇವರೇ‘ ಚಿತ್ರದಿಂದ ಶ್ರುತಿಯನ್ನು ಕೈ ಬಿಡಲಾಗಿದೆ ಎನ್ನುವ ಸುದ್ದಿ ಈ ಹಿಂದೆಯೇ ಹೊರ ಬಿದ್ದಿತ್ತು. ಈಗ ಈ ಸುದ್ದಿ ನಿಜವಾಗಿದೆ, ದಾರಿ ತಪ್ಪಿಸು ದೇವರೇ ಚಿತ್ರಕ್ಕೆ ರಾಶಿ ಮಹದೇವ್ ಆಯ್ಕೆಯಾಗಿದ್ದಾರೆ. ವಿಜಯ್ ರಾಘವೇಂದ್ರ ಅಭಿನಯದ ಪರದೇಸಿ ಕೇರಾಫ್ ಲಂಡನ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ರು ಈ ರಾಶಿ ಮಹದೇವ್.